ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಹರ್ ಘರ್ ಜಲ್ ಉತ್ಸವ: ಮೋದಿ ಮಾತಿನ ಮುಖ್ಯಾಂಶ

|
Google Oneindia Kannada News

ಪಣಜಿ, ಆಗಸ್ಟ್ 19: ಭಾರತದಲ್ಲಿ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಪೈಪ್‌ಗಳ ಮೂಲಕ ಶುದ್ಧ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ 'ಹರ್ ಘರ್ ಜಲ ಉತ್ಸವ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿ ಮನೆಗೆ ನೀರು ತಲುಪಿಸುವ ಅಭಿಯಾನದ ದೊಡ್ಡ ಯಶಸ್ಸು ಸಿಕ್ಕಿದೆ. ಇದು ಸಬ್ಕಾ ಪ್ರಯಾಸ್‌ಗೆ ಉತ್ತಮ ಉದಾಹರಣೆಯಾಗಿದೆ ಎಂದರು.

just in: ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಖರ್ಚಾಗಿದ್ದು ಎಷ್ಟು ಗೊತ್ತೆ!?just in: ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಖರ್ಚಾಗಿದ್ದು ಎಷ್ಟು ಗೊತ್ತೆ!?

ಈ ಸಾಧನೆಗಾಗಿ ನಾನು ಪ್ರತಿಯೊಬ್ಬರನ್ನು, ವಿಶೇಷವಾಗಿ ಮಹಿಳೆಯರು ಮತ್ತು ಸಹೋದರಿಯರನ್ನು ಅಭಿನಂದಿಸಲು ಬಯಸುತ್ತೇನೆ. ಗೋವಾ ಇಂದು ಒಂದು ಮೈಲಿಗಲ್ಲು ಸಾಧಿಸಿದೆ, ಇದು 'ಹರ್ ಘರ್ ಜಲ್' ಪ್ರಮಾಣೀಕರಿಸಿದ ಮೊದಲ ರಾಜ್ಯವಾಗಿದೆ. ದಾದ್ರಾ ನಗರ ಹವೇಲಿ ಹಾಗೂ ದಿಯು ಮತ್ತು ದಮನ್ ಕೂಡ 'ಹರ್ ಘರ್ ಜಲ್' ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿವೆ ಎಂದು ಹೇಳಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳಿ.

ಸ್ವಚ್ಛ ಭಾರತ ಅಭಿಯಾನದಡಿ ಒಡಿಎಫ್ ಪ್ಲಸ್

ಸ್ವಚ್ಛ ಭಾರತ ಅಭಿಯಾನದಡಿ ಒಡಿಎಫ್ ಪ್ಲಸ್

ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದಂತೆ ದೇಶವು ಮೂರನೇ ಸಾಧನೆಯನ್ನು ತೋರಿದೆ. ಕೆಲವು ವರ್ಷಗಳ ಹಿಂದೆಯಷ್ಟೇ ಎಲ್ಲಾ ದೇಶವಾಸಿಗಳ ಪ್ರಯತ್ನದಿಂದ ದೇಶವನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಯಿತು. ನಂತರದಲ್ಲಿ ಗ್ರಾಮಗಳನ್ನು ಒಡಿಎಫ್ ಪ್ಲಸ್ ಮಾಡಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ದೇಶವೂ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ. ಈಗ ದೇಶದ ವಿವಿಧ ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಳ್ಳಿಗಳು ODF ಪ್ಲಸ್ ಆಗಿವೆ ಎಂದು ಹೇಳಿದರು.

