ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ದೆಹಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ

|
Google Oneindia Kannada News

ನವದೆಹಲಿ, ಏಪ್ರಿಲ್ 25; ನವದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳಡಿ ಸಿಲುಕಿದ್ದ 5 ಜನರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ.

ಸೋಮವಾರ ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿತ್ತು. ಅಗ್ನಿ ಶಾಮಕದಳದ 6 ವಾಹನಗಳು ಸ್ಥಳಕ್ಕೆ ತೆರಳಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು. ಅವಶೇಷಗಳನ್ನು ತೆರವುಗೊಳಿಸಲು ಜೆಸಿಬಿಗಳ ಸಹಾಯವನ್ನು ಪಡೆಯಲಾಗಿತ್ತು.

ಜಹಾಂಗೀರ್‌ಪುರಿ ಹಿಂಸಾಚಾರ ಘಟನೆಗೂ ಕಟ್ಟಡ ತೆರವು ಕಾರ್ಯಾಚರಣೆಗೂ ಏನು ಸಂಬಂಧ? ಜಹಾಂಗೀರ್‌ಪುರಿ ಹಿಂಸಾಚಾರ ಘಟನೆಗೂ ಕಟ್ಟಡ ತೆರವು ಕಾರ್ಯಾಚರಣೆಗೂ ಏನು ಸಂಬಂಧ?

ಕಟ್ಟಡದ ಅವೇಶಷಗಳಡಿ ಐವರು ಕಾರ್ಮಿಕರು ಸಿಲುಕಿದ್ದಾರೆ ಎಂದು ಶಂಕಿಸಲಾಗಿತ್ತು. ಸಂಜೆಯ ವೇಳೆಗೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮೂವರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರು ಮೃತಪಟ್ಟಿದ್ದಾರೆ.

45 ದಿನಗಳಲ್ಲಿ ನಿರ್ಮಿಸಿದ ಡಿಆರ್‌ಡಿಓದ ಫ್ಲೈಟ್ ಕಂಟ್ರೋಲ್ ಸಿಸ್ಟಂ ಕಟ್ಟಡ ಉದ್ಘಾಟನೆ45 ದಿನಗಳಲ್ಲಿ ನಿರ್ಮಿಸಿದ ಡಿಆರ್‌ಡಿಓದ ಫ್ಲೈಟ್ ಕಂಟ್ರೋಲ್ ಸಿಸ್ಟಂ ಕಟ್ಟಡ ಉದ್ಘಾಟನೆ

Under Construction Building Collapsed 5 Feared To Be Trapped

ಕಟ್ಟಡದ ಅವಶೇಷಗಳಡಿ 5 ಜನರು ಸಿಲುಕಿದ್ದಾರೆ ಎಂದು ದೆಹಲಿ ಅಗ್ನಿ ಶಾಮಕದ ದಳದ ಅಧಿಕಾರಿಗಳು ಹೇಳಿದ್ದರು. ಸಂಜೆ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುರುಗ್ರಾಮ್ ಕಟ್ಟಡ ಕುಸಿತದಲ್ಲಿ ಒಬ್ಬ ಮಹಿಳೆ ಸಾವು, ಇಬ್ಬರು ಸಿಲುಕಿರುವ ಶಂಕೆ ಗುರುಗ್ರಾಮ್ ಕಟ್ಟಡ ಕುಸಿತದಲ್ಲಿ ಒಬ್ಬ ಮಹಿಳೆ ಸಾವು, ಇಬ್ಬರು ಸಿಲುಕಿರುವ ಶಂಕೆ

ಎನ್‌ಡಿಆರ್‌ಎಫ್ ಪಡೆಗಳ ಸಹಾಯವನ್ನು ಸಹ ರಕ್ಷಣಾ ಕಾರ್ಯಾಚರಣೆಗೆ ಪಡೆದುಕೊಳ್ಳಲಾಗಿದೆ. ಘಟನೆ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿ ಪರಿಸ್ಥಿತಿ ಮಾಹಿತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದರು.

ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮನೆಯನ್ನು ಮರು ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಕಟ್ಟಡ ಅಪಾಯಕಾರಿ ವಲಯದಲ್ಲಿದೆ ಎಂದು ಮಾಲೀಕರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು.

ಮಾರ್ಚ್ 31ರಂದೇ ಕಟ್ಟಡ ಅಪಾಯದಲ್ಲಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದರು. ಆದರೆ ಮಾಲೀಕ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

English summary
New Delhi under-construction building collapsed in in the Satya Niketan area. 5 labours feared to be trapped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X