Breaking: ಶ್ರೀಕೃಷ್ಣಮೂರ್ತಿ ವಿಸರ್ಜನೆ ವೇಳೆ 5 ಯುವಕರು ನೀರು ಪಾಲು
ನೋಯ್ಡಾ, ಆಗಸ್ಟ್ 29: ಭಾನುವಾರ ಶ್ರೀಕೃಷ್ಣ ಮೂರ್ತಿಯ ವಿಸರ್ಜನೆ ವೇಳೆ ಡಿಎನ್‌ಡಿ (ದೆಹಲಿ ನೋಯ್ಡಾ ಡೈರೆಕ್ಟ್) ಮೇಲ್ಸೇತುವೆ ಅಡಿಯಲ್ಲಿ ಯಮುನಾ ನದಿಯಲ್ಲಿ ಮುಳುಗಿ ಐವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಎನ್‌ಡಿ ಮೇಲ್ಸೇತುವೆ ಅಡಿಯಲ್ಲಿ ಶ್ರೀಕೃಷ್ಣ ಮೂರ್ತಿಯ ವಿಸರ್ಜನೆ ವೇಳೆ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ಬಲಿಯಾದವರನ್ನು ಅಂಕಿತ್ (20), ಲಕ್ಕಿ (16), ಲಲಿತ್ (17), ಬೀರು (19) ಮತ್ತು ರಿತು ರಾಜ್ ಅಲಿಯಾಸ್ ಸಾನು (20) ಎಂದು ಗುರುತಿಸಲಾಗಿದೆ. ಮಾಹಿತಿ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ ಎಂದು ಅವರು ತಿಳಿಸಿದ್ದಾರೆ.

ಶ್ರೀಕೃಷ್ಣ ಮೂರ್ತಿ ವಿಸರ್ಜನೆ ನಂತರ ವಿಗ್ರಹವೊಂದು ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದನ್ನು ನೋಡಿದ ನಂತರ, ಆರು ಜನರು ನದಿಗೆ ಧುಮುಕಿದ್ದಾರೆ.
ಆರು ಜನ ಯುವಕರಲ್ಲಿ ಒಬ್ಬರು ಮಾತ್ರ ಹಿಂತಿರುಗುವಲ್ಲಿ ಯಶಸ್ವಿಯಾಗಿದ್ದು, ಉಳಿದ ಐವರು ಯಮುನೆಯಲ್ಲಿ ಮುಳುಗಿದ್ದಾರೆ. ಮೃತರು ಗ್ರೇಟರ್ ನೋಯ್ಡಾದ ಸಲಾರ್‌ಪುರ ಗ್ರಾಮದ ನಿವಾಸಿಗಳು.
ಐವರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications