ಗೋವಾ; ಸೋಮವಾರ ಮತದಾನ, 301 ಅಭ್ಯರ್ಥಿಗಳು ಕಣದಲ್ಲಿ

ಪಣಜಿ, ಫೆಬ್ರವರಿ 13; ಗೋವಾದ 40 ಸದಸ್ಯ ಬಲದ ವಿಧಾನಸಭೆಗೆ ಸೋಮವಾರ ಚುನಾವಣೆ ನಡೆಯಲಿದೆ. 301 ಅಭ್ಯರ್ಥಿಗಳು ಕಣದಲ್ಲಿ ಇದ್ದು, 676 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ರಾಜ್ಯ ಚುನಾವಣಾ ಆಯುಕ್ತ ಕೆ. ಕುನಾಲ್ ಮತದಾನದ ಬಗ್ಗೆ ಮಾಹಿತಿ ನೀಡಿದರು, "ರಾಜ್ಯದ ಮತಗಟ್ಟೆಗಳನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. 105 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ" ಎಂದರು.

Recommended Video

      ಗೋವಾ, ಉತ್ತರಾಖಂಡ್, ಉತ್ತರ ಪ್ರದೇಶ ಚುನಾವಣೆ:ಬೆಳಿಗ್ಗೆಯಿಂದ‌‌ ಏನೇನಾಯ್ತು? | Oneindia Kannada

      ಈ ಬಾರಿಯ ಗೋವಾ ರಾಜ್ಯದ ಚುನಾವಣೆಗೆ ಒಟ್ಟು ಮತದಾರರು 11,64,522. ಇವರಲ್ಲಿ 9,590 ವಿಕಲ ಚೇತನರು, 2,997 ಜನರು 80 ವರ್ಷ ಮೇಲ್ಪಟ್ಟವರು, 41 ತೃತೀಯ ಲಿಂಗಿಗಳು ಸೇರಿದ್ದಾರೆ. ಸೋಮವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ತನಕ ಕೋವಿಡ್ ಮಾರ್ಗಸೂಚಿಗಳ ಅನ್ವಯ ಮತದಾನ ನಡೆಯಲಿದೆ.

      All Set For Goa Elections 2022 Voting On February 14th

      ರಾಜ್ಯದ ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿರುವ ಪ್ರಮುಖರು. ಉಳಿದಂತೆ ಆಮ್ ಆದ್ಮಿ ಪಕ್ಷ, ಟಿಎಂಸಿ, ಗೋವಾದ ಪ್ರಾದೇಶಿಕ ಪಕ್ಷಗಳು, ಪಕ್ಷೇತರರು, ಎನ್‌ಸಿಪಿ, ಶಿವಸೇನೆ ಅಭ್ಯರ್ಥಿಗಳು ಸಹ ಕಣದಲ್ಲಿದ್ದಾರೆ.

      ಸಿಯೋಲಿಮ್ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದರೆ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಳಿದಂತೆ ಬಿಕೋಲಿಮ್, ಪೊರ್ವರಿಮ್, ಸೆ. ಕ್ರೂಜ್, ಮಾರ್ಗೋವಾ, ಬೆನೌಲಿಮ್ ಕ್ಷೇತ್ರಗಳಲ್ಲಿ ಅತಿ ಕಡಿಮೆ ಎಂದರೆ 5 ಅಭ್ಯರ್ಥಿಗಳಿದ್ದಾರೆ.

      ಗೋವಾರದಲ್ಲಿ ಫೆಬ್ರವರಿ 14ರ ಮಂಗಳವಾರ ಚುನಾವಣೆ ನಡೆದರೂ ಫಲಿತಾಂಶ ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ ರಾಜ್ಯಗಳ ಜೊತೆ ಮಾರ್ಚ್ 10ರಂದು ಪ್ರಕಟವಾಗಲಿದೆ.

      ಕಣದಲ್ಲಿರುವ ಪ್ರಮುಖರು; ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸಚಿವರಾದ ಚಂದ್ರಕಾಂತ್ ಕಾಳ್ವೇಕರ್, ವಿಶ್ವಜಿತ್ ರಾಣೆ, ಕಾಂಗ್ರೆಸ್‌ನಿಂದ ಮಿಚೆಲ್ ಲೊಬೋ ಸೇರಿದಂತೆ ಹಲವಾರು ನಾಯಕರು ಕಣದಲ್ಲಿದ್ದಾರೆ.

      ಇನ್ನೂ ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್‌ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್ ಕೈ ತಪ್ಪಿತ್ತು.

      ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರು ಚುನಾವಣಾ ಪ್ರಚಾರ ನಡೆಸಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಪಿ. ಚಿದಂಬರಂ, ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.

      ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಇದೇ ಮೊದಲ ಬಾರಿಗೆ ಗೋವಾ ರಾಜ್ಯದ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎಎಪಿ ಪಕ್ಷ ಅಮಿತ್ ಪಾಲೇಕರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

      ಚುನಾವಣೋತ್ತರ ಸಮೀಕ್ಷೆ ಇಲ್ಲ; ಕೇಂದ್ರ ಚುನಾವಣಾ ಆಯೋಗ ಚುನಾವಣೋತ್ತರ ಸಮೀಕ್ಷೆಯನ್ನು ನಿರ್ಬಂಧಿಸಿದೆ. ಎಲ್ಲಾ ರಾಜ್ಯಗಳ ಚುನಾವಣೆಗಳು ಮುಗಿದ ಬಳಿಕ ಅಂದರೆ ಮಾರ್ಚ್ 7ರಂದು ಸಂಜೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಲಿದೆ.

      ಕನ್ನಡಿಗರ ಮತಕ್ಕೆ ಬೇಡಿಕೆ; ಗೋವಾ ರಾಜ್ಯದ ಒಟ್ಟು ಮತದಾರರು 11,64,522. ಇವರಲ್ಲಿ ಒಂದು ಕ್ಷೇತ್ರದಲ್ಲಿ 27 ರಿಂದ ದ 30 ಸಾವಿರ ಮತದಾರರು ಇದ್ದಾರೆ. ಆದ್ದರಿಂದ ಒಂದೊಂದು ಮತವೂ ನಿರ್ಣಾಯಕವಾಗಿದೆ.

      ಗೋವಾದಲ್ಲಿ ಸುಮಾರು 4 ರಿಂದ 5 ಲಕ್ಷ ಕನ್ನಡಿಗರು ಇದ್ದಾರೆ. ಕಾರವಾರ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಭಾಗದಿಂದ ವಲಸೆ ಹೋಗಿ ಗೋವಾದ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ.

      ಸುಮಾರು 15 ಕ್ಷೇತ್ರಗಳಲ್ಲಿ ಕನ್ನಡಿಗರು ಪ್ರಭಾವ ಹೊಂದಿದ್ದಾರೆ. 3 ರಿಂದ 5 ಕ್ಷೇತ್ರಗಳಲ್ಲಿ ಕನ್ನಡಿಗರು ನಿರ್ಣಾಯಕರು. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಸಿ. ಟಿ. ರವಿ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಹಲವು ನಾಯಕರು ಗೋವಾದಲ್ಲಿ ಪ್ರಚಾರ ನಡೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+