• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣೆ ಫಲಿತಾಂಶ: ಎಲ್ಲೆಲ್ಲಿ, ಯಾರಿಗೆ ಗೆಲುವು?

|

ಪಟ್ನಾ, ನವೆಂಬರ್ 10: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ನಿಧಾನವಾಗಿ ಹೊರಬೀಳುತ್ತಿದ್ದು, ಬಿಜೆಪಿ ಮೊದಲ ಗೆಲುವು ಕಂಡಿದೆ. ಕೆಯೊಟಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರಾರಿ ಮೋಹನ್ ಝಾ ಗೆಲುವು ಸಾಧಿಸಿದ್ದಾರೆ. ಆರ್‌ಜೆಡಿ ಅಭ್ಯರ್ಥಿ ಅಬ್ದುಲ್ ಬಾರಿ ಸಿದ್ದಿಕಿ ಅವರನ್ನು ಮುರಾರಿ ಸುಮಾರು 8,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಿರಿಯ ಮುಖಂಡರಾಗಿರುವ ಸಿದ್ದಿಕಿ, 2015ರಲ್ಲಿ ಆರ್‌ಜೆಡಿ-ಜೆಡಿಯು ಸರ್ಕಾರದಲ್ಲಿ ಸಚಿವರಾಗಿದ್ದರು.

   BiharElectionResult : ತಮ್ಮನ ಪರವಾಗಿ ಟ್ವೀಟ್ ಮಾಡಿದ ತೇಜ್ | Oneindia Kannada

   ದರ್ಭಾಂಗಾ ಗ್ರಾಮೀಣ ಕ್ಷೇತ್ರದಲ್ಲಿ ಆರ್‌ಜೆಡಿಯ ಲಲಿತ್ ಕುಮಾರ್ ಯಾದವ್, ತಮ್ಮ ಎದುರಾಳಿ ಜೆಡಿಯುದ ಫರಾಜ್ ಫತ್ಮಿ ಅವರನ್ನು ಸೋಲಿಸಿದ್ದಾರೆ. ದರ್ಭಾಂಗಾ ಕ್ಷೇತ್ರದಲ್ಲಿ ಬಿಜೆಪಿಯ ಸಂಜಯ್ ಸರೋಗಿ ಅವರು ಆರ್‌ಜೆಡಿಯ ಅಮರ್ ನಾಥ್ ಗಾಮಿ ಅವರನ್ನು ಮಣಿಸಿದ್ದಾರೆ.

   Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

   ಸುಪೌಲ್‌ನಲ್ಲಿ ಜೆಡಿಯು ಅಭ್ಯರ್ಥಿ ಬಿಜೇಂದ್ರ ಪ್ರಸಾದ್ ಯಾದವ್ ಅವರು ಮಹಾಘಟಬಂಧನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಿನ್ನತುಲ್ಲಾ ರಹಮಾನಿ ಅವರನ್ನು ಸೋಲಿಸಿ ಗೆಲುವಿನ ನಗೆಬೀರಿದ್ದಾರೆ. ಬೆಟ್ಟಿಯಾದಲ್ಲಿ ಬಿಜೆಪಿಯ ರೇಣುದೇವಿ ಅವರು ಕಾಂಗ್ರೆಸ್‌ನ ಮದನ್ ಮೋಹನ್ ತಿವಾರಿ ಅವರನ್ನು ಸೋಲಿಸಿದ್ದಾರೆ. ಢಾಕಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪವನ್ ಕುಮಾರ್ ಜೈಸ್ವಾಲ್ ಅವರು ಆರ್‌ಜೆಡಿಯ ಫೈಸಲ್ ರಹಮಾನ್ ವಿರುದ್ಧ ಗೆಲುವು ಕಂಡಿದ್ದಾರೆ.

   ಬಾಗಾಹದಲ್ಲಿ ಬಿಜೆಪಿಯ ರಾಮ್ ಸಿಂಗ್ ಅವರು ಕಾಂಗ್ರೆಸ್‌ನ ಜಯೇಶ್ ಮಂಗ್ಲಂ ಸಿಂಗ್ ವಿರುದ್ಧ, ಬೆನಿಪುರ್‌ದಲ್ಲಿ ಜೆಡಿಯುದ ಬಿನಯ್ ಕುಮಾರ್ ಚೌಧರಿ ಅವರು ಕಾಂಗ್ರೆಸ್‌ನ ಮಿತಿಲೇಶ್ ಕುಮಾರ್ ಚೌಧರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

   ಸಕ್ರಾದಲ್ಲಿ ಜೆಡಿಯುದ ಅಶೋಕ್ ಕುಮಾರ್ ಚೌಧರಿ, ಕಾಂಗ್ರೆಸ್‌ನ ಉಮೇಶ್ ಕುಮಾರ್ ರಾಮ್ ಅವರನ್ನು ಸೋಲಿಸಿದ್ದಾರೆ. ಮೊಹಾನಿಯಾದಲ್ಲಿ ಆರ್‌ಜೆಡಿಯ ಸಂಗೀತಾ ಕುಮಾರಿ ಅವರು ಬಿಜೆಪಿಯ ನಿರಂಜನ್ ರಾಮ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

   English summary
   Bihar Assembly Election Results 2020 Updates in Kannada: BJP and JDU got early results including Darbhanga, Keoti, Dhaka, Sakra and other constituencies.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X