ಬಜೆಟ್ 2019: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ತೀವ್ರಗತಿ
ನವದೆಹಲಿ, ಜುಲೈ 05: ಮೋದಿ ಸರ್ಕಾರದ ಅತ್ಯಂತ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಮತ್ತಷ್ಟು ತೀವ್ರಗತಿ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, 2020-22 ರ ಒಳಗಾಗಿ ಬರೋಬ್ಬರಿ 1.95 ಕೋಟಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್‌ನಲ್ಲಿ ಘೋಷಿಸಿದರು.
ಅಷ್ಟೆ ಅಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ಅವಧಿ 2015 ರಲ್ಲಿ 315 ದಿನಗಳಿತ್ತು, ಅದನ್ನು 2018-19 ರ ವೇಳೆಗೆ ಕೇವಲ 119 ದಿನಗಳಿಗೆ ಇಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಮನೆ ಬಾಡಿಗೆ ಕಾಯಿದೆಯಲ್ಲೂ ಕೆಲವು ಬದಲಾವಣೆ ಮಾಡುವ ಉದ್ದೇಶದ ಬಗ್ಗೆಯೂ ಪ್ರಸ್ತಾಪ ಮಾಡಿದ ನಿರ್ಮಲಾ ಸೀತಾರಾಂನ್, ಈಗಿನ ಬಾಡಿಕೆ ಕರಾರು ಬಾಡಿಗೆದಾರರ ಮನೆಮಾಲಿಕರ ನಡುವಿನ ಸಂಬಂಧವನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲವೆಂದು ಹೇಳಿದರು.
ಕಡಿಮೆ ವೆಚ್ಚದ ಮನೆ ನಿರ್ಮಾಣದ ಬಗ್ಗೆ ಕೇಂದ್ರವು ಅತ್ಯಂತ ಆಸಕ್ತಿ ಹೊಂದಿರುವುದನ್ನು ಸೂಚ್ಯಗೊಳಿಸಿದ ನಿರ್ಮಲಾ ಸೀತಾರಾಮನ್, ಕಡಿಮೆ ವೆಚ್ಚದ ಮನೆಗಳಿಗೆ ಮೂಲಸೌಕರ್ಯದ ಮಾನ್ಯತೆ ನೀಡಿರುವುದಾಗಿ ಹೇಳಿದರು.












Click it and Unblock the Notifications