• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟ ಸೇರಲು ಮುಂದಾದ ಜಿತನ್ ರಾಮ್ ಮಾಂಝಿ

|

ಪಟ್ನಾ, ಸೆಪ್ಟೆಂಬರ್ 2: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ತಮ್ಮ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷವನ್ನು (ಎಚ್‌ಎಎಂ) ಆಡಳಿತಾರೂಢ ಜನತಾ ದಳ ಸಂಯುಕ್ತ (ಜೆಡಿಯು) ಜತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಗುರುವಾರ ಅವರು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದಿಂದ ಹೊರಬಂದ ಒಂದು ತಿಂಗಳ ಬಳಿಕ ಎಚ್‌ಎಎಂ ಈ ಮೈತ್ರಿ ಮಾಡಿಕೊಳ್ಳಲಿದೆ.

ಜೆಡಿಯು ಜತೆಗಿನ ಎಚ್‌ಎಎಂ ಮೈತ್ರಿಯೊಂದಿಗೆ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಕೊಂಡ ನಾಲ್ಕನೆಯ ರಾಜಕೀಯ ಪಕ್ಷ ಎನಿಸಿಕೊಂಡಿದೆ.

ಬಿಹಾರದ ಮಹಾಘಟಬಂಧನ ಮೈತ್ರಿಕೂಟಕ್ಕೆ ಆಘಾತ ನೀಡಿದ ಮಾಂಝಿಬಿಹಾರದ ಮಹಾಘಟಬಂಧನ ಮೈತ್ರಿಕೂಟಕ್ಕೆ ಆಘಾತ ನೀಡಿದ ಮಾಂಝಿ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಎಚ್‌ಎಎಂ ಸೀಟು ಹಂಚಿಕೆಯಲ್ಲಿ ಪಾಲು ಪಡೆಯಲಿದೆ. ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ, ನಿತೀಶ್ ಕುಮಾರ್ ಅವರ ಜೆಡಿಯು ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದರಿಂದ ಎನ್‌ಡಿಎ ಒಕ್ಕೂಟದಲ್ಲಿ ಜೆಡಿಯು ಕೋಟಾದಡಿ 9 ಸೀಟುಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಜೆಡಿಯು ಜತೆಗಿನ ಮಾಂಝಿ ಅವರ ಮೈತ್ರಿಯನ್ನು ಒಂದು ರೀತಿಯ 'ಘರ್ ವಾಪಸಿ' ಎಂದು ಕರೆಯಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಸೋಲಿನ ಬಳಿಕ ಮುಖ್ಯಮಂತ್ರಿ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ ನೀಡಿ, ಮಾಂಝಿ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿದ್ದರು.

ಮಹಾಘಟಬಂಧನ್ ಜೊತೆ ಎಡಪಕ್ಷಗಳ ಚುನಾವಣಾ ಮೈತ್ರಿ! ಮಹಾಘಟಬಂಧನ್ ಜೊತೆ ಎಡಪಕ್ಷಗಳ ಚುನಾವಣಾ ಮೈತ್ರಿ!

'ಹಿಂದೂಸ್ತಾನ್ ಅವಾಮ್ ಮೋರ್ಚಾವು ಎನ್‌ಡಿಎ ಸೇರಿಕೊಳ್ಳುತ್ತಿರುವ ಸಂಬಂಧ ಜಿತನ್ ರಾಮ್ ಮಾಂಝಿ ಅವರು ಗುರುವಾರ ಅಧಿಕೃತ ಪ್ರಕಟಣೆ ಮಾಡಲಿದ್ದಾರೆ. ನಮ್ಮ ಪಕ್ಷವು ಜೆಡಿಯು ಜತೆಗೆ ವಿಲೀನವಾಗುತ್ತಿಲ್ಲ. ಬದಲಾಗಿ ಪ್ರತ್ಯೇಕ ಪಕ್ಷವಾಗಿಯೇ ಎನ್‌ಡಿಎಯನ್ನು ಸೇರಿಕೊಳ್ಳಲಿದೆ' ಎಂದು ವಕ್ತಾರ ದಾನಿಶ್ ರಿಜ್ವಾನ್ ತಿಳಿಸಿದ್ದಾರೆ.

English summary
Former CM Of Bihar, Jitan Ram Manjhi is all set to join NDA ahead of Bihar assembly election. His HAM party may get 9 seats with the alliance of JDU.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X