ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿ: ಹಿರಿಯ ಪತ್ರಕರ್ತ ವಿನೋದ್ ದುವಾ ವಿಧಿವಶ, ಭಾನುವಾರ ಅಂತ್ಯಕ್ರಿಯೆ

|
Google Oneindia Kannada News

ನವದೆಹಲಿ, ಡಿಸೆಂಬರ್ 4: ಹಿರಿಯ ಪತ್ರಕರ್ತ ವಿನೋದ್ ದುವಾ ಶನಿವಾರ ಸಂಜೆ ವೇಳೆ ವಿಧಿವಶರಾಗಿದ್ದಾರೆ. ಈ ವರ್ಷದ ಆರಂಭದಿಂದಲೂ ಕೊವಿಡ್-19 ಸೋಂಕಿನಿಂದ ಬಳಲುತ್ತಿದ್ದ ಅವರ ಸ್ಥಿತಿ ಇತ್ತೀಚಿಗೆ ಹದಗೆಟ್ಟಿತ್ತು. ನವದೆಹಲಿ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಯುತ್ತಿದ್ದ ಅವರು, ಶನಿವಾರ ಚಿಕಿತ್ಸೆ ಫಲಿಕಾರಿಯಾಗದೇ ನಿಧನರಾಗಿದ್ದಾರೆ.

ಭಾರತದಲ್ಲಿ ಟಿವಿ ಪತ್ರಿಕೋದ್ಯಮದ ಪ್ರವರ್ತಕರು ಎನಿಸಿದ್ದ ವಿನೋದ್ ದುವಾ ದೂರದರ್ಶನ ಮತ್ತು ಎನ್‌ಡಿಟಿವಿಯೊಂದಿಗೆ ಇತರ ಟಿವಿ ಚಾನೆಲ್‌ಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಆ ಮೂಲ ಪತ್ರಿಕೋದ್ಯಮಕ್ಕಾಗಿ ತಮ್ಮ ಜೀವನದ ಹೆಚ್ಚಿನ ಭಾಗವನ್ನು ಅರ್ಪಿಸಿದ್ದರು.

ಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆ ಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆ

ತಮ್ಮ ತಂದೆಯ ಸಾವಿನ ಬಗ್ಗೆ ಮಲ್ಲಿಕಾ ದುವಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ವಿನೋದ್ ದುವಾ ಅವರ ಅಂತ್ಯಕ್ರಿಯೆಯು ಭಾನುವಾರ (ಡಿಸೆಂಬರ್ 5) ಮಧ್ಯಾಹ್ನ ಲೋಧಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Veteran journalist Vinod Dua is Passed away at Delhi Hospital on Saturday

ತಂದೆ ಸಾವಿನ ಬಗ್ಗೆ ಮಗಳ ಪೋಸ್ಟ್:

"ನಮ್ಮ ಪೂಜ್ಯ, ನಿರ್ಭೀತ ಮತ್ತು ಅಸಾಧಾರಣವಾಗಿದ್ದ ತಂದೆ, ವಿನೋದ್ ದುವಾ ನಿಧನರಾಗಿದ್ದಾರೆ. ಅವರು ಅಪ್ರತಿಮ ಜೀವನವನ್ನು ನಡೆಸಿದರು, 42 ವರ್ಷಗಳ ಕಾಲ ಪತ್ರಿಕೋದ್ಯಮದ ಉತ್ತುಂಗದ ಶಿಖರಕ್ಕೆ ಏರಿದ್ದರು. ಯಾವಾಗಲೂ, ಯಾವಾಗಲೂ ಅಧಿಕಾರದ ಸತ್ಯವನ್ನು ಮಾತನಾಡುತ್ತಿದ್ದರು. ಅವರು ಈಗ ನಮ್ಮ ತಾಯಿ ಹಾಗೂ ಅವರ ಪ್ರೀತಿಯ ಪತ್ನಿ ಚಿನ್ನಾರೊಂದಿಗೆ ಸ್ವರ್ಗದಲ್ಲಿದ್ದಾರೆ. ಅಲ್ಲಿ ಅವರು ಹಾಡುತ್ತಾ, ಅಡುಗೆ ಮಾಡುತ್ತಾ, ಪರಸ್ಪರ ಡ್ರೈವಿಂಗ್ ಮಾಡುತ್ತಾ ಪ್ರಯಾಣಿಸುತ್ತಿದ್ದಾರೆ," ಎಂದು ಹಿರಿಯ ಪತ್ರಕರ್ತ ವಿನೋದ್ ದುವಾ ಅವರ ಪುತ್ರಿ ಮಲ್ಲಿಕಾ ದುವಾ ಬರೆದುಕೊಂಡಿದ್ದಾರೆ.

ಸಾಂಕ್ರಾಮಿಕ ರೋಗದ ಎರಡನೇ ಹಂತದಲ್ಲಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯು ಹೆಚ್ಚಾಗಿದ್ದ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವಿನೋದ್ ದುವಾ ಮತ್ತು ಅವರ ಪತ್ನಿ ಪದ್ಮಾವತಿ 'ಚಿನ್ನಾ' ದುವಾ ಅವರಲ್ಲಿ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಈ ಹಿಂದೆ ಪತಿ ಹಾಗೂ ಪತ್ನಿಯಿಬ್ಬರೂ ಗುರುಗ್ರಾಮ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರು. ಚಿನ್ನಾ ದುವಾ ಅವರು ಜೂನ್‌ನಲ್ಲಿ ಕೋವಿಡ್ -19 ಸೋಂಕಿನಿಂದ ಅಸುನೀಗಿದರು.

ವಿನೋದ್ ದುವಾ ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಹಲವು ಬಾರಿ ಆನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಕೆಲವು ಬಾರಿ ಆಸ್ಪತ್ರೆಗಳಿಗೂ ದಾಖಲಿಸಲಾಗಿತ್ತು. ಕೊರೊನಾವೈರಸ್ ವಿರುದ್ಧದ ಸುದೀರ್ಘ ಹೋರಾಟದ ನಂತರ ಶನಿವಾರ ವಿನೋದ್ ದುವಾ ಕೂಡಾ ವಿಧಿವಶರಾಗಿದ್ದಾರೆ. ವಿನೋದ್ ದುವಾ ಅವರು ಕ್ಲಿನಿಕಲ್ ಸೈಕಾಲಜಿಸ್ಟ್ ಬಕುಲ್ ದುವಾ ಮತ್ತು ಹಾಸ್ಯನಟಿ ಮಲ್ಲಿಕಾ ದುವಾ ಎಂಬ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

English summary
Veteran journalist Vinod Dua is Passed away at Delhi Hospital on Saturday. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X