ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NewsX ಚುನಾವಣಾಪೂರ್ವ ಸಮೀಕ್ಷೆ: ಗೋವಾದಲ್ಲಿ ಬಿಜೆಪಿಗೆ ಗದ್ದುಗೆ

|
Google Oneindia Kannada News

ಪಣಜಿ, ಡಿಸೆಂಬರ್ 22: ಗೋವಾ ವಿಧಾನಸಭೆ ಚುನಾವಣೆ 2022ರಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಪೋಲ್ ಸ್ಟ್ರಾಟ್-ನ್ಯೂಸ್ ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆಯು ಮುನ್ಸೂಚನೆ ನೀಡಿದೆ.

ಗೋವಾದ 40 ವಿಧಾನಸಭೆ ಕ್ಷೇತ್ರಗಳ ಪೈಕಿ ಸರ್ಕಾರ ರಚನೆಗೆ ಕನಿಷ್ಠ 21 ಕ್ಷೇತ್ರಗಳು ಬೇಕಾಗುತ್ತದೆ. ಆದರೆ ಬಿಜೆಪಿಯು 20 ರಿಂದ 22 ಕ್ಷೇತ್ರಗಳಲ್ಲಿ ಶೇ.32.80ರಷ್ಟು ಮತಗಳೊಂದಿಗೆ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

 Polstrat-NewsX Pre-Poll Survey: Who’s winning Goa Assembly Election?

ಬಿಜೆಪಿ ಹೊರತಾಗಿ ಆಮ್ ಆದ್ಮಿ ಪಕ್ಷವು ಶೇ.22.10ರಷ್ಟು ಮತಗಳೊಂದಿಗೆ 5 ರಿಂದ 7 ಸ್ಥಾನಗಳಲ್ಲಿ ಜಯ ಗಳಿಸಲಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಶೇ.18.80ರಷ್ಟು ಮತಗಳೊಂದಿಗೆ 4 ರಿಂದ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಿಂದ ತಿಳಿದು ಬಂದಿದೆ.

ಯಾರಿಗೆ ಸಿಎಂ ಸ್ಥಾನ?:
ಗೋವಾದಲ್ಲಿ ಮುಂಬರುವ ಮುಖ್ಯಮಂತ್ರಿ ಸ್ಥಾನಕ್ಕೆ ಶೇ.31.40ರಷ್ಟು ಜನರು ಭಾರತೀಯ ಜನತಾ ಪಕ್ಷದ ಪ್ರಮೋದ್ ಸಾಮಂತ್ ರನ್ನು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ದಿಗಂಬರ್ ಕಾಮತ್ ಪರ ಶೇ.23.60ರಷ್ಟು ಜನರು ಒಲವು ಹೊಂದಿದ್ದಾರೆ.

ಚುನಾವಣೆಯಲ್ಲಿ ಪ್ರಮುಖ ಅಂಶಗಳೇನು?:
ಶೇಕಡಾ 19ರಷ್ಟು ಜನರು ಗಣಿಗಾರಿಕೆಯು ಬಹು ಚರ್ಚಿತ ವಿಷಯವಾಗಿದ್ದು, ಪ್ರವಾಸೋದ್ಯಮ ಪುನಶ್ಚೇತನಕ್ಕೆ ಶೇ.14.30, ಮೂಲಸೌಕರ್ಯ ಶೇ.13.80, ಕೊವಿಡ್-19 ಲಸಿಕೆ ವಿತರಣೆಗೆ ಶೇ.12.20 ಮತ್ತು ಪಾರಂಪರಿಕ ತಾಣಗಳಿಗೆ ಶೇ.11.10ರಷ್ಟು ಆದ್ಯತೆ ನೀಡಲಾಗುತ್ತಿದೆ. ಈ ವಿಷಯಗಳನ್ನೇ ಚುನಾವಣಾ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಮತದಾನಕ್ಕೆ ಯಾವ ಅಂಶ ಮುಖ್ಯ?:
Polstrat-NewsX ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕೆ ಹಲವು ವಿಷಯಗಳು ಪ್ರಮುಖವಾಗಿವೆ. ಗೋವಾ ಚುನಾವಣೆಯಲ್ಲಿ ಶೇ.22.20ರಷ್ಟು ಜನರು ಶಾಸಕರ ಮುಖವನ್ನು ನೋಡಿ ಮತ ಚಲಾಯಿಸುತ್ತಾರೆ. ಶೇ.19ರಷ್ಟು ಜನರು ಸಮುದಾಯವನ್ನು ನೋಡುತ್ತಿದ್ದರೆ, ಶೇ.18.50ರಷ್ಟು ಜನರು ರಾಷ್ಟ್ರೀಯ ನಾಯಕತ್ವವನ್ನು ನೋಡುತ್ತಾರೆ. ಶೇ.14.90ರಷ್ಟು ಜನರು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವನ್ನು ನೋಡಿ ಮತದಾನ ಮಾಡುತ್ತಾರೆ. ಶೇ.6.90ರಷ್ಟು ಮಂದಿ ಜಾತಿಯನ್ನು ನೋಡಿ ಮತದಾನ ಮಾಡುತ್ತಾರೆ ಎಂದು ತಿಳಿದು ಬಂದಿದೆ.

ಗೋವಾದಲ್ಲಿ ಬೇರೆ ಪಕ್ಷಗಳ ಪ್ರಭಾವ?:
ಗೋವಾ ವಿಧಾನಸಭೆ ಚುನಾವಣೆಯಲ್ಲಿ Polstrat-NewsX ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಬೇರೆ ರಾಜ್ಯದ ಪಕ್ಷಗಳು ಹೆಚ್ಚು ಪ್ರಭಾವ ಬೀರುವುದಿಲ್ಲ. ಆಮ್ ಆದ್ಮಿ ಪಕ್ಷವು ಗೋವಾದಲ್ಲಿ ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ ಎಂದು ಶೇ.33.50ರಷ್ಟು ಜನರು ಹೇಳಿದ್ದಾರೆ. ಅದೇ ರೀತಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ಪ್ರಭಾವಶಾಲಿ ಆಗದು ಎಂದು ಶೇ.38ರಷ್ಟು ಜನರು ಹೇಳಿದ್ದಾರೆ.

English summary
Polstrat-NewsX Pre-Poll Survey: Who’s winning Goa Assembly Election?. Polstrat-NewsX.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X