ದೆಹಲಿ ಅತ್ಯಾಚಾರ ಸಂತ್ರಸ್ತೆಯ ತಾಯಿ ಒಡಲಾಳದ ನೋವು

ನವದೆಹಲಿ, ಮಾರ್ಚ್ 2: ಏನೂ ಬದಲಾಗಲ್ಲ. ಸಾವಿರಾರು ಕಾನೂನುಗಳನ್ನು ಮಾಡಿದ್ದಾರೆ ಹಾಗೂ ಇನ್ನು ಮುಂದೆಯೂ ಮಾಡುತ್ತಾರೆ. ಆದರೆ ಕೋರ್ಟ್ ಗಳು ಅದರದೇ ವೇಗದಲ್ಲಿ ಕಾರ್ಯ ನಿರ್ವಹಿಸುತ್ತವೆ. ಸರಕಾರ ಹಾಗೂ ಕೋರ್ಟ್ ಅನ್ನು ಕೇಳಲು ಇಚ್ಛಿಸುತ್ತೇನೆ: ಏಳು ವರ್ಷಗಳಲ್ಲಿ ಒಬ್ಬ ಯುವತಿಗೆ ನ್ಯಾಯ ಸಿಕ್ಕಿಲ್ಲ. ಅತ್ಯಾಚಾರ ನಡೆಯುತ್ತಿರುವ ಯುವತಿಯರು ಹಾಗೂ ಮಹಿಳೆಯರಿಗೆ ಉತ್ತರಿಸುವವರು ಯಾರು?

-ಹೀಗೆ ಅಸಹಾಯಕತೆ ಹಾಗೂ ನೋವಿನಿಂದ ತಮ್ಮ ಒಡಲಾಳದ ನೋವನ್ನು ಹೊರ ಹಾಕಿದ್ದಾರೆ ದೆಹಲಿಯಲ್ಲಿ ನಡೆದಿದ್ದ ಅತ್ಯಂತ ಹೇಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾದೇವಿ. ತಮ್ಮ ಮಗಳ ಮೇಲೆ ನಡೆದ ಅತ್ಯಾಚಾರದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗದಿರುವ ಬಗ್ಗೆ ಅವರ ಸಹನೆ ಮುಗಿದು ಹೋಗಿ, ಈ ರೀತಿಯ ಬೇಸರ ತೋಡಿಕೊಂಡಿದ್ದಾರೆ.

Asha Devi

2012ರ ದೆಹಲಿ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರು ದೆಹಲಿಯ ಪಟಿಯಾಲ ಕೋರ್ಟ್ ಎದುರು, ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಕ್ಯುರೇಟಿವ್ ಅರ್ಜಿಯನ್ನು ಶೀಘ್ರದಲ್ಲೇ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಈಗ ವಿವಿಧ ವಲಯಗಳಿಂದ ಆಕ್ರೋಶ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+