ಗೇಮ್ ಆಡಲು ಬಿಡದ ತಾಯಿ-ತಂಗಿಯನ್ನೇ ಕೊಂದ 15ರ ಬಾಲಕ
ನೋಯ್ಡಾ, ಡಿಸೆಂಬರ್ 09: 15 ವರ್ಷದ ಬಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಹೆತ್ತ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ ಹೀನಾತಿಹೀನ, ಬರ್ಬರ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಬಾಲಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಡಿ.4 ರ ಸೋಮವಾರದಂದು ರಾತ್ರಿ ಈ ಘಟನೆ ನಡೆದಿದ್ದು, ಮಗನೇ ಆರೋಪಿ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಅಂಜಲಿ ಅಗರವಾಲ್(42) ಮತ್ತು ಕನಿಕಾ(12) ಎಂಬುವವರೇ ಕೊಲೆಯಾದ ದುರ್ದೈವಿಗಳು.

ಕ್ರೈಮ್ ಗ್ಯಾಂಗಸ್ಟರ್ ಗೇಮ್ ವೊಂದನ್ನು ರಾತ್ರಿ ಸಮಯದಲ್ಲಿ ಆಡುತ್ತಿದ್ದದ್ದ ಮಗುವಿಗೆ ಅಮ್ಮ ಗದರಿದ್ದಾರೆ. ಓದಿನಲ್ಲಿ ಮುಂದಿರದ ಹುಡುಗ ಸದಾ ಮೊಬೈಲ್ ನಲ್ಲಿ ಗೇಮ್ ಆಡುತ್ತಲೇ ಕಾಲ ಕಳೆಯುತ್ತಿದ್ದ ಇದರಿಂದ ಶಿಕ್ಷಕರಿಂದಲೂ ಬೈಸಿಕೊಂಡಿದ್ದ. ಆದ್ದರಿಂದ ಗೇಮ್ ಆಡದಂತೆ ಮಗನಿಗೆ ತಾಯಿ ಗದರಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ಅಮ್ಮನ ಮೇಲೆ ಹಲ್ಲೆ ಮಾಡಿದ್ದಾನೆ, ತಡೆಯಲು ಬಂದ ತಂಗಿಯ ಮೇಲೂ ಹಲ್ಲೆ ಮಾಡಿದ ಪರಿಣಾಮ ಇಬ್ಬರೂ ಮೃತರಾಗಿದ್ದಾರೆ.
ಇಬ್ಬರೂ ಸೋಮವಾರ ರಾತ್ರಿ 8-11 ಗಂಟೆಯ ಸಮಯದಲ್ಲಿ ಮೃತರಾಗಿರಬಹುದೆಂದು ಮರಣೋತ್ತರ ವರದಿಯಲ್ಲಿ ಹೇಳಲಾಗಿದೆ. ಇಬ್ಬರ ತಲೆಯಲ್ಲೂ ಹಲವು ಗಾಯಗಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications