ಯೋಗಿಯವರೇ ದಯವಿಟ್ಟು ಅಯೋಧ್ಯೆ ಬಗ್ಗೆ ಮೋದಿ ಬಳಿ ಮಾತನಾಡಿ: ದಿಗ್ವಿಜಯ್ ಸಿಂಗ್
ನವದೆಹಲಿ, ಆಗಸ್ಟ್ 03: 'ಯೋಗಿಯವರೇ ದಯವಿಟ್ಟು ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ಕುರಿತು ಪ್ರಧಾನಿ ಮೋದಿಯವರ ಬಳಿ ಮಾತನಾಡಿ' ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನಡೆಸುವುದು ಬೇಡ ಎಂಬುದು ನಮ್ಮ ಅಭಿಪ್ರಾಯ. ಈಗಾಗಲೇ ಅಮಿತ್ ಶಾ ಸೇರಿದಂತೆ ಹಲವು ನಾಯಕರು, ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಒಂದೊಮ್ಮೆ ಕಾರ್ಯಕ್ರಮ ನಡೆದರೆ ಮತ್ತೆ ನೂರಾರು ಮಂದಿಗೆ ಕೊರೊನಾ ಸೋಂಕು ಹರಡಲು ದಾರಿ ಮಾಡಿಕೊಟ್ಟಂತಾಗುತ್ತದೆ.
ಹೀಗಾಗಿ ಭೂಮಿ ಪೂಜೆಯನ್ನು ಮುಂದೂಡುವಂತೆ, ಪ್ರಧಾನಿ ಮನವೊಲಿಸಲು ಪ್ರಯತ್ನ ಮಾಡಿ ಎಂದು ಸಿಂಗ್ ಹೇಳಿದ್ದಾರೆ.

'ಮೋದಿಯವರೇ ಇನ್ನೆಷ್ಟು ಮಂದಿಯನ್ನು ಆಸ್ಪತ್ರೆಗೆ ಕಳುಹಿಸಬೇಕೆಂದಿದ್ದೀರಾ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಪೂಜಾರಿ, ಪೊಲೀಸರು, ಉತ್ತರ ಪ್ರದೇಶ ಸಚಿವರು, ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ, ಅಮಿತ್ ಶಾ ಇವರೆಲ್ಲರಿಗೂ ಸೋಂಕು ತಗುಲಿದೆ.
ಕೇವಲ ಸಾಮಾನ್ಯ ಜನರು ಮಾತ್ರ ಗೃಹಬಂಧನದಲ್ಲಿರಬೇಕೆ, ಉತ್ತರ ಪ್ರದೇಶ ಮುಖ್ಯಮಂತ್ರಿ, ಪ್ರಧಾನಿಗೆ ಈ ನಿಯಮ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಬಿಜೆಪಿ ನಾಯಕಿ ಉಮಾ ಭಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications