• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿತೀಶ್ ಕುಮಾರ್ : ಅಧಿಕಾರಕ್ಕಾಗಿ ಮುಂದುವರಿದ ಪಲ್ಟಿ ರಾಜಕೀಯ

|
Google Oneindia Kannada News

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಎರಡ್ಮೂರು ತಿಂಗಳಿನ ಮುಸುಕಿನ ಗುದ್ದಾಟಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳ ಹಾಡಿದ್ದಾರೆ. ಸಿಎಂ ಸ್ಥಾನಕ್ಕೆ ನಿತೀಶ್ ರಾಜೀನಾಮೆ ಸಲ್ಲಿಸಿದ್ದಾರೆ.

Recommended Video

   Bihar Politics : ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಾ ಪಲ್ಟಿ ರಾಜಕೀಯ | Oneindia Kannada

   ಹಾಗಂತ ಅವರು ಸಿಎಂ ಸ್ಥಾನವನ್ನು ಪದತ್ಯಾಗ ಮಾಡುತ್ತಿಲ್ಲ. ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸಿದ್ದ ಅವರು, ಈಗ, ರಾಷ್ಟ್ರೀಯ ಜನತಾದಳದ ಜೊತೆಗೆ ಸೇರಿಕೊಂಡು ಸರಕಾರ ರಚಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಆಗಸ್ಟ್ ಹತ್ತರಂದು ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

   ಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ : ಇದು ಎಷ್ಟನೇ ಬಾರಿ ಗೊತ್ತಾ?ಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ : ಇದು ಎಷ್ಟನೇ ಬಾರಿ ಗೊತ್ತಾ?

   ಈಗಿನ ನಂಬರ್ ಗೇಂನಲ್ಲಿ ನಿತೀಶ್ ಕುಮಾರ್ ಸುಲಭವಾಗಿ ಮೇಲುಗೈ ಸಾಧಿಸಬಹುದು. ಆದರೆ, 2005ರಿಂದ ಬಹುತೇಕ (ಜಿತಿನ್ ರಾಂಮಂಜೀ -278 ದಿನ ಸಿಎಂ ಆಗಿದ್ದರು) ಸಿಎಂ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದ ನಿತೀಶ್ ಕುಮಾರ್, ಅದಕ್ಕಾಗಿ ಒಂದೇ ಮೈತ್ರಿಕೂಟವನ್ನು ನಂಬಿಕೊಂಡಿದ್ದಿಲ್ಲ ಎನ್ನುವುದು ಅಷ್ಟೇ ಸತ್ಯ.

   ಬಿಜೆಪಿ ಆಡುತ್ತಿದ್ದ ರಾಜಕೀಯದ ಚದುರಂಗಾದಟಕ್ಕೆ ಸಡ್ಡು ಹೊಡೆದಿರುವ ನಿತೀಶ್ ಕುಮಾರ್, ಮತ್ತದೇ ನಂಬರ್ ಗೇಂ ಹಿಂದೆ ಬಿದ್ದು, ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಮೊರೆ ಹೋಗಿದ್ದಾರೆ. ಅಧಿಕಾರದ ಮುಂದೆ ಸಿದ್ದಾಂತ ಎಲ್ಲಾ ಆಮೇಲೆ ಎನ್ನುವ ರಾಜಕೀಯ ಸಾರಾಂಶವನ್ನು ನಿತೀಶ್ ಮತ್ತೆ ಸಾರಿದ್ದಾರೆ. ನಿತೀಶ್ ಅವರ ಯೂಟರ್ನ್ ರಾಜಕೀಯದ ಒಂದು ಝಲಕ್ ಹೀಗಿದೆ:

   ಒಂದೇ ದಿನದಲ್ಲಿ ಬದಲಾದ ಬಿಹಾರ ರಾಜಕೀಯ: ಬಿಜೆಪಿಗೆ ಬಿಗ್ ಶಾಕ್?ಒಂದೇ ದಿನದಲ್ಲಿ ಬದಲಾದ ಬಿಹಾರ ರಾಜಕೀಯ: ಬಿಜೆಪಿಗೆ ಬಿಗ್ ಶಾಕ್?

    ಹೆಚ್ಚು ಅವಧಿಗೆ ರಾಜ್ಯಭಾರ ನಡೆಸಿದ ಖ್ಯಾತಿ ಹೊಂದಿರುವ ನಿತೀಶ್ ಕುಮಾರ್

   ಹೆಚ್ಚು ಅವಧಿಗೆ ರಾಜ್ಯಭಾರ ನಡೆಸಿದ ಖ್ಯಾತಿ ಹೊಂದಿರುವ ನಿತೀಶ್ ಕುಮಾರ್

   ಬಿಹಾರದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಅವಧಿಗೆ ರಾಜ್ಯಭಾರ ನಡೆಸಿದ ಖ್ಯಾತಿ ಹೊಂದಿರುವ ನಿತೀಶ್ ಕುಮಾರ್ 2005ರಿಂದ ಅಧಿಕಾರದಲ್ಲಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಒಮ್ಮೆ ಮಾತ್ರ ಅವರದೇ ಪಕ್ಷದ ಜಿತಿನ್ ರಾಂಮಾಂಜಿಯವರು ಸಿಎಂ ಆಗಿದ್ದು ಬಿಟ್ಟರೆ, ನಿತೀಶ್ ಅವರದ್ದೇ ಕಾರುಬಾರು. ಅದಕ್ಕಾಗಿ ಅವರು ಒಂದೇ ಪಕ್ಷದ ಮೇಲೆ ನಿಯತ್ತನ್ನು ತೋರಿಲ್ಲ ಎನ್ನುವುದು ಅವರ ರಾಜಕೀಯ ಪುಟವನ್ನು ತಿರುವಿದಾಗ ಕಾಣುವ ಸತ್ಯ. ಕಳೆದ ಚುನಾವಣೆಯಲ್ಲಿ, ಜೆಡಿಯುಗಿಂತ ಹೆಚ್ಚಿನ ಸೀಟನ್ನು ಬಿಜೆಪಿ ಪಡೆದಿದ್ದರೂ ನಿತೀಶ್ ಕುಮಾರ್ ಅವರನ್ನೇ ಸಿಎಂ ಮಾಡಲು ಒಪ್ಪಿಕೊಂಡಿತ್ತು.

