ಕ್ವಾರಂಟೈನ್‌ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿಗಳನ್ನು ಎಸೆದ್ರು!

ನವದೆಹಲಿ, ಏಪ್ರಿಲ್ 8: ಒಂದೆಡೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕು. ಇನ್ನೊಂದೆಡೆ ದೆಹಲಿಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ದಾಖಲಾಗಿರುವ ತಬ್ಲಿಘಿಗಳು ನರ್ಸ್, ವೈದ್ಯರಿಗೆ ಕೊಡುತ್ತಿರುವ ತೊಂದರೆ. ಈಗ ದೆಹಲಿಯ ಕ್ವಾರಂಟೈನ್ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿಗಳನ್ನು ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್‌ನಲ್ಲಿ ಫ್ಲಾಟ್ ನಂಬರ್‌ನ್ನು ದಾಖಲಿಸಲಾಗಿದ್ದು, ಅಲ್ಲಿರುವವರೇ ಈ ಕೃತ್ಯವೆಸಗಿರುವುದಾಗಿ ಶಂಕಿಸಲಾಗಿದೆ.

ಮೂತ್ರ ತುಂಬಿದ ಬಾಟಲಿಗಳನ್ನು ಎಸೆದು ಇತರೆ ಜನರಿಗೆ ಕೊರೊನಾ ಹರಡುವ ಉದ್ದೇಶದಿಂದ ಹೋಗೆ ಮಾಡಿರಬಹುದು ಎಂದು ಉಲ್ಲೇಖಿಸಲಾಗಿದೆ.

ದೆಹಲಿಯ ದ್ವಾರಕದ ಸೆಕ್ಟರ್ 16

ದೆಹಲಿಯ ದ್ವಾರಕದ ಸೆಕ್ಟರ್ 16

ದೆಹಲಿಯ ದ್ವಾರಕಾದ ಸೆಕ್ಟರ್ 16ರಲ್ಲಿರುವ ಕ್ವಾರಂಟೈನ್ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿಗಳನ್ನು ಪಕ್ಕದ ಪ್ರದೇಶಗಳಿಗೆ ತೂರಿದ್ದಾರೆ. ಈ ಘಟನೆಯ ಸಂಬಂಧ ಇನ್ನೂ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಬುಧವಾರ ಪೊಲೀಸರು ತಿಳಿಸಿದ್ದಾರೆ.

ಕ್ವಾರಂಟೈನ್ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿ ಎಸೆತ

ಕ್ವಾರಂಟೈನ್ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿ ಎಸೆತ

ಕ್ವಾರಂಟೈನ್ ಕೇಂದ್ರದಿಂದ ಕೆಲವರು ಮೂತ್ರ ತುಂಬಿದ ಬಾಟಲಿಗಳನ್ನು ಎಸೆದಿದ್ದಾರೆ. ಎಂದು ಆಶ್ರಯ ಸುಧಾರಣಾ ಮಂಡಳಿಯ ಸಿಬ್ಬಂದಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಸುಧಾರಣಾ ಮಂಡಳಿ ಕಾರ್ಯಕರ್ತರೊಬ್ಬರು ಆ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಬ್ಲಿಘಿಗಳು ಕೇಂದ್ರದ ಮುಂಭಾಗದಲ್ಲೇ ಮಲ ವಿಸರ್ಜನೆ ಮಾಡಿದ್ದರು

ತಬ್ಲಿಘಿಗಳು ಕೇಂದ್ರದ ಮುಂಭಾಗದಲ್ಲೇ ಮಲ ವಿಸರ್ಜನೆ ಮಾಡಿದ್ದರು

ಇತ್ತೀಚೆಗಷ್ಟೇ ತಬ್ಲಿಘಿ ಜಮಾತ್ ಸದಸ್ಯರು ದೆಹಲಿಯ ಕ್ವಾರಂಟೈನ್ ಸೆಂಟರ್‌ನ ಕೊಠಡಿಯ ಮುಂಭಾಗದಲ್ಲೇ ಮಲ ವಿಸರ್ಜನೆ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಂಪ್‌ಹೌಸ್ ಸಮೀಪ ಘಟನೆ

ಪಂಪ್‌ಹೌಸ್ ಸಮೀಪ ಘಟನೆ

ದ್ವಾರಕಾದ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ಫ್ಲಾಟ್ 16 ಬಿ ಕ್ವಾರಂಟೈನ್ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ನಾಗರಿಕ ರಕ್ಷಣಾ ಸಿಬ್ಬಂದಿ ಘಟನೆ ಕುರಿತು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದರು. ಪಂಪ್ ಹೌಸ್ ಸಮೀಪ ಮೂತ್ರ ತುಂಬಿದ ಬಾಟಲಿಗಳನ್ನು ಎಸೆಯಲಾಗಿದೆ. ಅವುಗಳನ್ನು ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳೇ ಮಾಡಿದ್ದಾರೆ ಎಂದು ದೂರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+