• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಹಿರಿಯ ಮುಖಂಡ ಮಾಧವ ಸಿನ್ಹ ಸೋಲಂಕಿ ನಿಧನ; ಮೋದಿ ಸಂತಾಪ

|

ನವದೆಹಲಿ, ಜನವರಿ 09: ಕಾಂಗ್ರೆಸ್ ಹಿರಿಯ ಮುಖಂಡ, ಗುಜರಾತ್ ಮಾಜಿ ಸಿಎಂ ಹಾಗೂ ಮಾಜಿ ವಿದೇಶಾಂಗ ಸಚಿವರೂ ಆಗಿದ್ದ ಮಾಧವ ಸಿನ್ಹ ಸೋಲಂಕಿ (93) ಅವರು ಶನಿವಾರ ನಿಧನರಾಗಿದ್ದಾರೆ.

ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮಾಧವ ಸಿನ್ಹ ಅವರು ದೀರ್ಘಾವಧಿ ಆಡಳಿತ ನಡೆಸಿದ ಮುಖ್ಯಮಂತ್ರಿ ಎನಿಸಿಕೊಂಡಿದ್ದರು. ಆನಂದ ಜಿಲ್ಲೆಯ ಬೋರ್ಸದ್ ನಗರ ಮೂಲದ ಸೋಲಂಕಿ ಅವರು ಗಾಂಧಿನಗರದಲ್ಲಿ ವಾಸಿಸುತ್ತಿದ್ದರು. ತಮ್ಮ ನಿವಾಸದಲ್ಲಿ ಶನಿವಾರ ಅವರು ನಿಧನರಾಗಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಹಿರಿಯ ಕಾಂಗ್ರೆಸ್ ಮುಖಂಡ ಬೂಟಾ ಸಿಂಗ್ ನಿಧನ

1976ರಲ್ಲಿ ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾದ ಸೋಲಂಕಿ ಅವರು 1985ರಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ 182ರಲ್ಲಿ 149 ಸ್ಥಾನಗಳನ್ನು ಗಳಿಸಿ ಕಾಂಗ್ರೆಸ್ ನ ಅತಿ ದೊಡ್ಡ ಗೆಲುವಿಗೆ ಕಾರಣರಾಗಿದ್ದರು. 1988ರಿಂದ 1994ರವರೆಗೂ ರಾಜ್ಯ ಸಭೆ ಸದಸ್ಯರಾಗಿದ್ದರು. ನರಸಿಂಹರಾವ್ ಅಧಿಕಾರಾವಧಿಯಲ್ಲಿ ವಿದೇಶಿ ವ್ಯವಹಾರಗಳ ಸಚಿವರಾಗಿ ನೇಮಕಗೊಂಡಿದ್ದರು.

ಮೋದಿ ಸಂತಾಪ: ಮಾಧವ ಸಿನ್ಹ ಸೋಲಂಕಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. "ಮಾಧವ ಸಿನ್ಹ ಸೋಲಂಕಿ ಅವರು ಅದ್ಭುತ ನಾಯಕರಾಗಿದ್ದರು. ಗುಜರಾತ್ ರಾಜಕೀಯದಲ್ಲಿ ದಶಕಗಳ ಕಾಲ ಪ್ರಮುಖ ಪಾತ್ರ ವಹಿಸಿದ್ದರು. ಸಮಾಜದೆಡೆಗಿನ ಅವರ ಸಮೃದ್ಧ ಸೇವೆಗೆ ಅವರು ಸ್ಮರಣೀಯರಾಗಿದ್ದಾರೆ. ಅವರ ಪುತ್ರ ಭಾರತ್ ಸೋಲಂಕಿ ಜೊತೆ ಮಾತನಾಡಿದ್ದು, ಸಂತಾಪ ಸೂಚಿಸಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

English summary
Madhavsinh Solanki, veteran Congress leader and former External Affairs Minister of India, who also served as Gujarat chief minister four times, passed away on Saturday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X