ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೀರ್ 'ಪಿಕೆ' ಚಿತ್ರಕ್ಕೆ ಐಎಸ್ಐ ಹಣ, ಸ್ವಾಮಿ ಟ್ವೀಟ್

By Mahesh
|
Google Oneindia Kannada News

ಮುಂಬೈ, ಡಿ.29: ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರದಲ್ಲಿ ಹಿಂದೂ ದೇವರುಗಳು ಮತ್ತು ಧರ್ಮಗುರುಗಳನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ವಿವಿಧ ಚಿತ್ರಮಂದಿರಗಳ ಮೇಲೆ ದಾಳಿ ಮಾಡಿವೆ. ಇದರ ಬೆನ್ನಲ್ಲೇ ಈ ಚಿತ್ರಕ್ಕೆ ಪಾಕಿಸ್ತಾನದ ಐಎಸ್ಐ ಹಣ ತೊಡಗಿಸಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಅಹಮದಾಬಾದ್, ಮುಂಬೈ ಮತ್ತು ಭೋಪಾಲ್ ನಗರಗಳಲ್ಲಿ ಹಿಂದೂ ಸಂಘಟನೆಗಳ ಸದಸ್ಯರು ಚಿತ್ರ ಮಂದಿರಗಳಿಗೆ ನುಗ್ಗಿ ದಾಂಧಲೆ ಮಾಡಿ ಕಿಟಿಕಿ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ. ಚಿತ್ರಮಂದಿರಗಳು ಪ್ರದರ್ಶನವನ್ನು ರದ್ದುಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ದಾಳಿಗಳನ್ನು ನಡೆಸುವುದಾಗಿ ಎಚ್ಚರಿಸಿದೆ.

Aamir Khan in trouble

'ಪಿಕೆ' ಚಿತ್ರವನ್ನು ಪ್ರದರ್ಶಿಸದಂತೆ ನಾವು ನೀಡಿದ್ದ ಸೂಚನೆಯನ್ನು ಧಿಕ್ಕರಿಸಿದ್ದಾರೆ ಎಂದು ಆಪಾದಿಸಿ ಈ ಹಿಂದೂ ಸಂಘಟನೆಗಳ ಸದಸ್ಯರು ಅಹಮದಾಬಾದಿನ ಸಿಟಿ ಗೋಲ್ಡ್ ಮಲ್ಟಿಪ್ಲೆಕ್ಸ್ ಮತ್ತು ಆಶ್ರಮ ರಸ್ತೆಯ ಶಿವ ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿ ಕಿಟಕಿ ಗಾಜುಗಳನ್ನು ಧ್ವಂಸ ಮಾಡಿದ್ದಾರೆ.

ಸ್ವಾಮಿ ಟ್ವೀಟ್ : ಪಿಕಿ ಚಿತ್ರಕ್ಕೆ ಯಾರು ಆರ್ಥಿಕ ನೆರವು ನೀಡಿದ್ದಾರೆ? ದುಬೈ ಹಾಗೂ ಐಎಸ್ ಐ ಹಾಗೂ ಡಿಆರ್ ಐ ನಿಂದ ಹಣ ತೊಡಗಿಸಲಾಗಿದೆ ಈ ಬಗ್ಗೆ ತನಿಖೆಯಾಗಲಿ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಅಮೀರ್ ಖಾನ್ ಅವರು ದುಬೈ ಮೂಲದ ಕಂಪನಿ ಚಿತ್ರದ ಮಾರ್ಕೆಟಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಉದಾಹರಿಸಲಾಗಿದೆ.

ಆರ್ಥಿಕ ಅವ್ಯವಹಾರ ಬಗ್ಗೆ ದೂರು ಕೇಳಿ ಬಂದಿರುವುದರಿಂದ ಕಂದಾಯ ಇಲಾಖೆ ಗುಪ್ತಚರ ವಿಭಾಗ(ಡಿಆರ್ ಐ) ಈಗಾಗಲೇ ಅಬಕಾರಿ ಇಲಾಖೆ ನೆರವಿನಿಂದ ತನಿಖೆ ಆರಂಭಿಸಿದೆ. ನಿರ್ದೇಶಕ ರಾಜ್ ಕುಮಾರ್ ಹಿರಾನಿ ಹಾಗೂ ವಿಧು ವಿನೋದ್ ಚೋಪ್ರಾ ಅಲ್ಲದೆ ಅಮೀರ್ ಖಾನ್ ಕೂಡಾ ತನಿಖೆಗೆ ಒಳಪಡಬೇಕಾಗುತ್ತದೆ. ಡಿ.19ರಂದು ತೆರೆಕಂಡ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

English summary
Bharatiya Janata Party (BJP) leader Subramanian Swamy ignited controversy over Aamir Khan starrer movie PK. Now, the leader cited link of Pakistan's ISI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X