• search
 • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋವಾದಲ್ಲಿ ಜುಲೈ 30ರವರೆಗೆ ಪ್ರವಾಸಿಗರಿಗೆ ನಿರ್ಬಂಧ

|
Google Oneindia Kannada News

ಪಣಜಿ, ಜೂನ್ 17: ಗೋವಾದಲ್ಲಿ ಪ್ರತಿಯೊಬ್ಬರು ಮೊದಲ ಕೊರೊನಾ ಲಸಿಕೆ ಪಡೆದ ಬಳಿಕವಷ್ಟೇ ಪ್ರವಾಸಿಗರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಜುಲೈ 30ರೊಳಗೆ ಸರ್ಕಾರವೂ ರಾಜ್ಯದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಮೊದಲ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಕೊರೊನಾ ನಿಯಮಗಳ ಸಡಿಲಿಕೆ ಮಾಡಲಾಗಿದೆ, ಸಡಿಲಿಕೆ ಎಂದ ಮಾತ್ರಕ್ಕೆ ಪ್ರವಾಸಿಗರಿಗೆ ಸಧ್ಯಕ್ಕೆ ಅವಕಾಶವಿಲ್ಲ, ಪ್ರತಿಯೊಬ್ಬರೂ ಮೊದಲ ಕೊಡೊನಾ ಲಸಿಕೆಯ ಡೋಸ್ ಪಡೆದ ಬಳಿಕವಷ್ಟೇ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಆಮ್ಲಜನಕ ಕೊರತೆ: ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವುಆಮ್ಲಜನಕ ಕೊರತೆ: ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವು

ಹೀಗಾಗಿ ಗೋವಾ ಪ್ರವಾಸೋದ್ಯಮ ಜುಲೈ 30ರ ನಂತರ ಮತ್ತೆ ಆರಂಭವಾಗಲಿದೆ, ನೃತ್ಯ ಹಾಗೂ ಇತರೆ ಸಂಗೀತ ಕಾರ್ಯಕ್ರಮಗಳನ್ನು 2022ರ ಮಾರ್ಚ್ ವರೆಗೆ ಮುಂದೂಡಲಾಗಿದೆ, ರಾಜ್ಯದಲ್ಲಿ ಪ್ರವಾಸಿಗರಿಗೆ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ.

ಈ ವಾರದ ಆರಂಭದಲ್ಲಿ ಪ್ರಮೋದ್ ಸಾವಂತ್ ಪ್ರವಾಸೋದ್ಯಮ ಕೈಗಾರಿಕೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು ಹಾಗೂ ಕಠಿಣ ನಿಯಮಗಳನ್ನು ಪಾಲಿಸುವ ಕುರಿತು ಸೂಚನೆ ನೀಡಿದ್ದರು.

ಹುನಾರ್ ಹಾತ್, ಸನ್‌ಬರ್ನ್ ಹಾಗೂ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾರ್ಚ್ 2022ರವರೆಗೆ ಅವಕಾಶವಿಲ್ಲ. ಗೋವಾದಲ್ಲಿ ಬುಧವಾರ 310 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,63,358ಕ್ಕೆ ಏರಿಕೆಯಾಗಿದೆ.

   Weather forecast ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತ !! | Oneindia Kannada
   ಡಾ. ಪ್ರಮೋದ ಸಾವಂತ್
   Know all about
   ಡಾ. ಪ್ರಮೋದ ಸಾವಂತ್

   ಇದುವರೆಗೆ 2960 ಮಂದಿ ಮೃತಪಟ್ಟಿದ್ದು ಕಳೆದ 24 ಗಂಟೆಗಳಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಬುಧವಾರ 2588 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಇದುವರೆಗೆ 8,75,538 ಮಂದಿಯನ್ನು ಪರೀಕ್ಷಿಸಲಾಗಿದೆ.

   English summary
   Unlike a few other states that have relaxed travel restrictions amid COVID-19 pandemic, Goa Chief Minister Pramod Sawant on Thursday announced that the coastal state will not open for tourism until the state fully administers the first vaccine shot to its population.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X