ಜೈಲು ಪಾಲಾದ ಕೇಜ್ರಿವಾಲ್ ಆಪ್ತ ಮಾಡಿದ ಹಗರಣವೇನು?

Written By:
Subscribe to Oneindia Kannada

ನವದೆಹಲಿ, ಜುಲೈ 05: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪರಮಾಪ್ತ ಅಧಿಕಾರಿ (Principal Secretary) ರಾಜೇಂದ್ರ ಕುಮಾರ್ ಅವರನ್ನು ಸಿಬಿಐ ತಂಡ ಸೋಮವಾರ ಸಂಜೆ ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಸುದ್ದಿ ಗೊತ್ತೆ ಇದೆ.

ರಾಜೇಂದ್ರ ಕುಮಾರ್ ಜತೆಗೆ ಕೇಜ್ರಿವಾಲ್ ಉಪ ಕಾರ್ಯದರ್ಶಿ ತರುಣ್ ಶರ್ಮಾ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡಿತ್ತು. 50 ಕೋಟಿ ಮೌಲ್ಯದ ಹಗರಣಕ್ಕೆ ಸಂಬಂಧಿಸಿ ಅಧಿಕಾರಿಗಳನ್ನು ಬಂಧಿಸಲಾಗಿತ್ತು.[ಅರವಿಂದ್ ಕೇಜ್ರಿವಾಲ್ ಪರಮಾಪ್ತನನ್ನು ಬಂಧಿಸಿದ ಸಿಬಿಐ]

new delhi

ಸಿಬಿಐ ಅಧಿಕಾರಿಗಳು ಹೇಳುವಂತೆ ರಾಜೇಂದ್ರ ಕುಮಾರ್ ಪ್ರಕರಣದ ಕಿಂಗ್ ಪಿನ್. 2006 ರಿಂದ 2014 ರ ನಡುವಿನ ಅವಧಿಯಲ್ಲಿ ನಡೆದ ಹಗರಣ ಇದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಸರ್ಕಾರದ ಖಜಾನೆಗೆ ಸಂಬಂಧಿಸಿದ 12 ಕೋಟಿ ರು. ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.['ದೆಹಲಿ ಮೇಲೆ ತುರ್ತು ಪರಿಸ್ಥಿತಿ ಹೇರಿದ ನರೇಂದ್ರ ಮೋದಿ']

ಯಾವ ಹಗರಣ?
ಕಳೆದ ವರ್ಷ ದೆಹಲಿ ಆಡಳಿತ ಲೆಕ್ಕ ತೆಗೆದಾಗ ಹಣ ದುರುಪಯೋಗದ ಸಂಗತಿ ಬೆಳಕಿಗೆ ಬಂದಿದೆ. ಎಂಡೋವರ್ ಸಿಸ್ಟಮ್ಸ್ ಎಂಬ ಖಾಸಗಿ ಸಂಸ್ಥೆಯ ನಿರ್ದೇಶಕರು ಮತ್ತು ರಾಜೇಂದ್ರ ಕುಮಾರ್ ಮೇಲೆ ಇದೇ ವೇಳೆ ಸಿಬಿಐ ದೂರು ದಾಖಲಿಸಿಕೊಂಡಿದೆ. ಸರ್ಕಾರಕ್ಕೆ ಸಂಭಂಧಿಸಿದ 9.5 ಕೋಟಿ ರು. ಹಣದ ಗುತ್ತಿಗೆಯನ್ನು ಸಂಸ್ಥೆ ಅಕ್ರಮವಾಗಿ ಪಡೆದಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ಸಿಬಿಐ ಮೂಲಗಳು ಹೇಳುವಂತೆ ಎಂಡೋವರ್ ಸಿಸ್ಟಮ್ಸ್ ಕಂಪನಿಯನ್ನು 2006 ರಲ್ಲಿ ರಾಜೇಂದ್ರ ಕುಮಾರ್ ಆರಂಭ ಮಾಡಿದ್ದರು. ಕುಮಾರ್ ತಮ್ಮ ಸ್ನೇಹಿತರಾದ ಅಶೋಕ್ ಕುಮಾರ್ ಎಂಬುವರನ್ನು ಬಳಸಿಕೊಂಡು ಕಂಪನಿಯನ್ನು ನಡೆಸುತ್ತಿದ್ದರು.

ಸಿಬಿಐ ತನ್ನ ಎಫ್ ಐ ಆರ್ ನಲ್ಲಿ ಹೇಳಿರುಂತೆ, ಒಟ್ಟು 5 ಗುತ್ತಿಗೆಗಳನ್ನು ಕಂಪನಿ ಕಾನೂನಿಗೆ ವಿರುದ್ಧವಾಗಿ ಪಡೆದುಕೊಂಡೊತ್ತು. ರಾಜೇಂದ್ರ ಕುಮಾರ್ ದೆಹಲಿ ಸರ್ಕಾರದ ಐಟಿ ಸಕ್ರೆಟರಿಯಾಗಿದ್ದಾಗ ಈ ಅವ್ಯವಹಾರ ನಡೆದಿತ್ತು.[ಎಎಪಿಯಿಂದ ವಕ್ತಾರೆ ಅಲ್ಕಾ ಲಾಂಬ ಉಚ್ಚಾಟನೆ]

ಅಧಿಕಾರದಲ್ಲಿದ್ದ ಕುಮಾರ್ ಗುತ್ತಿಗೆಯನ್ನು ತಮ್ಮದೇ ಕಂಪನಿಗೆ ಸಿಗುವಂತೆ ಮಾಡಿದ್ದರು. ಅಲ್ಲದೇ ಎರಡು ನಕಲಿ ಕೋಟೆಶನ್ ಗಳನ್ನು ಸಹ ನೀಡಲಾಗಿತ್ತು. ಇದಾದ ಮೇಲೆ ಕುಮಾರ್ ಮತ್ತು ಸಹಚರರ ಮೇಲೆ ದೆಹಲಿಯ ಅಧಿಕಾರಿ ಆಶಿಶ್ ಜೋಷಿ ದೂರು ದಾಖಲು ಮಾಡಿದ್ದರು. ಭ್ರಷ್ಟಾಚಾರ ನಿಗ್ರಹ ದಳದಿಂದ ದೂರು ಸಿಬಿಐ ಗೆ ವರ್ಗಾವಣೆಯಾಗಿತ್ತು.

ಸಿಬಿಐ ಹೇಳುವಂತೆ ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ದಾಖಲೆಗಳಿವೆ. ಹಗರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಇನ್ನಷ್ಟು ಜನರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On Monday the Central Bureau of Investigation arrested Rajender Kumar,the Delhi Chief Minister Arvind Kejriwal's principal secretary. Fourothers including the Chief Minister's Deputy Secretary, Tarun Sharmawere arrested in connection with a scam which the CBI alleges isaround Rs 50 crore worth.
Please Wait while comments are loading...