ಸರ್ಕಾರಕ್ಕಿಂತ ದೇಶ ರಚನೆಗೆ ಹೆಚ್ಚು ಪರಿಶ್ರಮ ಅಗತ್ಯ

ಸರ್ಕಾರಕ್ಕಿಂತ ದೇಶ ರಚನೆಗೆ ಹೆಚ್ಚು ಪರಿಶ್ರಮ ಅಗತ್ಯ

"ದೇಶದಲ್ಲಿ ಸರ್ಕಾರ ರಚನೆಗೆ ಅಷ್ಟೊಂದು ಶ್ರಮ ಬೇಕಾಗಿಲ್ಲ, ಆದರೆ ದೇಶ ರಚನೆಗೆ ಕಠಿಣ ಪರಿಶ್ರಮ ಬೇಕಾಗುತ್ತದೆ. ನಾವೆಲ್ಲರೂ ದೇಶವನ್ನು ಕಟ್ಟುವ ಮಾರ್ಗವನ್ನು ಆರಿಸಿಕೊಂಡಿದ್ದೇವೆ, ಆದ್ದರಿಂದ ನಾವು ದೇಶದ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ನಿರಂತರವಾಗಿ ಪರಿಹರಿಸುತ್ತಿದ್ದೇವೆ," ಎಂದು ಮೋದಿ ಹೇಳಿದರು.

ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಮೋದಿ ಮಾತು

ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಮೋದಿ ಮಾತು

ದೇಶದ ಬಗ್ಗೆ ಕಾಳಜಿ ಇಲ್ಲದ ಜನರಿಗೆ ದೇಶದ ವರ್ತಮಾನ ಮತ್ತು ಭವಿಷ್ಯದ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಜನರು ನೀರಿಗಾಗಿ ದೊಡ್ಡ ಭರವಸೆಗಳನ್ನು ನೀಡುತ್ತಾರೆ, ಆದರೆ ದೊಡ್ಡ ದೃಷ್ಟಿಕೋನದಿಂದ ಎಂದಿಗೂ ಕೆಲಸ ಮಾಡುವುದಿಲ್ಲ. ಈಗ ಭಾರತದಲ್ಲಿ ರಾಮ್‌ಸರ್ ಸೈಟ್‌ಗಳ ಸಂಖ್ಯೆ- 75ಕ್ಕೆ ಏರಿಕೆ ಆಗಿದೆ. ಇವುಗಳಲ್ಲಿ 50 ಸೈಟ್‌ಗಳನ್ನು ಕಳೆದ 8 ವರ್ಷಗಳಲ್ಲಿ ಮಾತ್ರ ಸೇರಿಸಲಾಗಿದೆ. ಅಂದರೆ ಭಾರತವು ಜಲ ಭದ್ರತೆಗಾಗಿ ಸರ್ವಾಂಗೀಣ ಪ್ರಯತ್ನಗಳನ್ನು ಮಾಡುತ್ತಿದೆ. ಅದು ಪ್ರತಿ ದಿಕ್ಕಿನಲ್ಲಿಯೂ ಫಲಿತಾಂಶವನ್ನು ಪಡೆಯುತ್ತಿದೆ ಎಂದು ತಿಳಿಸಿದರು.

ಜಲ್ ಜೀವನ್ ಮಿಷನ್ ಬಗ್ಗೆ ಪ್ರಧಾನಿ ಮೋದಿ ಮಾತು

ಜಲ್ ಜೀವನ್ ಮಿಷನ್ ಬಗ್ಗೆ ಪ್ರಧಾನಿ ಮೋದಿ ಮಾತು

ಭಾರತದಲ್ಲಿ ಕಳೆದ 3 ವರ್ಷಗಳಲ್ಲಿ 'ಜಲ್ ಜೀವನ್ ಮಿಷನ್' ಅಡಿ 7 ಕೋಟಿ ಗ್ರಾಮೀಣ ಕುಟುಂಬಗಳಿಗೆ ಪೈಪ್ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಇದು ಸಾಮಾನ್ಯ ಸಾಧನೆಯಲ್ಲ. ಸ್ವಾತಂತ್ರ್ಯದ 7 ದಶಕಗಳ ಪೈಕಿ ದೇಶದಲ್ಲಿ ಕೇವಲ 3 ಕೋಟಿ ಗ್ರಾಮೀಣ ಕುಟುಂಬಗಳು ಪೈಪ್‌ಲೈನ್‌ನಲ್ಲಿ ನೀರಿನ ಸೌಲಭ್ಯವನ್ನು ಪಡೆದುಕೊಂಡಿದ್ದವು ಎಂದು ಮೋದಿ ಉಲ್ಲೇಖಿಸಿದರು.

English summary
PM Narendra Modi Address 'Har Ghar Jal Utsav' in Goa Virtually Today. he event will be held at Institute Menezes Braganza. Read on to his speech highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X