ಬೆಂಗಳೂರು, ಕೊಲ್ಕತ್ತ, ದೆಹಲಿ ಅಲ್-ಖೈದಾ ಟಾರ್ಗೆಟ್

Posted By: Nayana
Subscribe to Oneindia Kannada

ನವದೆಹಲಿ, ಡಿಸೆಂಬರ್ 28 : ಕಾಶ್ಮೀರವನ್ನು ಹಿಡಿತಕ್ಕೆ ಪಡೆಯಬೇಕಾದರೆ ಬೆಂಗಳೂರು, ನವದೆಹಲಿ ಮತ್ತು ಕೊಲ್ಕತ್ತ ಮೇಲೆ ಆಕ್ರಮಣ ನಡೆಸಬೇಕು ಎಂದು ಕರೆ ನೀಡುವ ವಿಡಿಯೋವೊಂದನ್ನು ಅಲ್ ಖೈದಾ ಬಿಡುಗಡೆ ಮಾಡಿದೆ.

'ಕೇಸರಿ ಭಯೋತ್ಪಾದನೆ' ಹೆಸರಿನಲ್ಲಿ ಆಲ್ ಖೈದಾ ವಿಡಿಯೋ: ಹಿಂದು ನಾಯಕರೇ ಗುರಿ!

ಭಾರತದಲ್ಲಿ ಉಗ್ರ ಚಟುವಟಿಕೆ ಹೆಚ್ಚಿಸಲು ಕಾಶ್ಮೀರದ ಯುವಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಲ್-ಖೈದಾ ದ ಉಸಾಮ ಮೆಹಮೂದ್ ವಿಡಿಯೋದಲ್ಲಿ ಹೇಳಿದ್ದಾನೆ. 42 ನಿಮಿಷದ ಸಂದರ್ಶನ ವಿಡಿಯೋ ಇದಾಗಿದ್ದು ಎಲ್ಲಿ ಹಾಗೂ ಯಾವಾಗ ಚಿತ್ರೀಕರಿಸಿದ್ದು ಎಂಬುದರ ಬಗ್ಗೆ ಸುಳಿವು ಸಿಕ್ಕಿಲ್ಲ.

Wage War on Indian cities to win kashmir, Al-Qaeda says

ಜಿಹಾದ್ ಇನ್ ಕಾಶ್ಮೀರ್- ವೇ ಆಂಡ್ ಡೆಸ್ಟಿನೇಷನ್ ಎಂಬ ಹೆಸರಿನಲ್ಲಿ ವಿಡಿಯೋದ ಎರಡನೇ ಭಾಗವನ್ನು ಬಿಡುಗಡೆ ಮಾಡಲಾಗಿದ್ದು, ಭಾರತದಲ್ಲಿ ಭಯೋತ್ಪಾದಕರ ಚಟುವಟಿಕೆ ಹೆಚ್ಚಿಸುವ ಬಗ್ಗೆ ಮೆಹಮೂದ್ ಹೇಳಿದ್ದಾನೆ. ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕಾದರೆ ಇದಕ್ಕೆ ರಕ್ತ ಮತ್ತು ಬೆವರಿನ ಅಗತ್ಯವಿದೆ.

ಆದರೆ ಭಾರತದ ಕಾಶ್ಮೀರದಂತಹ ಸಣ್ಣ ಪ್ರದೇಶದಲ್ಲಿ6 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಬೆಂಗಳೂರು, ಕೋಲ್ಕತ್ತ ಹಾಗೂ ದೆಹಲಿಯಲ್ಲಿ ದಾಲಿ ಮಾಡುತ್ತೇವೆ. ಭಾರತದ ಇತರ ನಗರಗಳಲ್ಲಿ ದಾಳಿ ನಡೆಸಿದಾಗ ಅಲ್ಲಿ ಭದ್ರತೆ ಹೆಚ್ಚಿಸಲಾಗುವುದು. ಆಗ ಕಾಶ್ಮೀರದಲ್ಲಿ ಭದ್ರತೆ ದುರ್ಬಲಗೊಳ್ಳುತ್ತದೆ. ಇದೇ ಅವಕಾಶ ಬಳಸಿಕೊಂಡು ಕಾಶ್ಮೀರವನ್ನು ವಶಕ್ಕೆ ಪಡೆಯುತ್ತೇವೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Al-Qaeda released a video stating that key to winning kashmir was to wage war on other Indian cities.If it is attacked Kolkatta, Bengaluru and New Delhi , it will come to its senses and release its grip on Kashmir.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