ಶತ್ರುಘ್ನ ಸಿನ್ಹಾ ಪುತ್ರ ಲವ ಸಿನ್ಹಾ ಸೋಲಿನ ಹಾದಿಯಲ್ಲಿ: ಎನ್‌ಡಿಎ ಮುನ್ನಡೆ
ಪಾಟ್ನಾ, ನವೆಂಬರ್ 10: ಕಾಂಗ್ರೆಸ್ ಪಕ್ಷದ ನಾಯಕ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ ಸಿನ್ಹಾ ಅವರು ಬಂಕಿಪುರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಿಂತ ಹಿಂದೆ ಇದ್ದಾರೆ ಎನ್ನಲಾಗಿದೆ.
Recommended Video
2019 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಲವ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಅವರು ಬಿಜೆಪಿ ತೊರೆದಿದ್ದರು ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ನಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಬಿಹಾರದಲ್ಲಿ ಮತಗಳ ಎಣಿಕೆ ನಡೆಯುತ್ತಿರುವುದರಿಂದ ಆರಂಭಿಕ ಪ್ರವೃತ್ತಿಗಳ ಪ್ರಕಾರ ಎನ್‌ಡಿಎ ಬಿಹಾರದಲ್ಲಿ ಬಲವಾಗಿ ಮರಳಿದೆ. ಆರಂಭಿಕ ಪ್ರವೃತ್ತಿಗಳಲ್ಲಿ ಮಹಾಘಟಬಂಧನ್ ಗಿಂತ ಎನ್‌ಡಿಎ ಹಿಂದೆ ಇತ್ತು.

ಇತ್ತೀಚಿನ ಎಣಿಕೆಗಳ ಪ್ರಕಾರ ಮಹಾಘಟಬಂಧನ್ 98 ನೇ ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದರೆ, ಎನ್‌ಡಿಎ 127 ರಲ್ಲಿ ಮುಂದಿದೆ. ಉಳಿದ ಕಡೆ 17 ಸ್ಥಾನಗಳಲ್ಲಿ ಇತರೆ ಪಕ್ಷಗಳು ಮುನ್ನಡೆ ಸಾಧಿಸಿವೆ. ಇದರಲ್ಲಿ ನಿತೀಶ್ ಕುಮಾರ್ ವಿರುದ್ಧ ಹೋರಾಡಿ, ಕಣಕ್ಕಿಳಿದಿದ್ದ ಎಲ್‌ಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಭಾರತದ ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ಎನ್‌ಡಿಎ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಅದರಲ್ಲಿ ಬಿಜೆಪಿ 63 ಮತ್ತು ಜೆಡಿಯು 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮತ್ತೊಂದೆಡೆ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಈಗ 95 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಆರ್‌ಜೆಡಿ 61, ಕಾಂಗ್ರೆಸ್ 19 ಮತ್ತು ಎಡಪಕ್ಷಗಳು 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ತಮ್ಮ ಪುತ್ರ ಲವ ಸಿನ್ಹಾ ಪರವಾಗಿ ಮತ ಕೇಳಿದ್ದರು. ಪಾಟ್ನಾದ ಬಂಕಿಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪುತ್ರನನ್ನು ಬೆಂಬಲಿಸುವಂತೆ ಹಿರಿಯ ನಟ ಶತ್ರುಘ್ನ ಸಿನ್ಹಾ ಮನವಿ ಮಾಡಿಕೊಂಡಿದ್ದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲವ ಸಿನ್ಹಾ ಅವರ ಪರವಾಗಿ ತಂದೆ ಶತ್ರುಘ್ನ ಸಿನ್ಹಾ ಅವರು, ಬಿಹಾರಿ ಪುತ್ರನಿಗೆ ಮತ ನೀಡುವಂತೆ ಪ್ರಚಾರ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದರು.












Click it and Unblock the Notifications