ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ದೇಶಕ್ಕೆ ಬಾಗಿಲು ಮುಚ್ಚಿದ ಭಾರತ ಆ ಒಂದು ರಾಷ್ಟ್ರಕ್ಕೆ ಅವಕಾಶ ಕೊಟ್ಟಿದ್ಯಾ?

|
Google Oneindia Kannada News

ದೆಹಲಿ, ಮಾರ್ಚ್ 19: ಭಾರತದಲ್ಲಿ ಕೊರೊನಾ ವೈರಸ್‌ ಹರಡದಂತೆ ತಡೆಯಲು ಮೊದಲು ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿ ಎಂಬ ಸಲಹೆ ಹೆಚ್ಚಿತ್ತು. ಯಾಕಂದ್ರೆ, ವಿದೇಶದಿಂದ ಬಂದಂತಹ ಪ್ರಯಾಣಿಕರಿಂದಲೇ ಈ ವೈರಸ್ ಭಾರತಕ್ಕೆ ಬಂದಿದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೊರೊನಾ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ, ಯೂರೋಪಿನ 33 ದೇಶಗಳು ಸೇರಿದಂತೆ ವಿಶ್ವದ ಹಲವು ದೇಶಗಳ ನಿರ್ದಿಷ್ಟ ಪ್ರಯಾಣಿಕರಿಗೆ ನಿರ್ಬಂಧ ಹೇರಿದೆ.

ಕೇರಳದ ಕೊರೊನಾ ಪೀಡಿತನಿಗೂ ವರದಾನವಾಗುತ್ತಾ Anti-HIV ಡ್ರಗ್ಸ್?ಕೇರಳದ ಕೊರೊನಾ ಪೀಡಿತನಿಗೂ ವರದಾನವಾಗುತ್ತಾ Anti-HIV ಡ್ರಗ್ಸ್?

ಆದರೆ, ಒಂದು ದೇಶವನ್ನು ಪಟ್ಟಿಯಿಂದ ಕೈಬಿಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಹಲವು ದೇಶಗಳ ನಿರ್ದಿಷ್ಟ ಪ್ರಯಾಣಿಕರ ಆಗಮನವನ್ನು ತಡೆಯಲು ಸೂಚಿಸಿರುವ ಸರ್ಕಾರ, ಆ ಒಂದು ರಾಷ್ಟ್ರಕ್ಕೆ ವಿನಾಯಿತಿ ನೀಡಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು 'ದಿ ಟೆಲಿಗ್ರಾಫ್' ವೆಬ್ ಸೈಟ್ ವರದಿ ಮಾಡಿದೆ. ಯಾವುದು ಆ ದೇಶ? ಮುಂದೆ ಓದಿ...

ಸಂಸತ್‌ನಲ್ಲಿ ಉಲ್ಲೇಖಿಸಿದ ದೇಶಗಳು ಹೆಸರು?

ಸಂಸತ್‌ನಲ್ಲಿ ಉಲ್ಲೇಖಿಸಿದ ದೇಶಗಳು ಹೆಸರು?

''ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐಸ್ಲ್ಯಾಂಡ್, ಹಂಗೇರಿ, ಐರ್ಲೆಂಡ್, ಇಟಲಿ, ಲಾಟ್ವಿಯಾ, ಲಿಚ್ಟೆನ್‌ಸ್ಟೈನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಾಲ್ಟಾ, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಟರ್ಕಿ ಮತ್ತು ಯುಕೆ ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ತಿಳಿಸಿತ್ತು.

ಯುಎಸ್ ಹೆಸರಿಲ್ಲ ಏಕೆ?

ಯುಎಸ್ ಹೆಸರಿಲ್ಲ ಏಕೆ?

ಯೂರೋಪ್ ರಾಷ್ಟ್ರಗಳಿಗೆ ನಿರ್ಬಂಧ ಹೇರಿರುವ ಭಾರತ ಸರ್ಕಾರ, ಯುಎಸ್‌ ದೇಶಕ್ಕೆ ಏಕೆ ರಿಯಾಯಿತಿ ನೀಡಿದೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ವಿದೇಶಾಂಗ ಸಚಿವಾಲಯ ಪಟ್ಟಿಯಲ್ಲಿ ಯುಎಸ್‌ ಹೆಸರು ಇಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತು 'ದಿ ಟೆಲಿಗ್ರಾಫ್' ವೆಬ್ ಸೈಟ್ ವರದಿ ಬಿತ್ತರಿಸಿದ್ದು, ಅಮೆರಿಕ ವಿಷಯದಲ್ಲಿ ಭಾರತ ಇಂತಹ ನಿರ್ಧಾರ ಏಕೆ ತೆಗೆದುಕೊಂಡಿದೆ ಎಂಬ ಚರ್ಚೆ ಆರಂಭವಾಗಿದೆ.

