Vastu Tips: ಸಂಜೆಯಾದ ಬಳಿಕ ಮನೆಯಿಂದ ಈ 5 ವಸ್ತುಗಳನ್ನು ಯಾರಿಗೂ ಕೊಡಬೇಡಿ; ಕಾರಣ ಇಲ್ಲಿದೆ
ಹಿಂದೂ ಧರ್ಮದಲ್ಲಿ ದಾನ ಧರ್ಮಕ್ಕೆ ವಿಶೇಷವಾದ ಮಹತ್ವವಿದೆ. ಆದರೆ ಯಾವ ಗಳಿಗೆಯಲ್ಲಿ ಯಾವ ವಸ್ತುಗಳನ್ನು ದಾನ ಧರ್ಮ ಮಾಡಬೇಕು ಎನ್ನುವುದುದಕ್ಕೆ ಕೆಲವೊಂದು ವಾಸ್ತು ಶಾಸ್ತ್ರದಲ್ಲಿ ನಿಯಮಗಳಿವೆ. ಪ್ರಮುಖವಾಗಿ ಸೂರ್ಯಾಸ್ತದ ನಂತರ ಮನೆಯ ಹೊರಗೆ ಕೆಲವು ವಸ್ತುಗಳನ್ನು ನೀಡುವುದನ್ನು ತಪ್ಪಿಸಬೇಕು ಯಾಕೆಂದರೆ ಇದರಿಂದ ಮನೆಯ ಆರ್ಥಿಕತೆ ಮತ್ತು ಸಕಾರಾತ್ಮಕ ಶಕ್ತಿಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ವಾಸ್ತು ತಜ್ಞರ ಅಭಿಪ್ರಾಯವಾಗಿದೆ.
ಹಿಂದಿನ ಕಾಲದಿಂದಲೂ ಹಿರಿಯರು ಕೂಡಾ ಸಂಜೆ ಸಮಯದಲ್ಲಿ ಕೆಲವು ವಸ್ತುಗಳನ್ನು ಮನೆಯ ಹೊರಗೆ ಕೊಡಬಾರದು ಎಂದು ಸಲಹೆಯನ್ನು ನೀಡುತ್ತಾರೆ. ಸೂರ್ಯಾಸ್ತದ ನಂತರ ಈ ಐದು ಪ್ರಮುಖ ವಸ್ತುಗಳನ್ನು ಕೂಡುವುದು ಮನೆಗೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ.

ಹಣ ನೀಡುವುದು
ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪ ಎಂದು ಕಾಣಲಾಗುತ್ತದೆ. ಸಂಜೆ ವೇಳೆ ಹಣವನ್ನು ಹೊರಗೆ ಕೊಡುವುದರಿಂದ ಮನೆಯ ಐಶ್ವರ್ಯ ಕಡಿಮೆಯಾಗುತ್ತದೆ ಮತ್ತು ಲಕ್ಷ್ಮೀ ಕಟಾಕ್ಷ ದೂರವಾಗಬಹುದು ಎಂಬ ನಂಬಿಕೆ ಇದೆ ಕೂಡಾ ಇದೆ. ಅನಗತ್ಯವಾಗಿ ಸಂಜೆ ವೇಳೆಯಲ್ಲಿ ಸಾಲ ಅಥವಾ ಹಣ ನೀಡುವುದನ್ನು ಮಾಡಬಾರದು ಇದರಿಂದ ಮನೆಯ ಆರ್ಥಿಕ ಸ್ಥಿರತೆ ತೊಂದರೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಮೊಸರು ನೀಡುವುದು
ಮೊಸರನ್ನು ವಾಸ್ತು ಶಾಸ್ತ್ರದ ಪ್ರಕಾರ ಸಮೃದ್ಧಿ ಮತ್ತು ಶಾಂತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ರಾತ್ರಿ ವೇಳೆ ಮೊಸರನ್ನು ಮನೆಯ ಹೊರಗೆ ಕೊಡುವುದರಿಂದ ಮನೆಯ ಎಲ್ಲಾ ರೀತಿಯ ಪ್ರಗತಿಗೆ ತೊಂದರೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಮೊಸರನ್ನು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡಬಾರದು ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.

ಹಾಲು ನೀಡುವುದು
ಹಾಲು ವಿಷ್ಣು ಹಾಗೂ ಲಕ್ಷ್ಮೀ ದೇವಿಯೊಂದಿಗೆ ಸಂಬಂಧ ಹೊಂದಿದೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ಸೂರ್ಯಾಸ್ತದ ಬಳಿಕ ಹಾಲನ್ನು ಮನೆಯ ಹೊರಗೆ ಕೊಡುವುದು ಅತ್ಯಂತ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯ ಸಮೃದ್ಧಿಗೆ ಧಕ್ಕೆ ಉಂಟಾಗಬಹುದು ಎಂದು ನಂಬಲಾಗಿದೆ.

