ಕಾಲ್, ಚಾಟ್ ಸೇವೆಗಳಿಗೆ ಶುಲ್ಕ ನಿಗದಿಸಲಿರುವ ವಾಟ್ಸಾಪ್

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 8: ತಾನು ನೀಡುತ್ತಿರುವ ಕಾಲ್ ಹಾಗೂ ಚಾಟ್ ಸೇವೆಗಳಿಗೆ ಶೀಘ್ರದಲ್ಲೇ ಶುಲ್ಕ ಪದ್ಧತಿಯನ್ನು ಜಾರಿಗೊಳಿಸಲು ವಾಟ್ಸಾಪ್ ನಿರ್ಧರಿಸಿದೆ.

ವಾಟ್ಸಾಪಿನಿಂದ ಹಣ ವರ್ಗಾವಣೆ ಶೀಘ್ರದಲ್ಲೇ ಜಾರಿ!

ಆದರೆ, ಈ ಶುಲ್ಕ ನಿಗದಿಯು ವಾಟ್ಸಾಪ್ ಸದ್ಯಕ್ಕೆ ನೀಡುತ್ತಿರುವ ಬ್ಯುಸಿನೆಸ್ ಸೇವೆಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಹೇಳಲಾಗಿದೆ. ಸಣ್ಣ ಪುಟ್ಟ ಕಂಪನಿಗಳು ಸದ್ಯಕ್ಕೆ ಈ ಸೇವೆಯನ್ನು ಉಪಯೋಗಿಸುತ್ತಿವೆ.

WhatsApp to start charging money soon

ವಾಟ್ಸಾಪ್ ಗ್ರೂಪ್ ಗಳ ಮೂಲಕ ತಮ್ಮ ಸಹವರ್ತಿಗಳೊಂದಿಗೆ ಮಾತುಕತೆ, ಗ್ರಾಹಕರೊಂದಿಗೆ ನೇರ ಮಾಹಿತಿ ವಿನಿಮಯ ಮುಂತಾದವುಗಳನ್ನು ಆಯಾ ಕಂಪನಿಗಳು ವಿಡಿಯೋ ಕಾಲ್ ಅಥವಾ ಚಾಟಿಂಗ್ ಮೂಲಕ ನಡೆಸುತ್ತಿವೆ. ಈ ಸೇವೆಗಳನ್ನು ಶೀಘ್ರದಲ್ಲೇ ಮೇಲ್ಮಟ್ಟಕ್ಕೆ ಏರಿಸಲಿರುವ ಸಂಸ್ಥೆಯು ಆ ಹೊಸ ಫೀಚರ್ ಗಳನ್ನು ಹೊಂದಲು ಶುಲ್ಕವನ್ನು ನಿಗದಿಪಡಿಸಲಿದೆ.

ಪ್ರಸ್ತುತ ವಾಟ್ಸಾಪ್ ಬಳಕೆ ಈಗ ಸುಮಾರು 100 ದೇಶಗಳಲ್ಲಿದೆ. 1.2 ಬಿಲಿಯನ್ ಗ್ರಾಹಕರು ಇದನ್ನು ಉಪಯೋಗಿಸುತ್ತಿದ್ದಾರೆ. ಆದರೂ, ಸಂಸ್ಥೆಗೆ ಹಣದ ಹರಿವು ಅಷ್ಟಕ್ಕಷ್ಟೇ ಆಗಿರುವುದರಿಂದ ಇದರ ಕೆಲವು ಸೇವೆಗಳಿಗೆ ವ್ಯಾವಹಾರಿಕ ರೂಪ ಕೊಡಲು ಸಂಸ್ಥೆ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Is WhatsApp no longer free? The messaging app has announced that it will launch business tools and it will charge for its new features which are going to be launched soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