'ಸೈನಿಕರನ್ನು ನಿರಾಯುಧವಾಗಿ ಕಳುಹಿಸಿದ್ದು ಏಕೆ?'- ರಾಹುಲ್ ಗಾಂಧಿ
ದೆಹಲಿ, ಜೂನ್ 18: ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರನ್ನು ಹಿಂದೆ ಕಳುಹಿಸಲು ಹೋದ ಭಾರತೀಯ ಸೈನಿಕರು ಏಕೆ ನಿರಾಯುಧರಾಗಿದ್ದರು? ಆಯುಧಗಳಿಲ್ಲದೇ ಅವರನ್ನು ಏಕೆ ಕಳುಹಿಸಿದ್ದು? ಇದಕ್ಕೆ ಯಾರು ಹೊಣೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಲಡಾಖ್ ಗಡಿ ಭಾಗದಲ್ಲಿ ಘರ್ಷಣೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತಿ ಯೋಧರೊಬ್ಬರ ಸಂದರ್ಶನವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ''ನಿರಾಯುಧರಾಗಿದ್ದ ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ?'' ಎಂದು ಟೀಕಿಸಿದ್ದಾರೆ.
कौन ज़िम्मेदार है? pic.twitter.com/UsRSWV6mKs
— Rahul Gandhi (@RahulGandhi) June 18, 2020
ಲಡಾಖ್ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರ ಕುರಿತು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರು ಉತ್ತರಿಸಬೇಕಿದೆ ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಈ ಘರ್ಷಣೆ ವೇಳೆ ಭಾರತೀಯ ಯೋಧರ ಸಂಖ್ಯೆ ಕಡಿಮೆ ಇತ್ತು ಹಾಗೂ ಚೀನಾ ಯೋಧರು ಹೆಚ್ಚಿದ್ದರು, ಜೊತೆಗೆ ಅವರ ಬಳಿ ಆಯುಧಗಳಿದ್ದವು. ಭಾರತೀಯರ ಬಳಿ ಆಯುಧಗಳು ಇರಲಿಲ್ಲ ಎಂದು ಹೇಳಲಾಗಿದೆ.
ಮೋದಿ ಮೌನವೇಕೆ? ಏಕೆ ಅಡಗಿಕೊಂಡಿದ್ದಾರೆ? ಪಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಲಡಾಖ್ ಕಣಿವೆಯಲ್ಲಿ ಭಾರತೀಯ ಸೈನಿಕರು ಹತ್ಯೆಯಾದರೂ, ಚೀನಾ ಹೆಸರನ್ನು ಉಲ್ಲೇಖಿಸದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕ್ರಮವನ್ನು ರಾಹುಲ್ ವಿರೋಧಿಸಿದ್ದಾರೆ. ''ಚೀನಾ ಹೆಸರು ಪ್ರಸ್ತಾಪಿಸದೇ ಭಾರತೀಯ ಸೇನೆಗೆ ಅಪಮಾನ ಮಾಡಲಾಗಿದೆ'' ಎಂದು ಬುಧವಾರ ಖಂಡಿಸಿದ್ದಾರೆ.
''ಇದು ತುಂಬಾ ನೋವಿನಿಂದ ಕೂಡಿದ್ದರೆ: ನಿಮ್ಮ ಟ್ವೀಟ್‌ನಲ್ಲಿ ಚೀನಾವನ್ನು ಹೆಸರಿಸದೆ ಭಾರತೀಯ ಸೈನ್ಯವನ್ನು ಏಕೆ ಅವಮಾನಿಸುತ್ತೀರಿ? ಸೈನಿಕರು ಹುತಾತ್ಮರಾಗಿದ್ದರೂ ಸಂತಾಪ ಸೂಚಿಸಲು 2 ದಿನಗಳನ್ನು ಏಕೆ ತೆಗೆದುಕೊಳ್ಳಬೇಕು? ಯೋಧರು ಹುತಾತ್ಮರಾಗಿರುವ ಸಂದರ್ಭದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದು ಏಕೆ" ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ರಾತ್ರಿ (ಜೂನ್ 15) ಪೂರ್ವ ಲಡಾಖ್‌ನ ಕಣಿವೆ ಪ್ರದೇಶದ ಗಡಿ ಭಾಗದಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಘರ್ಷಣೆಯಾಗಿದ್ದು, ಇದರಲ್ಲಿ ಓರ್ವ ಸೈನ್ಯಾಧಿಕಾರಿ ಸೇರಿ ಇಪತ್ತು ಮಂದಿ ಯೋಧರನ್ನು ಹತ್ಯೆಯಾಗಿದ್ದಾರೆ.