ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮೇಲೆ ಮೊಟ್ಟೆ ಎಸೆತ
ಪ್ಯಾರಿಸ್, ಸೆಪ್ಟೆಂಬರ್ 28: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಮೇಲೆ ಮೊಟ್ಟೆ ಎಸೆದಿರುವ ಘಟನೆ ವರದಿಯಾಗಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಯಾವ ಸ್ಥಳಕ್ಕೇ ಹೋದರೂ ಸುದ್ದಿಯಾಗುತ್ತಾರೆ ಎನ್ನುವ ಮಾತಿಗೆ ಮತ್ತೆ ಪುಷ್ಟಿ ದೊರೆತಿದೆ. ಲ್ಯಾನ್ ಎಂಬ ನಗರದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬಂದಿಳಿದಿದ್ದರು.
ಮೊಟ್ಟೆ ಎಸೆತಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಘಟನೆ ನಂತರ ಮ್ಯಾಕ್ರಾನ್ ತಾವು ಆರೋಪಿಯೊಂದಿಗೆ ಮಾತನಾಡಬೇಕು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಮ್ಯಾಕ್ರಾನ್ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ.

ಈ ಹಿಂದೆ ಸಾರ್ವಜನಿಕರನ್ನು ಭೇಟಿ ಮಾಡುವ ಸಂದರ್ಭ ಓರ್ವ ವ್ಯಕ್ತಿ ಮ್ಯಾಕ್ರಾನ್ ಅವರ ಕಪಾಳಕ್ಕೆ ಬಾರಿಸಿದ್ದ. ಅದರ ವಿಡಿಯೊ ಅಂತರ್ಜಾಲದಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು.
ದಕ್ಷಿಣ ಫ್ರಾನ್ಸ್ನಲ್ಲಿ ಜನರನ್ನು ಭೇಟಿಯಾಗುತ್ತಿದ್ದ ವೇಳೆ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅವರನ್ನು ಹತ್ತಿರಕ್ಕೆ ಕರೆದಿದ್ದಾನೆ. ಈ ವೇಳೆ ಹತ್ತಿರಕ್ಕೆ ಹೋದ ಮ್ಯಾಕ್ರಾನ್ ಕಪಾಳಕ್ಕೆ ಆ ವ್ಯಕ್ತಿ ಬಾರಿಸಿದ್ದಾನೆ. ತಕ್ಷಣವೇ ಭದ್ರತಾ ಪಡೆಗಳು ಆತ ಹಾಗೂ ಆತನ ಸಹಜರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆಹಾರ ಮೇಳಕ್ಕೆ ಭೇಟಿ ನೀಡಿದ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಮೇಲೆ ಮೊಟ್ಟೆಯೊಂದನ್ನು ಎಸೆದಿದ್ದಾನೆ. ಮ್ಯಾಕ್ರಾನ್ ಪುಣ್ಯಕ್ಕೆ ಆ ಮೊಟ್ಟೆ ಒಡೆದು ಚೂರಾಗದೆ ಅವರ ಮೈಮೇಲಿಂದ ಬೌನ್ಸ್ ಆಗಿ ನೆಲಕ್ಕೆ ಬಿದ್ದ ನಂತರ ಒಡೆದಿದೆ. ಸ್ವಲ್ಪದರಲ್ಲಿ ಭಾರೀ ಪ್ರಮಾದದಿಂದ ಬಚಾವಾಗಿದ್ದಾರೆ.
ಇನ್ನು ಕೊರೊನಾ ಸಂಕಷ್ಟವಿರಲಿ ಅಥವಾ ಚೀನಾ-ಪಾಕಿಸ್ತಾನ ಮುಂತಾದ ದೇಶಗಳು ಕಿರಿಕ್ ಮಾಡಿದ ಸಂದರ್ಭವಿರಲಿ ಸದಾ ಭಾರತದ ಪರ ನಿಲ್ಲುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮೇಲಿನ ಹಲ್ಲೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೆ ಅಂಥದ್ದೇ ಘಟನೆ ಸಂಭವಿಸಿದೆ.












Click it and Unblock the Notifications