ಅರಿಶಿಣ ನೀಡುವುದು
ಸಂಜೆ ಸಮಯದಲ್ಲಿ ಮನೆಯಿಂದ ಅರಿಶಿಣವನ್ನು ನೀಡುವುದರಿಂದ ಗುರು ಗ್ರಹದ ಅನುಗ್ರಹ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯ ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅರಿಶಿಣವನ್ನು ವಾಸ್ತು ಹಾಗೂ ಧಾರ್ಮಿಕವಾಗಿ ಶುಭದ ಸಂಕೇತ ಹಾಗೂ ಗುರು ಗ್ರಹದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ.

ಉಪ್ಪು ನೀಡುವುದು
ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಮನೆಯ ಶಕ್ತಿ ಮತ್ತು ಸ್ಥಿರತೆಯೊಂದಿಗೆ ಸಂಬಂಧ ಹೊಂದಿದೆ. ಸೂರ್ಯಾಸ್ತದ ಬಳಿಕ ಉಪ್ಪನ್ನು ಯಾರಿಗೂ ನೀಡಬಾರದು ಯಾರಾದರೂ ಸಂಜೆ ವೇಳೆ ಉಪ್ಪನ್ನು ಕೇಳಿಕೊಂಡು ಬಂದರು ನೀಡಬಾರದು ಯಾಕೆಂದರೆ ಸಂಜೆಯ ನಂತರ ಉಪ್ಪನ್ನು ನೀಡುವುದರಿಂದ ಮನೆಯಲ್ಲಿ ಆರ್ಥಿಕತೆ ತೊಂದರೆ ಉಂಟಾಗಬಹುದು ಮತ್ತು ನಕಾರತ್ಮಕ ಶಕ್ತಿಯ ಪ್ರವೇಶ ಆಗಬಹುದು ಆದ್ದರಿಂದ ಸಂಜೆ ಸಮಯದಲ್ಲಿ ಉಪ್ಪನ್ನು ಯಾರಿಗೂ ನೀಡಬಾರದು ಎಂದು ಹಿರಿಯರು ಹೇಳುತ್ತಾರೆ.
ಸಂಜೆ ಸಮಯದಲ್ಲಿ ಪಾಲಿಸಬೇಕಾದ ಕೆಲವು ಮಹತ್ವದ ನಿಯಮಗಳು
ಸೂರ್ಯಾಸ್ತದ ಬಳಿಕ ಮನೆಯ ಮುಖ್ಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿಡಬಾರದು ಎಂದು ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ಸಂಜೆ ಸಮಯದಲ್ಲಿ ಲಕ್ಷ್ಮೀ ದೇವಿ ಮನೆಗೆ ಆಗಮಿಸುವ ಸಮಯ ಎನ್ನುವ ನಂಬಿಕೆ ಇರುವುದರಿಂದ ಮುಖ್ಯ ದ್ವಾರದ ಬಳಿ ದೀಪ ಹಚ್ಚುವುದು ಮಂಗಳಕರ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕತ್ತಲೆ ಆವರಿಸದಂತೆ ಬೆಳಕಿನಿಂದ ಇರುವಂತೆ ಮಾಡುವುದು ಉತ್ತಮ.
ಜೊತೆಗೆ ಸಂಜೆ ವೇಳೆಯಲ್ಲಿ ತುಳಸಿ ಗಿಡದ ಎಲೆಗಳನ್ನು ಕೀಳಬಾರದು ಎನ್ನುವ ನಂಬಿಕೆ ಕೂಡಾ ಇದೆ. ಹೀಗೆ ಮಾಡಿದರೆ ಲಕ್ಷ್ಮೀ ದೇವಿಗೆ ಅಸಮಾಧಾನ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಸಂಜೆ ವೇಳೆ ತುಳಸಿ ಗಿಡದ ಕಟ್ಟೆಯ ಬಳಿ ದೀಪ ಹಚ್ಚಿ ಪೂಜೆ ಮಾಡುವ ಸಂಪ್ರದಾಯವೂ ಹಲವೆಡೆ ಇದೆ. ಇವು ನಮ್ಮ ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ಆಚರಣೆಗಳಾಗಿವೆ, ಅನೇಕರು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಮತ್ತು ಆರ್ಥಿಕತೆ ಕಾಪಾಡಿಕೊಳ್ಳಬೇಕಾದರೆ ಇವುಗಳನ್ನು ಪಾಲನೆ ಮಾಡುತ್ತಾರೆ.














Click it and Unblock the Notifications