ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಂದಲದ ಗೂಡಾಗಿರುವ ಬಿಹಾರದ ಪ್ರತಿಪಕ್ಷಗಳ ಮೈತ್ರಿಕೂಟ

|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 12: ಬಿಹಾರದ ವಿಧಾನಸಭಾ ಚುನಾವಣೆಗೆ ವೇದಿಕೆ ರೂಪುಗೊಳ್ಳುತ್ತಿರುವ ಬೆನ್ನಲ್ಲೇ ಮೈತ್ರಿಕೂಟ ರಚನೆ ವಿಚಾರ ವಿವಾದ ಸೃಷ್ಟಿಸುತ್ತಿದೆ.

ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಒಗ್ಗಟ್ಟಿನ ಏಕೀಕೃತ ವಿರೋಧಿ ಪಕ್ಷಗಳ ಕೂಟವನ್ನು ರಚಿಸುವ ಆರ್‌ಜೆಡಿ ಕಾಂಗ್ರೆಸ್ ಕನಸು ಸಾಕಾರಗೊಳ್ಳುವ ಸಾಧ್ಯತೆ ಕ್ಷೀಣವಾಗುತ್ತಿದೆ.

ಪಾಸ್ವಾನ್ vs ಮಾಂಝಿ vs ನಿತೀಶ್, ಬಿಜೆಪಿಗೆ ಪೀಕಲಾಟಪಾಸ್ವಾನ್ vs ಮಾಂಝಿ vs ನಿತೀಶ್, ಬಿಜೆಪಿಗೆ ಪೀಕಲಾಟ

ಉಪೇಂದ್ರ ಕುಶ್ವಾಹ ನೇತೃತ್ವದ ಆರ್‌ಎಲ್‌ಎಸ್‌ಪಿ , ಮುಖೇಶ್ ಸಾಹನಿ ನೇತೃತ್ವದ ವಿಕಾಸ ಶೀಲ ಇನ್ಸಾನ್ ಪಾರ್ಟಿ ಹಾಗೂ ರಾಮ್ ಮಾಂಜಿ ನೇತೃತ್ವದ ಪಕ್ಷಗಳು ಹೆಚ್ಚುವರಿ ಸೀಟು ಕೇಳುತ್ತಿರುವುದು, ಕಾಂಗ್ರೆಸ್ ಹಾಗೂ ಆರ್‌ಜೆಡಿಗೆ ತಲೆ ನೋವಿನ ವಿಷಯವಾಗಿದೆ.

Bihar Elections: Congress And RJD Facing Revolt In Bihar Coalition

ಈಗಾಗಲೇ ಬಿಹಾರ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್, ಆರ್‌ಜೆಡಿ ಹಾಗೂ ಎಡ ಪಕ್ಷಗಳು ಒಟ್ಟಾಗಿ ಎದುರಿಸಲು ನಿರ್ಧರಿಸಿವೆ. ಆದರೆ ಈ ಸೀಟು ಹಂಚಿಕೆ ಪ್ರಮಾಣ ಇನ್ನೂ ಅಂತಿಮವಾಗಿಲ್ಲ. ಇನ್ನೊಂದೆಡೆ ಆರ್‌ಎಲ್‌ಎಸ್‌ಪಿ ಹಾಗೂ ವಿಐಪಿ ಹಾಗೂ ಮಾಂಜಿ ಪಕ್ಷಗಳು ತಲಾ 30ಕ್ಕೂ ಅಧಿಕ ಸೀಟುಗಳನ್ನು ಕೇಳುತ್ತಿವೆ.

ಇಷ್ಟೊಂದು ಪ್ರಮಾಣದ ಸೀಟನ್ನು ಸಣ್ಣ ಪಕ್ಷಗಳಿಗೆ ನೀಡಿದರೆ ಆರ್‌ಜೆಡಿ ಹಾಗೂ ಕಾಂಗ್ರೆಸ್‌ಗೆ ಅಗತ್ಯ ಸೀಟುಗಳು ಉಳಿಯುವುದಿಲ್ಲ. ಹೀಗಿರುವಾಗ ಸಣ್ಣ ಪಕ್ಷಗಳಿಗೆ ಹೇಗೆ ಸೀಟುಕೊಡುವುದು ಎಂಬುದು ಆರ್‌ಜೆಡಿ ಹಾಗೂ ಕಾಂಗ್ರೆಸ್‌ಗೆ ತಲೆನೋವಾಗಿದೆ.

'' ಸಿಎಂ ನಿತೀಶ್ ವರ್ಚುಯಲ್ ಪ್ರಚಾರ, ಸೂಪರ್ ಡೂಪರ್ ಫ್ಲಾಪ್'''' ಸಿಎಂ ನಿತೀಶ್ ವರ್ಚುಯಲ್ ಪ್ರಚಾರ, ಸೂಪರ್ ಡೂಪರ್ ಫ್ಲಾಪ್''

Recommended Video

Zameer Ahmed ದುಡ್ಡು ಮಾಡಿದ್ದು ಹೇಗೆ ಅಂತ ನಂಗೆ ಗೊತ್ತಿದೆ : Renukacharya | Oneindia Kannada

ಇನ್ನೊಂದೆಡೆ ಚುನಾವಣೆಯ ನಂತರ ಈ ಪಕ್ಷಗಳು ಬಿಜೆಪಿ ಆಮಿಷಕ್ಕೆ ಬಳಿಯಾದರೆ ಗತಿ ಏನು ಎಂಬ ಚಿಂತೆಯೂ ಕಾಡ ತೊಡಗಿದೆ.ಇದಕ್ಕಾಗಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ನಾಯಕರು ಪರ್ಯಾಯ ಮಾರ್ಗ ಸೂತ್ರಗಳನ್ನು ಸಣ್ಣ ಪಕ್ಷಗಳ ಮುಂದಿಡುತ್ತಿವೆ.

ಈ ಪ್ರಕಾರ ಸಣ್ಣ ಪಕ್ಷಗಳು ಸೂಚಿಸುವ ಅಭ್ಯರ್ಥಿಗಳಿಗೆ, ಕಾಂಗ್ರೆಸ್ ಹಾಗೂ ಆರ್‌ಜೆಡಿಗೆ ಟಿಕೆಟ್ ಮೂಲಕ ಚುನಾವಣೆಯನ್ನು ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆದರೆ ಇದರಿಂದ ಪಕ್ಷದ ಅಸ್ತಿತ್ವ ಹೋಗಲಿದೆ ಎನ್ನುವುದು ಆ ಪಕ್ಷದ ನಾಯಕರ ಅಳಲಾಗಿದೆ.

ಮೈತ್ರಿಕೂಟದಲ್ಲಿ ಉಳಿಸಿಕೊಂಡರೆ ಸೀಟುಗಳನ್ನು ತ್ಯಾಗಮಾಡಬೇಕಾಗಿದೆ, ಇಲ್ಲವಾದರೆ ಮತ ವಿಭಜನೆಯ ಆತಂಕ ಎದುರಾಗಲಿದೆ. ಏನು ಮಾಡಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ಹಾಗೂ ಆರ್‌ಜೆಡಿ ನಾಯಕರಿಗೆ ಇನ್ನೂ ಸ್ಪಷ್ಟ ನಿಲುವು ತಾಳಲಾಗಿಲ್ಲ.

English summary
While the Congress has kick-started its campaign for the Bihar elections by holding district-level virtual rallies, the continuing lack of clarity over the contours of the RJD-led Grand Alliance and the uncertainty over the number and identification of seats to be contested by each of the constituents is causing unease in the party and in some of the allies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X