ಯಡಿಯೂರಪ್ಪ ಮುಖ್ಯಮಂತ್ರಿ: ಪ್ರಧಾನಿ ಮೋದಿ ಮೌನ!

Recommended Video

      ಯಡಿಯೂರಪ್ಪ ಮುಖ್ಯಮಂತ್ರಿ: ಪ್ರಧಾನಿ ಮೋದಿ ಮೌನ! | Oneindia Kannada

      ಬೆಂಗಳೂರು, ಜುಲೈ 27: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ದಕ್ಷಿಣದಲ್ಲಿ ಬಿಜೆಪಿ ಮತ್ತೆ ಖಾತೆ ತೆರೆದಿದೆ. ಆದರೆ ಇದು ಪ್ರಧಾನಿ ಮೋದಿ ಅವರಿಗೆ ಸಂತಸ ತಂದಿಲ್ಲವೇ ಎಂಬ ಅನುಮಾನವನ್ನು ಮೂಡಿಸುತ್ತಿದೆ.

      ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಈಗಾಗಲೇ ಅಮಿತ್ ಶಾ ಅವರು ಟ್ವಿಟ್ಟರ್‌ ಮೂಲಕ ಶುಭಕೋರಿದ್ದಾರೆ. ಆದರೆ ಮೋದಿ ಅವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

      ಸರ್ಕಾರದ ಯೋಜನೆಗಳ ಮಾಹಿತಿ, ಸೆಲೆಬ್ರಿಟಿಗಳ ಹುಟ್ಟುಹಬ್ಬಕ್ಕೆ ಶುಭಕೋರುವುದು, ಯಾವುದೇ ದಿನಾಚರಣೆ ಹೀಗೆ ಎಲ್ಲವನ್ನೂ ಟ್ವಿಟ್ಟರ್‌ ಮೂಲಕ ವ್ಯಕ್ತಪಡಿಸುವ ಮೋದಿ ಅವರು, ಸಿಎಂ ಆದ ಯಡಿಯೂರಪ್ಪ ಅವರಿಗೆ ಶುಭಾಶಯವನ್ನು ಕೋರಿಲ್ಲ. ದೂರವಾಣಿ ಮೂಲಕ ಶುಭ ಕೋರಿದ ಬಗ್ಗೆಯೂ ವರದಿ ಆಗಿಲ್ಲ.

      Yeddyurappa become CM, Narendra Modi not yet tweeted about it

      ಮೋದಿ ಅವರ ಈ ನಡೆ ಅನುಮಾನ ಮೂಡಿಸಿದ್ದು, ಯಡಿಯೂರಪ್ಪ ಅವರು ಸಿಎಂ ಆಗುವುದು ಮೋದಿ ಅವರಿಗೆ ಇಷ್ಟವಿಲ್ಲವಾ? ಅಥವಾ ಯಡಿಯೂರಪ್ಪ ಅವರು ಸಿಎಂ ಆದ ರೀತಿಯ ಬಗ್ಗೆ ತಕರಾರಿದೆಯಾ? ಎಂಬ ಅನುಮಾನಗಳು ಮೂಡಿವೆ.

      ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 105 ಸ್ಥಾನಗಳು ಬರುವಲ್ಲಿ ಮೋದಿ ಅವರು ಪ್ರಮುಖ ಪಾತ್ರ ವಹಿಸಿದ್ದರು, ತಮ್ಮ ಆಡಳಿತಾವಧಿಯಲ್ಲಿಯೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಬೇಕು ಎಂಬುದು ಮೋದಿ ಅವರ ಉಮೇದಾಗಿತ್ತು, ಕಳೆದ ಬಾರಿ ಇದನ್ನು ಅವರು ಹಲವಾರು ಬಾರಿ ಹೇಳಿದ್ದರು.

      ಮೋದಿ ಅವರ ಆಸೆಯಂತೆ ಯಡಿಯೂರಪ್ಪ ಅವರು ಸರ್ಕಾರವನ್ನು ರಚಿಸಿದ್ದಾರಾದರೂ, ಸರ್ಕಾರ ರಚಿಸಿರುವ ರೀತಿ ಮೋದಿ ಅವರಿಗೆ ಸರಿಬಂದಂತಿಲ್ಲ. ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಲು ಮೋದಿ ಅವರ ವಿರೋಧವಿತ್ತು ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+