"2016ರೊಳಗೆ ರಾಮ ಮಂದಿರ ನಿರ್ಮಾಣ ಶುರುವಾಗದಿದ್ದರೆ..."
ನವದೆಹಲಿ, ಫೆ.2: 2016ರೊಳಗೆ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ ಶುರುವಾಗದಿದ್ದರೆ ವಿಧಿ ಇಲ್ಲದೆ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ನ ಸುವರ್ಣ ಸಂಭ್ರಮದಲ್ಲಿ ಪಾಲ್ಗೊಂಡು ಸುಬ್ರಮಣಿಯನ್ ಸ್ವಾಮಿ ಮಾತನಾಡುತ್ತಿದ್ದರು. ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದ್ದು, 2016ರೊಳಗೆ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮಂದಿರ ನಿರ್ಮಾಣ ಕಾರ್ಯ ಆರಂಭಿಸುವ ವಿಶ್ವಾಸವಿದೆ.

ಅದರೆ, ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಕಾನೂನಿನ ಮೂಲಕ ಹೋರಾಟಕ್ಕೆ ಸಿದ್ಧರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. [ಅಮೀರ್ 'ಪಿಕೆ' ಚಿತ್ರಕ್ಕೆ ಐಎಸ್ಐ ಹಣ, ಸ್ವಾಮಿ ಟ್ವೀಟ್ ]
ಶಾಲೆಗಳಲ್ಲಿ ನಮ್ಮ ಮಕ್ಕಳು ಓದುವ ಇತಿಹಾಸ ಪಾಠವೆಲ್ಲ ಬ್ರಿಟಿಷರು ಬರೆದಿಟ್ಟ ಅರ್ಧಸತ್ಯದ ಕಥೆಗಳಾಗಿವೆ. ಭಾರತದ ನೈಜ ಇತಿಹಾಸ ಸಾರುವ ಪಠ್ಯಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
Dr.@Swamy39 takes up Ram temple issue with PM Modi http://t.co/hQVuzVQDXT #JaiShriRam
— T.S.Pai (@Imtspai) February 2, 2015 ವಿವಿಧ ರಾಜಕೀಯ ಪಕ್ಷಗಳಲ್ಲಿ ಶೇ 80ರಷ್ಟಕ್ಕೂ ಅಧಿಕ ಹಿಂದೂಗಳಿದ್ದು, ಧರ್ಮಕ್ಕಾಗಿ ಮುಂದೆ ನಿಲ್ಲಬೇಕಿದೆ. ಮುಂದಿನ ಪೀಳಿಗೆಗೆ ಧರ್ಮದ ಮಹತ್ವವನ್ನು ಸಾರಬೇಕಿದೆ ಎಂದಿದ್ದಾರೆ. (ಪಿಟಿಐ)












Click it and Unblock the Notifications