ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛೇದನ ಪ್ರಕರಣ ಹೆಚ್ಚಳ: ವಿವಾಹಪೂರ್ವ ಸಮಾಲೋಚನೆ ಕಡ್ಡಾಯಗೊಳಿಸಲು ಮುಂದಾದ ಗೋವಾ ಸರ್ಕಾರ

|
Google Oneindia Kannada News

ಪಣಜಿ, ಜೂ. 1: ವಿಚ್ಛೇದನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಗೋವಾ ಸರ್ಕಾರವು ವಿವಾಹಪೂರ್ವ ಸಮಾಲೋಚನೆಯನ್ನು ಕಡ್ಡಾಯಗೊಳಿಸುವ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್, ''ರಾಜ್ಯ ಸರ್ಕಾರದ ಗೋವಾ ಸಾರ್ವಜನಿಕ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಜಿಐಪಿಎಆರ್‌ಡಿ) ವಿವಾಹಪೂರ್ವ ಸಮಾಲೋಚನೆಯ ಕೋರ್ಸ್ ಹಾಗೂ ಅದರ ಸ್ವರೂಪವನ್ನು ಅಂತಿಮಗೊಳಿಸಿದೆ'' ಎಂದು ತಿಳಿಸಿದ್ದಾರೆ.

ಚೀನಾ ಸರಕಾರದ 'ಒಂದು ಆದೇಶ': ವಿಚ್ಛೇದನ ಪ್ರಮಾಣದಲ್ಲಿ ಭಾರಿ ಕುಸಿತ ಚೀನಾ ಸರಕಾರದ 'ಒಂದು ಆದೇಶ': ವಿಚ್ಛೇದನ ಪ್ರಮಾಣದಲ್ಲಿ ಭಾರಿ ಕುಸಿತ

"ರಾಜ್ಯದಲ್ಲಿ ವಿವಾಹಪೂರ್ವ ಸಮಾಲೋಚನೆಯನ್ನು ಕಡ್ಡಾಯಗೊಳಿಸಲು ನಾವು ಹೊಸ ನೀತಿಯನ್ನು ತರುತ್ತಿದ್ದೇವೆ. ನಾವು ಧಾರ್ಮಿಕ ಸಂಸ್ಥೆಗಳಲ್ಲೂ ಸಮಾಲೋಚನೆ ನಡೆಸಬಹುದು" ಎಂದು ಹೇಳಿದ್ದಾರೆ.

Spike in Divorce cases: Goa government has decided to make premarital counselling mandatory

"ಗೋವಾದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಕೂಡಾ ತಿಳಿಸಿದ್ದಾರೆ.

"ಮದುವೆಯಾದ ಆರು ತಿಂಗಳಿಂದ ಒಂದು ವರ್ಷದೊಳಗೆ ಅನೇಕ ವಿಚ್ಛೇದನಗಳು ನಡೆಯುತ್ತಿವೆ. ಈ ಹಿನ್ನೆಲೆ ದಂಪತಿಗಳಲ್ಲಿ ಜಾಗೃತಿ ಮೂಡಿಸಲು ವಿವಾಹಪೂರ್ವ ಸಮಾಲೋಚನೆಯನ್ನು ಕಡ್ಡಾಯಗೊಳಿಸಬೇಕು ಎಂದು ನಾವು ಭಾವಿಸಿದ್ದೇವೆ" ಎಂದು ಕ್ಯಾಬ್ರಲ್ ಅಭಿಪ್ರಾಯಿಸಿದ್ದಾರೆ.

ಅತಿ ಶ್ರೀಮಂತ, ಮಹಾದಾನಿ ಬಿಲ್ ಗೇಟ್ಸ್ ದಾಂಪತ್ಯದಲ್ಲಿ ಬಿರುಕು ಅತಿ ಶ್ರೀಮಂತ, ಮಹಾದಾನಿ ಬಿಲ್ ಗೇಟ್ಸ್ ದಾಂಪತ್ಯದಲ್ಲಿ ಬಿರುಕು

ಹಾಗೆಯೇ ''ರಾಜ್ಯದಲ್ಲಿ ಪ್ರತಿ ತಿಂಗಳು ವರದಿಯಾದ ವಿಚ್ಛೇದನ ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲ'' ಎಂದು ಹೇಳಿದ ಸಚಿವರು, ''ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಅಧಿಕವಾಗಿದೆ'' ಎಂದು ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Spike in Divorce cases: Goa government has decided to make premarital counselling mandatory,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X