• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿ.11ರಿಂದ ಸಂಸತ್ ನ ಚಳಿಗಾಲದ ಅಧಿವೇಶನ: ಸಂಪುಟ ಸಮಿತಿ ಶಿಫಾರಸು

|

ನವದೆಹಲಿ, ನವೆಂಬರ್ 14 : ಮುಂದಿನ ತಿಂಗಳ ಡಿಸೆಂಬರ್ 11ರಿಂದ ಮುಂದಿನ ವರ್ಷದ ಜನವರಿ 8ರ ತನಕ ಸಂಸತ್ ನ ಚಳಿಗಾಲದ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ಮಾಹಿತಿ ನೀಡಿವೆ.

ಕ್ರಿಮಿನಲ್ ಆರೋಪಿ ಅಭ್ಯರ್ಥಿಗಳ ಅನರ್ಹತೆ: ಸಂಸತ್ತಿಗೆ ಹೊಣೆ ಹೊರಿಸಿದ ಸುಪ್ರೀಂಕೋರ್ಟ್

ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ನೇತೃತ್ವದ ಸದನ ಸಮಿತಿಯು ಮಂಗಳವಾರ ರಾತ್ರಿ ಅವರ ಮನೆಯಲ್ಲೇ ಸಭೆ ನಡೆಸಿದ್ದು, ಅಧಿವೇಶನದ ದಿನಾಂಕದ ಬಗ್ಗೆ ತೀರ್ಮಾನ ಕೈಗೊಂಡಿದೆ. ಸಾಮಾನ್ಯವಾಗಿ ಸಂಸತ್ ನ ಚಳಿಗಾಲದ ಅಧಿವೇಶನ ನವೆಂಬರ್ ನಲ್ಲಿ ನಡೆಯುತ್ತದೆ. ಸತತವಾಗಿ ಇದು ಎರಡನೇ ವರ್ಷ ಡಿಸೆಂಬರ್ ನಲ್ಲಿ ಆರಂಭವಾಗಲಿದೆ.

ಅಂದಹಾಗೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಹಾಗೂ ಮಿಜೋರಾಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಸಂಸತ್ ನ ಚಳಿಗಾಲದ ಅಧಿವೇಶನ ಮುಂದಕ್ಕೆ ಹಾಕಲಾಗಿದೆ ಎನ್ನಲಾಗುತ್ತಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯು ವಿವಿಧ ಹಂತದಲ್ಲಿ ನವೆಂಬರ್ 12ರಿಂದ ಡಿಸೆಂಬರ್ 7ರ ಮಧ್ಯೆ ನಡೆದು, ಫಲಿತಾಂಶವು ಡಿಸೆಂಬರ್ 11ರಂದು ಪ್ರಕಟವಾಗಲಿದೆ.

English summary
The Cabinet Committee on Parliamentary Affairs (CCPA) has recommended convening of the Winter Session of Parliament from December 11 to January 8, official sources said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X