• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದಲ್ಲಿ ಚಿರಾಗ್ ಇಸ್ ಕಿಂಗ್, ಎಲ್‌ಜೆಪಿ ಇಸ್ ಕಿಂಗ್ ಮೇಕರ್

|

ಪಾಟ್ನಾ, ಅ.12: ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ಲೋಕ ಜನ ಶಕ್ತಿ ತೀವ್ರವಾಗಿ ನೊಂದಿದೆ. ಆದರೆ, ಅವರ ಆಸೆಯಂತೆ ಚಿರಾಗ್ ಪಾಸ್ವಾನ್ ಅವರನ್ನು ಬಿಹಾರ ಸಿಎಂ ಆಗಿ ಈ ಬಾರಿ ನೋಡುವುದು ನಿಶ್ಚಿತ. ಬಿಹಾರದಲ್ಲಿ ಎಲ್‌ಜೆಪಿ ಕಿಂಗ್ ಮೇಕರ್ ಆಗಲಿದೆ ಎಂದು ಲೋಕ ಜನಶಕ್ತಿ ಪಕ್ಷದ ಕರ್ನಾಟಕ ಅಧ್ಯಕ್ಷ ಜಗನ್ನಾಥ್ ಅವರು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಬಿಹಾರದಲ್ಲಿ ಕಳೆದ ಬಾರಿ 33 ಸ್ಥಾನವನ್ನು ಗೆದ್ದಿದ್ದ ಎಲ್‌ಜೆಪಿ ಬಗ್ಗೆ ಅಪಾರ ನಿರೀಕ್ಷೆಯಿದೆ. ಸಿ ಎಂ ಆಗಿ ನಿತೀಶ್ ಕುಮಾರ್ ಅವರು ವಿಫಲರಾಗಿದ್ದು, ಬಿಹಾರ ಮೊದಲು, ಬಿಹಾರಿ ಮೊದಲು ಎಂಬುದು ಮನೆ ಮನೆ ಮಾತಾಗಿದೆ. ಚಿರಾಗ್ ಅವರು ಕೊವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಬಿಹಾರಿಗಳ ಜೊತೆ ನಿಂತಿದ್ದಾರೆ.

ನಿತೀಶ್‌ಗೆ ಸವಾಲು ಹಾಕಿ, ಬಿಹಾರಕ್ಕೆ ಬಂದಿಳಿದ ಯುವತಿ ಪುಷ್ಪಂ

ಎನ್ಡಿಎ ಮೈತ್ರಿಕೂಟದಿಂದ ಹೊರ ಬಂದಿರುವುದಕ್ಕೂ ನಿತೀಶ್ ಹಾಗೂ ಜೆಡಿಯು ಧೋರಣೆಯೇ ಕಾರಣ. ಬಿಜೆಪಿ ಜೊತೆ ಎಲ್‌ಜೆಪಿ ಚೆನ್ನಾಗಿದೆ ಎಂದು ಹೇಳಿದರು.

ಸ್ಮರಣೆ: ಹಾಜಿಪುರದ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್

ರಾಮ್ ವಿಲಾಸ್ ಪಾಸ್ವಾನ್ ಅವರು ಬಿಹಾರಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಈಗ ಅಲ್ಲಿನ ಜನರು ಚಿರಾಗ್ ಆಯ್ಕೆ ಮಾಡಿ ತಮ್ಮ ಅಭಿಮಾನ ಮೆರೆಯಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಜಗನ್ನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Bihar Assembly election 2020: 'LJP will be kingmaker and Chirag Paswan will fulfill Ram Vilas Paswan's dream said Karnataka LJP president Jagganath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X