ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಯುದ್ಧ ವಿಮಾನದ ನೆತ್ತಿಗೆ 'ಓಂ'ಕಾರ, ಚಕ್ರದಡಿ ನಿಂಬೆಹಣ್ಣು

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 08: ಶಕ್ತಿಶಾಲಿ ಯುದ್ಧವಿಮಾನ ರಫೇಲ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಪ್ಯಾರಿಸ್‌ನಲ್ಲಿ ಸ್ವೀಕರಿಸಿದರು.

ಹಸ್ತಾಂತರ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಶಕ್ತಿಶಾಲಿ ಯುದ್ಧವಿಮಾನಕ್ಕೆ ಪ್ಯಾರಿಸ್‌ನಲ್ಲೇ ಆಯುಧಪೂಜೆ ನೆರವೇರಿಸಿದ ರಾಜನಾಥ್ ಸಿಂಗ್ ಅವರು ರಫೇಲ್ ವಿಮಾನದ ಮೇಲೆ 'ಓಂ'ಕಾರ ಬರೆದರು. ರಫೇಲ್ ಯುದ್ಧವಿಮಾನದ ಚಕ್ರದಡಿ ನಿಂಬೆಹಣ್ಣು ಇಟ್ಟು ಪೂಜೆ ನೆರವೇರಿಸಿದರು.

ತೆಂಗಿನಕಾಯಿ, ಹೂವು, ಹಣ್ಣು ಇಟ್ಟು ಆರತಿ ಎತ್ತಿ ಪೂಜೆ ಸಲ್ಲಿಸಿದ ರಾಜನಾಥ್ ಸಿಂಗ್ ಅವರು, ಮೊದಲ ರಫೇಲ್ ಯುದ್ಧವಿಮಾನವನ್ನು ಭಾರತಕ್ಕೆ ಸೇರ್ಪಡೆಗೊಳಿಸಿಕೊಂಡರು.

ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?

ಒಟ್ಟು 36 ರಫೇಲ್ ಯುದ್ಧವಿಮಾನವನ್ನು ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಫ್ರಾನ್ಸ್‌ನ ಡಸ್ಸಾಲ್ಟ್ ಸಂಸ್ಥೆಯೊಂದಿಗೆ ಈ ಒಪ್ಪಂದ ಆಗಿದೆ. 36 ರಫೇಲ್‌ ಯುದ್ಧ ವಿಮಾನದಲ್ಲಿ ಮೊದಲ ವಿಮಾನ ಇದಾಗಿದ್ದು, ನಾಲ್ಕು ವಿಮಾನಗಳು ಮುಂದಿನ ಮೇ ಅಂತ್ಯಕ್ಕೆ ಭಾರತ ಸೇರಲಿವೆ.

ರಫೇಲ್‌ ವಿಮಾನದ ಮೇಲೆ ಓಂ, ಚಕ್ರಕ್ಕೆ ನಿಂಬೆ

ರಫೇಲ್‌ ವಿಮಾನದ ಮೇಲೆ ಓಂ, ಚಕ್ರಕ್ಕೆ ನಿಂಬೆ

ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧವಿಮಾನದ ಓಂ ಬರೆದು, ಚಕ್ರಕ್ಕೆ ನಿಂಬೆಹಣ್ಣು ಇಟ್ಟು ಪೂಜೆ ಸಲ್ಲಿಸಿರುವುದನ್ನು ಹಲವು ಮೆಚ್ಚಿಕೊಂಡಿದ್ದಾರೆ. ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಇದು ಮೂಢತನವೆಂದು ಜರಿದಿದ್ದಾರೆ.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ರಫೇಲ್‌ನಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್

ರಫೇಲ್‌ನಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್

ರಫೇಲ್ ಯುದ್ಧವಿಮಾನ ಸ್ವೀಕರಿಸಿದ ರಾಜನಾಥ್ ಸಿಂಗ್ ಅವರು ಯುದ್ಧವಿಮಾನದಲ್ಲಿ ಹಾರಾಟವನ್ನೂ ನಡೆಸಿದರು. ಫ್ರಾನ್ಸ್‌ನ ಅಧಿಕಾರಿಗಳು, ಡಸ್ಸಾಲ್ಟ್‌ನ ಅಧಿಕಾರಿಗಳು ಸಹ ಈ ಸಮಯದಲ್ಲಿ ಅವರೊಂದಿಗೆ ಹಾರಾಟ ನಡೆಸಿದರು.

ಎಚ್‌ಎಎಲ್‌ನಿಂದ ಒಪ್ಪಂದ ಹಿಂಪಡೆದು ಅನಿಲ್ ಅಂಬಾನಿಗೆ

ಎಚ್‌ಎಎಲ್‌ನಿಂದ ಒಪ್ಪಂದ ಹಿಂಪಡೆದು ಅನಿಲ್ ಅಂಬಾನಿಗೆ

ರಫೇಲ್ ಯುದ್ಧ ವಿಮಾನದ ಬಗ್ಗೆ ದೇಶದಾದ್ಯಂತ ಭಾರಿ ಚರ್ಚೆ ಎದ್ದಿತ್ತು. ರಫೇಲ್ ವಿಮಾನ ತಯಾರಿ ಒಪ್ಪಂದವನ್ನು ಎಚ್‌ಎಎಲ್‌ನಿಂದ ಹಿಂಪಡೆದು ಅನಿಲ್ ಅಂಬಾನಿಯ ಹೊಸ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಇದು ಮೋದಿ ಸರ್ಕಾರದ ಅತಿದೊಡ್ಡ ಹಗರಣವೆಂದು ಆರೋಪಿಸಲಾಗಿತ್ತು.

ವಾಯುಸೇನೆಗೆ ಐತಿಹಾಸಿಕ ದಿನ: ಇಂದು ಭಾರತೀಯ ಸೇನೆ ಸೇರಲಿರುವ ರಫೇಲ್ವಾಯುಸೇನೆಗೆ ಐತಿಹಾಸಿಕ ದಿನ: ಇಂದು ಭಾರತೀಯ ಸೇನೆ ಸೇರಲಿರುವ ರಫೇಲ್

ಯುದ್ಧವಿಮಾನದ ಬೆಲೆಯಲ್ಲಿ ಹೆಚ್ಚಳ

ಯುದ್ಧವಿಮಾನದ ಬೆಲೆಯಲ್ಲಿ ಹೆಚ್ಚಳ

ರಫೇಲ್ ಯುದ್ಧ ವಿಮಾನದ ಒಪ್ಪಂದವನ್ನು ಮೊದಲಿಗೆ ಯುಪಿಎ ಸರ್ಕಾರ ಮಾಡಿತ್ತು, ನಂತರ ಒಪ್ಪಂದವನ್ನು ಮೋದಿ ಸರ್ಕಾರವು ಬದಲಾಯಿಸಿತು. ಈ ಸಮಯದಲ್ಲಿ ವಿಮಾನದ ವೆಚ್ಚ ಹೆಚ್ಚಳ ಮಾಡಲಾಯಿತು. ಈ ಬಗ್ಗೆ ರಾಹುಲ್ ಗಾಂಧಿ ಸೇರಿ ಅನೇಕರು ಹಗರಣದ ಆರೋಪ ಮಾಡಿದ್ದರು.

English summary
Defence minister Rajanath Singh perform pooja to Rafale fighter jet in Paris today. He also take a ride in flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X