ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ವಧು-ವರರು ಮೆಚ್ಚಿದರಾಯ್ತು, ಮದುವೆಯಲ್ಲಿ ಬೇರಾರೂ ತಲೆಹಾಕಬೇಕಿಲ್ಲ!"

|
Google Oneindia Kannada News

ನವದೆಹಲಿ, ಫೆಬ್ರವರಿ 05: "ಇಬ್ಬರು ವಯಸ್ಕರು ಪರಸ್ಪರ ಮೆಚ್ಚಿ ಮದುವೆಯಾದರೆ ಅವರ ನಡುವಲ್ಲಿ ಮಧ್ಯಸ್ಥಿಕೆ ವಹಿಸುವುದಕ್ಕೆ ಯಾರಿಗೂ ಹಕ್ಕಿಲ್ಲ" ಎಂಬ ಮಹತ್ವದ ಹೇಳಿಕೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

ಶಕ್ತಿ ವಾಹಿನಿ ಎಂಬ ನಾನ್ ಪ್ರಾಫಿಟ್ ಸಂಸ್ಥೆಯೊಂದು ಹೂಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ಇಬ್ಬರು ವಯಸ್ಕರು ಪರಸ್ಪರ ಒಪ್ಪಿ ಮದುವೆಯಾದರೆ ಆ ಮದುವೆಯನ್ನು ಮುರಿಯುವುದಕ್ಕೆ ಪಾಲಕರಿಗಾಗಲಿ, ಸಮಾಜಕ್ಕಾಗಲೀ, ಅಥವಾ ಇನ್ಯಾವುದೇ ಸಂಘ-ಸಂಸ್ಥೆಗಾಗಲೀ ಅಧಿಕಾರವಿಲ್ಲ' ಎಂದಿದೆ.

ಜಾತಿ ನಿರ್ಧಾರವಾಗುವುದು ಹುಟ್ಟಿನಿಂದ, ಮದುವೆಯಿಂದಲ್ಲ: ಸುಪ್ರೀಂ ಕೋರ್ಟ್ಜಾತಿ ನಿರ್ಧಾರವಾಗುವುದು ಹುಟ್ಟಿನಿಂದ, ಮದುವೆಯಿಂದಲ್ಲ: ಸುಪ್ರೀಂ ಕೋರ್ಟ್

ಇತ್ತೀಚೆಗೆ ಮರ್ಯಾದಾ ಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಮನಗಂಡ ಸುಪ್ರೀಂ ಕೋರ್ಟ್, ಇಂಥ ಹೀನಾತಿಹೀನ ಪ್ರಕರಣಗಳಿಗೆ ತಿಲಾಂಜಲಿ ಹಾಡುವ ಉದ್ದೇಶದಿಂದ ಈ ಹೇಳಿಕೆ ನೀಡಿದೆ.

When 2 adults get married no one has the right to interefere:SC

ಇತ್ತೀಚೆಗಷ್ಟೇ ದೆಹಲಿಯಲ್ಲಿ ಮುಸ್ಲಿಂ ಕುಟುಂಬವೊಂದು ತ್ಮ ಮಗಳನ್ನು ಪ್ರೀತಿಸುತ್ತಿದ್ದ ಹಿಂದು ಯುವಕನನ್ನು ಕೊಲೆ ಮಾಡಿದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

English summary
"When two adults marry, no one has the right to interfere" Chief Justice of India, Dipak Mishra said on Feb 5th. To stop crime of honor killing Supereme court took this decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X