• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣಾ ಫಲಿತಾಂಶ ವಿಳಂಬಕ್ಕೆ ಕಾರಣವೇನು?

|

ಪಾಟ್ನಾ, ನವೆಂಬರ್.10: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಭಾರಿ ವಿಳಂಬವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ. ಮಧ್ಯಾಹ್ನದ ಅಂಕಿ-ಅಂಶಗಳ ಪ್ರಕಾರ ಶೇ.10ರಷ್ಟು ಮತಗಳ ಎಣಿಕೆ ಕಾರ್ಯ ಮಾತ್ರ ಪೂರ್ಣಗೊಂಡಿದೆ. 30 ರಿಂದ 35 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ.

   ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

   ಮಂಗಳವಾರ ಮಧ್ಯಾಹ್ನ 12.15 ಗಂಟೆಯ ಲೆಕ್ಕಾಚಾರದ ಪ್ರಕಾರ, ಮಹಾಘಟಬಂಧನ್ ಮೈತ್ರಿಕೂಟದ ಎದುರಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಮುನ್ನಡೆ ಸಾಧಿಸಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಿನ್ನೆಲೆ ಮತಗಟ್ಟೆಗಳ ಪ್ರಮಾಣವನ್ನು ತಗ್ಗಿಸಿರುವುದೇ ಫಲಿತಾಂಶ ವಿಳಂಬವಾಗಲು ಕಾರಣ ಎನ್ನಲಾಗುತ್ತಿದೆ.

   Bihar Election Results 2020 Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

   ಕೊವಿಡ್-19 ಶಿಷ್ಟಾಚಾರ ಪಾಲನೆ ಮಾಡುವ ಉದ್ದೇಶದಿಂದ ಒಂದು ಮತಗಟ್ಟೆಯಲ್ಲಿ ಕೇವಲ 1000 ದಿಂದ 1600 ಮತದಾರರಿಗೆ ಮಾತ್ರ ಹಕ್ಕು ಚಲಾಯಿಸುವುದಕ್ಕೆ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆ ಮತಗಟ್ಟೆ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಮತಗಳ ಕ್ರೂಢೀಕರಿಸುವ ಕಾರ್ಯದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

   ಬಿಹಾರದಲ್ಲಿ ರಣರೋಚಕ ಕದನ:

   ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಯಾವುದೇ ಸಂದರ್ಭದಲ್ಲೂ ಉಲ್ಟಾ ಹೊಡೆಯುವಂತೆ ಗೋಚರಿಸುತ್ತಿದೆ. ಏಕೆಂದರೆ ರಾಜ್ಯದ 70ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವಿನ ಮತಗಳ ಅಂತರ 1000ಕ್ಕಿಂತ ಕಡಿಮೆಯಾಗಿದೆ. ಇನ್ನು, 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಕೇವಲ 500ಕ್ಕಿಂತ ಕಡಿಮೆ ಮತಗಳ ಅಂತರವಿದೆ. ಯಾವುದೇ ಸಂದರ್ಭದಲ್ಲಿ ಫಲಿತಾಂಶವು ತಿರುವು-ಮುರುವು ಆಗುವ ಸಾಧ್ಯತೆಗಳೇ ಹೆಚ್ಚಾಗಿದೆ.

   ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ 127 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73, ಜೆಡಿಯು 47, ವಿಐಪಿ 7 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಪಾಟ್ನಾದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಮಹಾಘಟಬಂಧನ್ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್ ಜೆಡಿ 61, ಕಾಂಗ್ರೆಸ್ 20, ಎಡಪಕ್ಷ 19, ಬಿಎಸ್ ಪಿ 1, ಎಐಎಂಐಎಂ 2, ಎಲ್ ಜೆಪಿ 5, ಪಕ್ಷೇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಬಿಹಾರ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದೆ.

   English summary
   Bihar Election Results 2020: Why Is Vote Counting Is Delay And What Does It Mean.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X