• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ ನಿಧನ

|

ಪಣಜಿ, ಜನವರಿ 23: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಹಾಗೂ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ನಾಯಕರಾಗಿದ್ದ ಬಾಬುರಾವ್ ದೇಸಾಯಿ (96) ಅವರು ಶುಕ್ರವಾರ (ಜ.22) ರಾತ್ರಿ 10 ಗಂಟೆಗೆ ನಿಧನರಾಗಿದ್ದಾರೆ.

ಶನಿವಾರ ಬೆಳಿಗ್ಗೆ 10 ಗಂಟೆಯಿಂದ ವಿಶ್ವ ಹಿಂದೂ ಪರಿಷತ್ ಗೋವಾದ ರಾಜ್ಯ-ಕೇಂದ್ರ ಕಾರ್ಯಾಲಯ ಧರ್ಮಶ್ರೀಯಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅವರು 1949 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು.

'ಆನ್ಲೈನ್ ಗೆಳತಿ'ಗಾಗಿ ಪಾಕಿಸ್ತಾನದಿಂದ ಗೋವಾಕ್ಕೆ ವೀಸಾ ಪಡೆಯದೇ ಬಂದಳಾ ಯುವತಿ?

ಬಾಬುರಾವ್ ದೇಸಾಯಿ ಅವರು ನಡೆದು ಬಂದ ಹಾದಿ

* 1925 : ಶ್ರೀ ರಘುನಾಥ ದೇಸಾಯಿ ಉಪಾಖ್ಯ ಬಾಬೂರಾವ್ ದೇಸಾಯಿಯವರ ಜನನ, ಪೋರ್ಚುಗಲ್ ಗೋವಾದ ಪೆಡನೆಯಲ್ಲಿ

* ತಂದೆ-ತಾಯಂದಿರು ಶ್ರೀ ನಾರಾಯಣರಾವ್ ದೇಸಾಯಿ ಮತ್ತು ಶ್ರೀಮತಿ ಹಂಸಾಬಾಯಿ.

* 4 ವರ್ಷದ ಮಗುವಿಗೆ ತಾಯಿಯ ಅಗಲಿಕೆ, ಬೆಳೆದಿದ್ದು, ಅತ್ತೆ ನರಸೋಬಾಡಿಯ ಸೋದರತ್ತೆ ಮನೆಯಲ್ಲಿ

* ಪ್ರಾಥಮಿಕ ಶಿಕ್ಷಣ ಪೋರ್ಚುಗೀಸ್ ಮತ್ತು ಮರಾಠಿಯಲ್ಲಿ.

* ಹನ್ನೆರಡನೇ ವಯಸ್ಸಿನಲ್ಲಿ ಬೆಳಗಾವಿಗೆ.

* ಸೈಂಟ್ ಪಾಲ್ ಹೈಸ್ಕೂಲಿನಲ್ಲಿ ಮೆಟ್ರಿಕ್, ಪ್ರತೀ ಪರೀಕ್ಷೆಯಲ್ಲೂ ಮೊದಲನೇ ಬ್ಯಾಂಕ್.

* ಹಾರ್ಮೋನಿಯಂ ವಾದನದಲ್ಲಿ ಪ್ರಾವೀಣ್ಯತೆ.

* ಇಂಗ್ಲೀಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್.

* ಕೊಂಕಣಿ, ಮರಾಠಿ, ಹಿಂದಿ, ಇಂಗ್ಲೀಷ್‌ಗಳಲ್ಲಿ ಪ್ರಭುತ್ವ

* ಕನ್ನಡ, ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ.

* 1942 : ದತ್ತಾ ಜೋಷಿಯವರ ಮೂಲಕ ಸಂಘ ಪ್ರವೇಶ,

* 1949 : ಶ್ರೀ ಯಾದವರಾವ್ ಜೋಶಿ, ಶ್ರೀ ಜಗನ್ನಾಥರಾವ್ ಜೋಶಿ, ಶ್ರೀ ಬಾವೂರಾವ್ ಕಾಕಡೆಯವರ ಪ್ರೇರಣೆಯಿಂದ ಸಂಘ ಪ್ರಚಾರಕ, ಬೆಳಗಾವಿ ನಗರ ಪ್ರಚಾರಕ.

* ಕಾರವಾರ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಜಿಲ್ಲಾ ಪ್ರಕಾರಕ.

* 1967 : ಧಾರವಾಡ - ಕಲ್ಬುರ್ಗಿ - ಬಳ್ಳಾರಿ ವಿಭಾಗಗಳಿಗೆ ವಿಭಾಗ ಪ್ರಚಾರಕ,

* ಪ್ರಸಿದ್ಧ ಲೇಖಕ ಶ್ರೀ ಬಾಳಾಶಾಸ್ತ್ರೀ ಹರಿದಾಸರೊಂದಿಗೆ ಸಂಶೋಧನಾ ಕಾರ್ಯ,

* 1969 : ಕೀರ್ತನಕಾರ, ವಾಚಸ್ಪತಿ ಕ್ಷೀರಸಾಗರರಿಗೆ ಸಹಕಾರಿಯಾಗಿ ಪ್ರವಾಸ.

* 1983 : ವಿಶ್ವ ಹಿಂದು ಪರಿಷದ್ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ

* 1985 : ಆಂಧ್ರ ಮತ್ತು ಕರ್ನಾಟಕಗಳು ಸೇರಿದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ,

* 1987 : ಕರ್ನಾಟಕ ಆಂಧ್ರ ಕೇರಳ ತಮಿಳುನಾಡು ಸೇರಿದ ದಕ್ಷಿಣಾಂಚಲದ ಸಂಘಟನಾ ಕಾರ್ಯದರ್ಶಿ.

* 1971 : ಪರಮಪೂಜ್ಯ ಶ್ರೀ ಗುರೂಜಿಯವರು ಶಿರಸಿಗೆ ಚಿಕಿತ್ಸೆಗಾಗಿ ಬಂದಾಗ 35 ದಿನಗಳ ಕಾಲ ಅವರ ಶುಶ್ರೂಷೆ

* 1990 : ಅಖಿಲ ಭಾರತೀಯ ಕಾರ್ಯದರ್ಶಿ

* ಶ್ರೀ ರಾಮಜನ್ಮಭೂಮಿ, ಗೋರಕ್ಷಾ ಆಂದೋಲನಗಳ ನೇತೃತ್ವ.

* ಏಕಲ್ ವಿದ್ಯಾಲಯದ ಪ್ರಭಾರಿ.

* 1997 : ವಿಶೇಷ ಆಮಂತ್ರಿತ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾಗಿದ್ದರು.

English summary
Baburao Desai (96), a senior campaigner of the RSS and a national leader of the Vishwa Hindu Parishat, passed away at 10 pm on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X