• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಸ್ಲಿಂ ಯವಕರ ವಿವಾಹಕ್ಕಾಗಿ ಮತಾಂತರ, ಪಾಕ್ ನಲ್ಲಿ ಅನಾಚಾರ

|

ನವದೆಹಲಿ, ಡಿಸೆಂಬರ್.16: ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ, ಪಕ್ಕದವರ ತಟ್ಟೆಯಲ್ಲಿ ನೊಣ ತೆಗೆಯಲಿಕ್ಕೆ ಹೋಗುತ್ತಾರೆ ಎಂಬ ಗಾದೆಮಾತು ಪಾಕಿಸ್ತಾನದ ಪಾಲಿಗೆ ಹೇಳಿ ಮಾಡಿಸಿದಂತಿದೆ.

ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ ನೆರೆರಾಷ್ಟ್ರ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಛೀಮಾರಿ ಹಾಕಿದೆ. ಧರ್ಮದ ಆಧಾರದಲ್ಲಿ ಪಾಕಿಸ್ತಾನದ ತಹ್ರೀಕ್-ಇ-ಇನ್ಸಾಫ್ ಸರ್ಕಾರ ಜನರ ಮೇಲೆ ಹಿಂಸಾಚಾರ ನಡೆಸಿದೆ ಎಂದು ವಿಶ್ವಸಂಸ್ಥೆಯ ಕಿಡಿ ಕಾರಿದೆ.

22 ವರ್ಷಗಳ ನಂತರ ಇಂಡೋ-ಪಾಕ್ ಗಡಿಯಲ್ಲಿ ರೈಲು ಸಂಚಾರ

ವಿಶ್ವಸಂಸ್ಥೆಗೆ ಸಲ್ಲಿಕೆಯಾಗಿರುವ 47 ಪುಟಗಳ ವರದಿಯಲ್ಲಿ ಈ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಾಗಿದೆ. ಪಾಕಿಸ್ತಾನದಲ್ಲಿ ಜಾತಿ-ಧರ್ಮದ ಆಧಾರದ ಮೇಲೆ ದೌರ್ಜನ್ಯ ನಡೆಸುತ್ತಿರುವ ಕುರಿತು ವಿಶ್ವಸಂಸ್ಥೆಯ ಸಾಮಾಜಿಕ ಆರ್ಥಿಕ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಎನಿಸಿರುವ ಹಿಂದೂಗಳು ಹಾಗೂ ಕ್ರಿಶ್ಚಿಯನ್ನರ ಮೇಲೆ ನಿರಂತರ ದೌರ್ಜನ್ಯ ಎಸಗಲಾಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ಪಾಕ್ ನಲ್ಲಿ ರಕ್ಷಣೆಯೇ ಇಲ್ಲದಂತೆ ಆಗಿದೆ. ಅಲ್ಪಸಂಖ್ಯಾತ ಯುವತಿಯರನ್ನು ಒತ್ತಾಯಪೂರ್ವಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ. ಹೀಗೆ ಮತಾಂತರಗೊಂಡ ಯುವತಿಯರನ್ನು ಮುಸ್ಲಿಂ ಯುವಕರೊಂದಿಗೆ ಮದುವೆ ಮಾಡಲಾಗುತ್ತಿದೆ. ಇಷ್ಟಲ್ಲದೇ ಯುವತಿಯರು ವಿವಾಹ ನಂತರ ತಮ್ಮ ಕುಟುಂಬದೊಂದಿಗೆ ಸಂಪರ್ಕ ಹೊಂದದಂತೆ ಒತ್ತಡ ಹೇರಲಾಗುತ್ತಿದೆ ಎಂದು ವಿಶ್ವಸಂಸ್ಥೆಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿಗಷ್ಟೇ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಕಟುವಾಗಿ ಟೀಕಿಸಿದ್ದರು. ಜಾತಿ-ಧರ್ಮದ ಆಧಾರದ ಮೇಲೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈಗ ವಿಶ್ವಸಂಸ್ಥೆಯ ವರದಿಯಿಂದ ಪಾಕ್ ಪ್ರಧಾನಿಗೆ ತೀವ್ರ ಮುಖಭಂಗವಾಗಿದೆ.

English summary
United Nations Body Slammed The Pakistan Over Discrimination Of Religious Minorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X