Breaking: ಮಹಿಳೆ ಮೇಲೆ ಹಲ್ಲೆ, ಬಿಜೆಪಿಯ ಶ್ರೀಕಾಂತ್ ತ್ಯಾಗಿ ಬಂಧನ
ನೋಯ್ಡಾ, ಆಗಸ್ಟ್ 09: ಕಳೆದ ವಾರ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತ ಶ್ರೀಕಾಂತ್ ತ್ಯಾಗಿಯನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತ್ಯಾಗಿಯನ್ನು ಮೀರತ್‌ನಲ್ಲಿ ಬಂಧಿಸಲಾಗಿದ್ದು, ಅವರನ್ನು ನೋಯ್ಡಾಗೆ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ, ಶ್ರೀಕಾಂತ್ ತ್ಯಾಗಿ ನೋಯ್ಡಾದ ಸೆಕ್ಟರ್ 93 ರ ಗ್ರಾಂಡ್ ಒಮ್ಯಾಕ್ಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮತ್ತು ನಿಂದನೆ ಮಾಡುತ್ತಿರುವುದು ಕಂಡುಬಂದಿದೆ. ಘಟನೆ ನಂತರ ತ್ಯಾಗಿ ಅಲ್ಲಿಂದ ಪರಾರಿಯಾಗಿದ್ದರು.
ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ತ್ಯಾಗಿ ಜೊತೆಗೆ ತಮಗೆ ಯಾವುದೇ ಸಂಬಂಧವಿಲ್ಲವೆಂದು ಬಿಜೆಪಿ ಹೇಳಿಕೊಂಡಿತ್ತು. ಆದರೆ, ತಾನು ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ತ್ಯಾಗಿ ಹೇಳಿಕೊಂಡಿದ್ದಾರೆ. ತ್ಯಾಗಿ ಬಿಜೆಪಿ ಕಿಸಾನ್ ಮೋರ್ಚಾದ (ರೈತ ವಿಭಾಗ) ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.

ನೊಯ್ಡಾದ ಸೆಕ್ಟರ್-93 ಬಿ ಯಲ್ಲಿನ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯ ನಿವಾಸಿ ಮಹಿಳೆಯೊಬ್ಬರನ್ನು ನಿಂದನೆ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರ ವಿರುದ್ಧ ನೋಯ್ಡಾ ಪೊಲೀಸರು ಶುಕ್ರವಾರ ಆಗಸ್ಟ್ 5 ರಂದು ಪ್ರಕರಣ ದಾಖಲಿಸಿದ್ದಾರೆ.
ಶ್ರೀಕಾಂತ್ ತ್ಯಾಗಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಯಾವುದೇ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು, ಆಕ್ರೋಶ ವ್ಯಕ್ತಪಡಿಸುವ ಉದ್ದೇಶ) ಅಡಿಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.

ಗ್ರ್ಯಾಂಡ್ ಓಮ್ಯಾಕ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಹೊರಗೆ ಅಕ್ರಮವಾಗಿ ನಿರ್ಮಾಣ ಮಾಡಿರುವ ಆರೋಪ ತ್ಯಾಗಿ ಮೇಲಿತ್ತು. ಅವನ ಸಹಾಯಕರು ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ನುಗ್ಗಿ ಗದ್ದಲವನ್ನು ಸೃಷ್ಟಿಸಿದ ನಂತರ ಈ ವಿಷಯವು ಉಲ್ಬಣಗೊಂಡಿತು. ಶ್ರೀಕಾಂತ್ ತ್ಯಾಗಿ ಅವರು ಅಕ್ರಮವಾಗಿ ಕೆಲವು ಮರಗಳನ್ನು ನೆಡುವುದಕ್ಕೆ ಮಹಿಳೆ ಆಕ್ಷೇಪಿಸಿದ್ದರು.
ಸೋಮವಾರ, ಉತ್ತರ ಪ್ರದೇಶ ಸರ್ಕಾರ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಲು ಬುಲ್ಡೋಜರ್ ಬಳಸಿ, ಅಕ್ರಮ ನಿರ್ಮಣಗಳನ್ನು ಕೆಡವಿತ್ತು.












Click it and Unblock the Notifications