Get Updates
Get notified of breaking news, exclusive insights, and must-see stories!

ಒಂದೇ ಕಾಲಿನಲ್ಲಿ ಶಾಲೆಗೆ ಹೋಗುತ್ತಿದ್ದ ಬಿಹಾರದ ಬಾಲಕಿಗೆ ಕೃತಕ ಕಾಲು ನೀಡಿ ನೆರವು

ಜಮುಯಿ ಮೇ 28: ಇತ್ತೀಚೆಗಷ್ಟೇ ವೈರಲ್‌ ಆಗಿರುವ ವಿಡಿಯೋದಲ್ಲಿ ಒಂದೇ ಕಾಲಿನಲ್ಲಿ ಜಿಗಿಯುತ್ತಾ ಶಾಲೆಗೆ ಹೋಗುತ್ತಿದ್ದ ಬಿಹಾರದ 10 ವರ್ಷದ ಬಾಲಕಿಯೊಬ್ಬಳಿಗೆ ಕೃತಕ ಕಾಲು ನೆರವಿನಿಂದ ನಡೆಯುವಂತಾಗಿದೆ.

ಬಿಹಾರದ ಜಮುಯಿ ಜಿಲ್ಲೆಯ ಸೀಮಾ ಎಂಬ ಹುಡುಗಿ ಶಾಲಾ ಸಮವಸ್ತ್ರದಲ್ಲಿ ಒಂದೇ ಕಾಲಿನಲ್ಲಿ ಜಿಗುತ್ತಾ ಶಾಲೆಗೆ ಹೋಗುವ ದೃಶ್ಯ ವೈರಲ್ ಆಗುವುದರೊಂದಿಗೆ ನೋಡುಗರ ಮನ ಕರಗಿಸಿತ್ತು. ಈ ಬಾಲಕಿಯ ಅಭ್ಯಾಸದ ಮೇಲಿನ ಆಸಕ್ತಿಗೆ ಮಾರು ಹೋದ ಜನ ಇವಳಿಗೆ ಸಹಾಯ ಮಾಡಿದ್ದಾರೆ. ಛತ್ತೀಸ್‌ಗಢ ಕೇಡರ್‌ನ 2009-ಬ್ಯಾಚ್ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಸೀಮ ಈಗ ಪ್ರಾಸ್ಥೆಟಿಕ್ ಕಾಲು ಅಥವಾ ಕೃತಕ ಕಾಲನ್ನು ಧರಿಸಿದ್ದಾರೆ ಎಂದು ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ ಶರಣ್ ಜೀವನವನ್ನು ಸುಧಾರಿಸುವಲ್ಲಿ "ಸಾಮಾಜಿಕ ಮಾಧ್ಯಮದ ಶಕ್ತಿ" ಎಂದು ಶ್ಲಾಘಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಸೀಮಾ ಕಾಲು ಕಳೆದುಕೊಂಡಿದ್ದಳು. ಆದಾಗ್ಯೂ, ಅವಳು ತನ್ನ ಅಧ್ಯಯನವನ್ನು ಮುಂದುವರಿಸಲು ಬಯಸಿದ್ದಳು. ಆದ್ದರಿಂದ ಅವಳು ತನ್ನ ಹಳ್ಳಿಯ ಶಾಲೆಗೆ ಪ್ರತಿನಿತ್ಯ ಒಂದು ಕಿಲೋಮೀಟರ್ ಜಿಗಿಯಬೇಕಾಗಿತ್ತು, ಅಸಮವಾದ ಹೊಲಗಳು ಮತ್ತು ಕಿರಿದಾದ ಪ್ರದೇಶಗಳನ್ನು ಹಾದು ಹೋಗಬೇಕಾಗಿತ್ತು. ಸೀಮಾ ಶಾಲೆಗೆ ಹೋಗುತ್ತಿರುವ ವಿಡಿಯೊವನ್ನು ಸುದ್ದಿವಾಹಿನಿಗಳು ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಂಚಿಕೊಂಡಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನರ ಗಮನ ಸೆಳೆದಿತ್ತು.

Bihar Girl Who Hopped To School On One Leg Gets Artificial Limb

ವಿಡಿಯೊವನ್ನು ಹಂಚಿಕೊಂಡ ಬಿಹಾರ ಸಚಿವ ಡಾ ಅಶೋಕ್ ಚೌಧರಿ ಅವರು ಹಿಂದಿಯಲ್ಲಿ ತಮ್ಮ ರಾಜ್ಯದ ಮಕ್ಕಳು ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಬಯಸುತ್ತಾರೆ ಎಂಬ "ಹೆಮ್ಮೆ" ಇದೆ ಎಂದು ಹೇಳಿ ವಿಡಿಯೋ ಹಂಚಿಕೊಂಡಿದ್ದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟ್ಯಾಗ್ ಮಾಡಿದ ಅವರು, "ಅಗತ್ಯವಾದ ಸಹಾಯ" ಈಗಾಗಲೇ ಸೀಮಾವನ್ನು ತಲುಪಿದೆ ಎಂದು ಹೇಳಿದ್ದಾರೆ.

ಸೀಮಾ ಅವರ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಜಮುಯಿ ಜಿಲ್ಲಾ ಅಧಿಕಾರಿಗಳು ಅವರಿಗೆ ತ್ರಿಚಕ್ರ ವಾಹನವನ್ನು ನೀಡಿದ್ದಾರೆ. ನಟ-ಪರೋಪಕಾರಿ ಸೋನು ಸೂದ್ ಕೂಡ ಸೀಮಾಗೆ ಸಹಾಯ ಮಾಡಲು ಮುಂದೆ ಬಂದರು. ಟ್ವೀಟ್‌ನಲ್ಲಿ, ಸೀಮಾ ಈಗ ಒಂದಲ್ಲ ಎರಡು ಕಾಲುಗಳ ಮೇಲೆ ನಡೆಯುವ ಮೂಲಕ ಶಾಲೆಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. "ನಾನು ಟಿಕೆಟ್ ಕಳುಹಿಸುತ್ತಿದ್ದೇನೆ, ಎರಡೂ ಕಾಲುಗಳ ಮೇಲೆ ನಡೆಯುವ ಸಮಯ ಸೀಮಾಗೆ ಬಂದಿದೆ" ಎಂದು ಅವರು ತಮ್ಮ ಎನ್‌ಜಿಒ ಸೂದ್ ಫೌಂಡೇಶನ್ ಅನ್ನು ಟ್ಯಾಗ್ ಮಾಡಿದ್ದರು. ಸದ್ಯ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಶಿಕ್ಷಣ ಇಲಾಖೆಯಿಂದ ಕೃತಕ ಅಂಗವನ್ನು ಒದಗಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+