Breaking: ಮುಜಾಫರ್‌ಪುರ ಹೋಟೆಲ್‌ನಲ್ಲಿ ಭಾರಿ ಅಗ್ನಿ ಅವಘಡ; 3 ಜನರ ರಕ್ಷಣೆ
ಪಾಟ್ನಾ, ಸೆಪ್ಟೆಂಬರ್ 21: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಬ್ರಹ್ಮಪುರ ಪೊಲೀಸ್ ಠಾಣಾ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
"3 ಜನರನ್ನು ಬೆಂಕಿಯಿಂದ ರಕ್ಷಿಸಿದ್ದೇವೆ. ಕೆಲ ಗಂಟೆಗಳ ಬಳಿಕ ಇದೀಗ ಬೆಂಕಿ ನಂದಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ," ಎಂದು ಅಗ್ನಿಶಾಮಕ ಸಿಬ್ಬಂದಿ ಕೃಷ್ಣ ಯಾದವ್ ಹೇಳಿದ್ದಾರೆ.
ಬಿಹಾರದಲ್ಲಿ ಮಂಗಳವಾರ ತಡರಾತ್ರಿ ನಡೆದಿರುವ ಅಗ್ನಿ ಅವಘಡದಲ್ಲಿ ಯಾವುದೇ ರೀತಿ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ದೌಡಾಸಿದ ಅಗ್ನಿ ಶಾಮಕ ಸಿಬ್ಬಂದಿಯು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಸಿಕಂದರಾಬಾದ್ ಹೋಟೆಲ್ ನಲ್ಲೂ ದುರಂತ:
ಸಿಕಂದರಾಬಾದ್ ಬಳಿಯ ಹೋಟೆಲ್ ಲಾಡ್ಜ್ ವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಇ -ಬೈಕ್ ಶೋರೂಮ್‌ನಲ್ಲಿ ಕಾಣಿಸಿಕೊಂಡ ಬೆಂಕಿ ವ್ಯಾಪ್ತಿಸಿ ಹೋಟೆಲ್ ತನಕ ಹಬ್ಬಿದ್ದು, ಏಳು ಮಂದಿಯನ್ನು ಬಲಿ ಪಡೆದುಕೊಂಡಿದೆ.

ಸೋಮವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದರೆ, 10 ಮಂದಿಗೆ ತೀವ್ರಗಾಯಗಳಾಗಿವೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಸಿ. ವಿ ಆನಂದ್ ಹೇಳಿದ್ದರು.












Click it and Unblock the Notifications