• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಷರತ್ತು ಹಾಕಿ ಕಾಂಗ್ರೆಸ್‌ಗೆ ಬೆದರಿಕೆ ಒಡ್ಡಿದ ಮಾಯಾವತಿ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಅಲ್ಪ ಸೀಟುಗಳ ಕೊರತೆ ಉಂಟಾಗಿರುವ ಕಾಂಗ್ರೆಸ್‌ಗೆ ಮಾಯಾವತಿ ಬೆಂಬಲ ನೀಡಿದ್ದರು. ಪಕ್ಷವು ಹೀಗೆಯೇ ಬೆಂಬಲ ಮುಂದುವರಿಸಬೇಕೆಂದರೆ ತಮ್ಮ ಷರತ್ತು ಈಡೇರಿಸುವಂತೆ ಹೇಳಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ಪರಿಶಿಷ್ಟ ಜಾತಿಯ ಪ್ರತಿಭಟನಾಕಾರರು ದೇಶಾದ್ಯಂತ ನಡೆಸಿದ ಪ್ರತಿಭಟನೆ ವೇಳೆ 'ಅಮಾಯಕರ' ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳದೆ ಇದ್ದರೆ ತಮ್ಮ ಬೆಂಬಲವನ್ನು ಮರುಪರಿಗಣಿಸಬೇಕಾಗುತ್ತದೆ ಎಂದು ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ಗೆ ಎಚ್ಚರಿಕೆ ನೀಡುವುದು ಅಗತ್ಯ. ಈಗ ಸುಮ್ಮನೆ ಘೋಷಣೆ ಮಾಡಿದರಷ್ಟೇ ಸಾಕಾಗುವುದಿಲ್ಲ. ಕಾಗದದ ಮೇಲೆ ಭರವಸೆ ನೀಡುವುದನ್ನು ನೋಡಿರುವ ಜನರು ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ತಿಳಿದಿದ್ದಾರೆ. ಈ ಗ್ರಹಿಕೆಯನ್ನು ಸುಳ್ಳಾಗಿಸಲು ಸಾಧ್ಯವೇ ಎಂಬುದು ಕಾಂಗ್ರೆಸ್ ಮೇಲೆ ಅವಲಂಬಿತವಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.

ಎಸ್ ಸಿ ಮತ್ತು ಎಸ್ ಟಿ ಕಾಯ್ದೆಯಲ್ಲಿ ತಿದ್ದುಪಡಿ ತರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿತ್ತು.

English summary
BSP chief Mayawati said she would reconsider her support if the cases filed in the 2 states against innocent during all India strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X