    ಲಾಲೂ ಪ್ರಸಾದ್ ಯಾದವ್ ಜೊತೆಗೆ ಮನಸ್ತಾಪ

   ಲಾಲೂ ಪ್ರಸಾದ್ ಯಾದವ್ ಜೊತೆಗೆ ಮನಸ್ತಾಪ

   1994ರ ಅವಧಿಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರ ರಾಜಕೀಯದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದಂತಹ ಸಮಯ. ಅವರೊಂದಿಗೆ ಇದ್ದ ನಿತೀಶ್ ಅವರ ಜೊತೆ ಮನಸ್ತಾಪ ಮಾಡಿಕೊಂಡು, ಜಾರ್ಜ್ ಫೆರ್ನಾಂಡಿಸ್ ಅವರ ಸಮತಾ ಪಕ್ಷಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಇದಾದ ನಂತರ ಎನ್ಡಿಎ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡಿದ್ದ ನಿತೀಶ್ 2013ರಲ್ಲಿ ಮೈತ್ರಿಕೂಟದಿಂದ ಹೊರಬಂದರು. ನರೇಂದ್ರ ಮೋದಿಯವರನ್ನು ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದ್ದಕ್ಕಾಗಿ ನಿತೀಶ್ ಅಲ್ಲಿಂದ ಹೊರ ಬಂದಿದ್ದರು.

    ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶ ಎನ್ನುವ ಹೇಳಿಕೆ

   ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶ ಎನ್ನುವ ಹೇಳಿಕೆ

   2015ರಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶ ಎನ್ನುವ ಹೇಳಿಕೆಯನ್ನು ನೀಡಿ ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ ಜೊತೆ ಸೇರಿಕೊಂಡು ಮಹಾಘಟಬಂದನ್ ಮಾಡಿಕೊಂಡು ಸಿಎಂ ಆಗಿ ಮುಂದುವರಿದರು. 2017ರಲ್ಲಿ ಆ ಮೈತ್ರಿಕೂಟವನ್ನು ತೊರೆದು ಮತ್ತೆ ಬಿಜೆಪಿ ಸಖ್ಯವನ್ನು ಬೆಳೆಸಿಕೊಂಡರು. ಆರ್ಜೆಡಿ ಜೊತೆ ಮನಿಸಿಕೊಂಡಿದ್ದ ನಿತೀಶ್ ಅಲ್ಲಿಂದ ಹೊರ ನಡೆದಿದ್ದರು.

    ನಿತೀಶ್ ಕುಮಾರ್ : ಅಧಿಕಾರಕ್ಕಾಗಿ ಮುಂದುವರಿದ ಪಲ್ಟಿ ರಾಜಕೀಯ

   ನಿತೀಶ್ ಕುಮಾರ್ : ಅಧಿಕಾರಕ್ಕಾಗಿ ಮುಂದುವರಿದ ಪಲ್ಟಿ ರಾಜಕೀಯ

   2017ರಲ್ಲಿ ಮತ್ತೆ ಎನ್ಡಿಎ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಂಡು ಸಿಎಂ ಆಗಿ ಮುಂದುವರಿದರು. 2020ರಲ್ಲಿ ಬಿಜೆಪಿ-ನಿತೀಶ್ ಅವರ ಜೆಡಿಯು ಒಟ್ಟಾಗಿ ಚುನಾವಣೆ ಎದುರಿಸಿತು. ಈ ಮೈತ್ರಿಕೂಟಕ್ಕೆ ಜನಾದೇಶ ಸಿಕ್ಕಿತು, ಬಿಜೆಪಿಗೆ ಅಧಿಕ ಸ್ಥಾನ ಬಂದಿದ್ದರೂ, ನಿತೀಶ್ ಸಿಎಂ ಆಗಿ ಮುಂದುವರಿದರು. ಈಗ, ಮತ್ತೆ ಬಿಜೆಪಿ ಸಖ್ಯವನ್ನು ತೊರೆದಿರುವ ನಿತೀಶ್ ಮತ್ತದೇ ಆರ್ಜೆಡಿ, ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ರಚಿಸಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಬಿಜೆಪಿಯವರು ಹೇಳುವಂತೆ 'ಪಲ್ಟಿ ರಾಮ್' ಎನ್ನುವ ಹಾಗೇ ನಿತೀಶ್ ಕುಮಾರ್ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳಿಗೆ ತಮ್ಮ ಯೂಟರ್ನ್ ಚಾಣಾಕ್ಷತನವನ್ನು ತೋರಿಸುಕೊಂಡು ಬರುತ್ತಲೇ ಇದ್ದಾರೆ.

   English summary
   Bihar CM Nitish Kumar Taken Several UTurn In His Political Career To Retain CM Post. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X