ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Exit ಪೋಲ್ ನಲ್ಲಿ ಮಿಂದೆದ್ದ ತೇಜಸ್ವಿ ಯಾದವ್: ಆದರೂ ಬಿಹಾರ ಅತಂತ್ರ

|
Google Oneindia Kannada News

ಪಾಟ್ನಾ, ನ 7: ಮೂರು ಹಂತದಲ್ಲಿ ಮುಕ್ತಾಯಗೊಂಡ ಬಿಹಾರ ಅಸೆಂಬ್ಲಿ ಚುನಾವಣೆಯ, ಸಾಲುಸಾಲು ಮತಗಟ್ಟೆ ಸಮೀಕ್ಷೆ ಹೊರಬೀಳುತ್ತಿದ್ದು, ಒಂದೋ ಅತಂತ್ರ, ಇಲ್ಲವೋ ಮಹಾಘಟ ಬಂಧನಕ್ಕೆ ಮೇಲುಗೈ ಎನ್ನುವ ಫಲಿತಾಂಶ ಬರುತ್ತಿದೆ.

ಮತಗಟ್ಟೆ ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ, ಆಡಳಿತ ವಿರೋಧಿ ಅಲೆ ಬಿಹಾರದಲ್ಲಿ ಜೋರಾಗಿದ್ದು, ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಯಾರು ಎನ್ನುವುದಕ್ಕೆ ಜನರು ತೇಜಸ್ವಿ ಯಾದವ್ ಸೂಕ್ತ ಎಂದು ಹೇಳುತ್ತಿದ್ದಾರೆ.

ಇಂಡಿಯಾ ಟುಡೇ EXIT pollಇಂಡಿಯಾ ಟುಡೇ EXIT poll

ಮಹಾಘಟಬಂಧನ್ ಆಯ್ಕೆಗೆ ಜನರು ಕೊಡುತ್ತಿರುವ ಉತ್ತರ ಏನಂದರೆ, ನಿತೀಶ್ ಕುಮಾರ್ ಅಧಿಕಾರದ ಅವಧಿಯಲ್ಲಿ ಕಾಣದ ಅಭಿವೃದ್ದಿ ಕೆಲಸಗಳು, ನಿರುದ್ಯೋಗ ಪ್ರಮುಖ ಕಾರಣವಾಗಿದೆ. ಅತ್ಯುತ್ತಮ ಸಿಎಂ ಸ್ಥಾನಕ್ಕೆ ತೇಜಸ್ವಿ ಯಾದವ್ ನಂತರ ನಿತೀಶ್ ಕುಮಾರ್ ಸೂಕ್ತ ಎನ್ನುವುದು ಮತಗಟ್ಟೆ ಸಮೀಕ್ಷೆಯ ಪ್ರಕಾರ ಜನರ ಅಭಿಪ್ರಯವಾಗಿದೆ.

Bihar Assembly Elections 2020 Exit Poll By TV9, Bharatvarsh, News Tak

ಟಿವಿ 9, ಭಾರತ್ ವರ್ಷ್ ಮತ್ತು ನ್ಯೂಸ್ ತಕ್ ನಡೆಸಿದ ಜಂಟಿ ಸಮೀಕ್ಷೆಯ ಪ್ರಕಾರ ಎನ್ಡಿಎ ಅಥವಾ ಯುಪಿಎ ಮೈತ್ರಿಕೂಟಕ್ಕೆ ಬಹುಮತ ಸಿಗದೇ, ಅತಂತ್ರ ಫಲಿತಾಂಶ ಬರಲಿದೆ. ಬಿಹಾರ ಅಸೆಂಬ್ಲಿ ಚುನಾವಣೆಯ ಫಲಿತಾಂಶ ನವೆಂಬರ್ ಹತ್ತರಂದು ಹೊರಬೀಳಲಿದೆ.

ಹೆಚ್ಚಿನ ಮತಗಟ್ಟೆ ಸಮೀಕ್ಷೆಯ ಪ್ರಕಾರ ಎರಡು ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ. ಟಿವಿ 9, ಭಾರತ್ ವರ್ಷ್ ನಡೆಸಿದ ಸಮೀಕ್ಷೆಯ ಫಲಿತಾಂಶ ಇಂತಿದೆ:

Recommended Video

Bihar Election 3rd Phase : ಚುನಾವಣೆಯಲ್ಲಿ ಮತದಾನ ಮಾಡಲು wheel chairನಲ್ಲಿ ಬಂದ ಮತದಾರ | Oneindia kannada

ಆರ್ಜೆಡಿ - ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ: 115-125
ಜೆಡಿಯು - ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ: 110-120
ಎಲ್ಜೆಪಿ : 3-5
ಇತರರು : 10-15

English summary
Bihar Assembly Elections 2020 Exit Poll By TV9, Bharatvarsh, News Tak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X