ಕೊರೊನಾ ವೈರಸ್: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೂ ಮಾರ್ಗಸೂಚಿ ಅನ್ವಯಕೊರೊನಾ ವೈರಸ್: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೂ ಮಾರ್ಗಸೂಚಿ ಅನ್ವಯ

ಅಮೆರಿಕದಿಂದ ಬಂದ ಟೆಕ್ಕಿಯಲ್ಲೂ ಕೊರೊನಾ

ಅಮೆರಿಕದಿಂದ ಬಂದ ಟೆಕ್ಕಿಯಲ್ಲೂ ಕೊರೊನಾ

ಅಮೆರಿಕದಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ಟೆಕ್ಕಿಯಲ್ಲಿ ಸೋಂಕು ಪತ್ತೆಯಾಗಿತ್ತು. ಭಾರತದಲ್ಲಿ ಸೋಂಕಿ ಕಾಣಿಸಿಕೊಂಡವರ ಪೈಕಿ ಯುಎಸ್‌ನಿಂದ ಬಂದವರು ಕೂಡ ಇದ್ದಾರೆ. ಹೀಗಿರುವಾಗ ಅಮೆರಿಕ ವಿಮಾನಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಸರಿಯೇ ಎಂಬ ಪ್ರಶ್ನೆ ಎದುರಾಗುತ್ತಿದೆ.

ಕಡ್ಡಾಯ ಗೃಹಬಂಧನ

ಕಡ್ಡಾಯ ಗೃಹಬಂಧನ

ಚೀನಾ, ಕೊರಿಯಾ, ಇರಾನ್, ಇಟಲಿ, ಫ್ರಾನ್ಸ್, ಕತಾರ್, ಸ್ಪೇನ್, ಜರ್ಮನಿ, ದುಬೈ, ಒಮನ್, ಕುವೈತ್ ದೇಶಗಳಿಂದ ಬಂದ ಪ್ರಯಾಣಿಕರಿಗೆ ಕಡ್ಡಾಯವಾಗಿ ಗೃಹ ಬಂಧನದಲ್ಲಿಡಲು ಸರ್ಕಾರ ನಿರ್ಧರಿಸಿದೆ. ಈ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಹೆಚ್ಚು ಕಾಣಿಸಿಕೊಂಡಿದ್ದು, ಇಲ್ಲಿಂದ ಬಂದ ಪ್ರಯಾಣಿಕರಿಂದಲೇ ಭಾರತಕ್ಕೂ ಸೋಂಕು ತಗುಲಿದೆ.

ಕೊರೊನಾ ಎಫೆಕ್ಟ್: ವಿಶ್ವದ 2.5 ಕೋಟಿ ಕಾರ್ಮಿಕರ ಕೆಲಸಕ್ಕೆ ಕುತ್ತುಕೊರೊನಾ ಎಫೆಕ್ಟ್: ವಿಶ್ವದ 2.5 ಕೋಟಿ ಕಾರ್ಮಿಕರ ಕೆಲಸಕ್ಕೆ ಕುತ್ತು

ಭಾರತದಲ್ಲಿ ನಾಲ್ಕನೇ ಸಾವು

ಭಾರತದಲ್ಲಿ ನಾಲ್ಕನೇ ಸಾವು

ಭಾರತದಲ್ಲಿ ಒಟ್ಟು 174 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರ, ದೆಹಲಿ ಹಾಗೂ ಕರ್ನಾಟಕದಲ್ಲಿ ತಲಾ ಒಬ್ಬೊಬ್ಬರು ಬಲಿಯಾಗಿದ್ದರು. ಇಂದು ಪಂಜಾಬ್‌ನಲ್ಲಿ ನಾಲ್ಕನೇ ಸಾವು ಸಂಭವಿಸಿದೆ. ಈ ವ್ಯಕ್ತಿಯೂ ವಿದೇಶದಿಂದ ಬಂದಿದ್ದರು ಎಂಬ ಮಾಹಿತಿ ಸಿಕ್ಕಿದೆ.

English summary
Coronavirus Crisis: Indian Government announces shut its doors to all intending travelers. why this order is not applied to America?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X