ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಗಂಗಾ: 200 ಭಾರತೀಯರನ್ನು ಹೊತ್ತು ಹಿಂಡನ್‌ ವಾಯುನೆಲೆಗೆ ಬಂದಿಳಿದ ಐಎಎಫ್‌ನ ಸಿ-17

|
Google Oneindia Kannada News

ನವದೆಹಲಿ, ಮಾರ್ಚ್ 03: ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ 200 ಭಾರತೀಯರೊಂದಿಗೆ ಭಾರತೀಯ ವಾಯುಪಡೆಯ (ಐಎಎಫ್) ಮೊದಲ ವಿಮಾನವು ಗುರುವಾರ ಮುಂಜಾನೆ ಇಲ್ಲಿನ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ ಎಂದು ಮೂಲಗಳು ತಿಳಿಸಿವೆ. ಸಿ-17 ಮಿಲಿಟರಿ ಸಾರಿಗೆ ವಿಮಾನವು ದೆಹಲಿಗೆ ಸುಮಾರು 1.30 ಗಂಟೆಗೆ ಬಂದಿಳಿದಿದೆ.

ಉಕ್ರೇನ್‌ನಿಂದ ಸರಿಸುಮಾರು 300 ಮಂದಿಯನ್ನು ಸ್ಥಳಾಂತರಿಸುವ ಮೂಲಕ ಭಾರತೀಯ ವಾಯುಪಡೆಯ ಇನ್ನೂ ಮೂರು ಸಿ -17 ವಿಮಾನಗಳು ಗುರುವಾರ ಬೆಳಗ್ಗೆ 8 ಗಂಟೆಗೆ ಹಿಂಡನ್ ವಾಯುನೆಲೆಗೆ ಇಳಿಯಲಿವೆ ಎಂದು ಮೂಲಗಳು ತಿಳಿಸಿವೆ.

ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆಗೆ ವಾಯುಪಡೆ ಬೆಂಬಲಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆಗೆ ವಾಯುಪಡೆ ಬೆಂಬಲ

ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ, ಸಂಘರ್ಷ ಪೀಡಿತ ಉಕ್ರೇನ್‌ನಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು 'ಆಪರೇಷನ್ ಗಂಗಾ'ವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ಕೆ ವಾಯುಪಡೆಯು ಜೊತೆಯಾಗಿದೆ.

ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕಿಯಾ ಗಡಿ ದಾಟಿದ ಬಳಿಕ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಈ ನೆರೆಯ ದೇಶಗಳಿಂದಲೂ ಐಎಎಫ್ ವಿಮಾನಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಮೊದಲ C-17 ವಿಮಾನದಲ್ಲಿ ಬಂದ ಭಾರತೀಯರನ್ನು ವಾಯುನೆಲೆಯಲ್ಲಿ ಸ್ವಾಗತಿಸಿದರು.

Ukraine-Russia War: IAF’s First Evacuation Flight With 200 Indians Lands in Delhi

ಸುಮಾರು 8,000 ಭಾರತೀಯರು, ಮುಖ್ಯವಾಗಿ ವಿದ್ಯಾರ್ಥಿಗಳು, ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಂಗಳವಾರ ಹೇಳಿದ್ದಾರೆ. ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಉಕ್ರೇನ್‌ನ ಪಶ್ಚಿಮ ನೆರೆಹೊರೆಯ ನಾಲ್ವರು ಕೇಂದ್ರ ಸಚಿವರು ಹೋಗಿದ್ದಾರೆ.

Operation Ganga: ಉಕ್ರೇನ್‌ನಿಂದ ಭಾರತೀಯರು ಕರೆತರುವ 46 ವಿಮಾನಗಳ ಪೂರ್ಣ ವಿವರ ಇಲ್ಲಿದೆOperation Ganga: ಉಕ್ರೇನ್‌ನಿಂದ ಭಾರತೀಯರು ಕರೆತರುವ 46 ವಿಮಾನಗಳ ಪೂರ್ಣ ವಿವರ ಇಲ್ಲಿದೆ

'ಆಪರೇಷನ್ ಗಂಗಾ' ಮಿಷನ್‌ನ ಭಾಗವಾಗಿ ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನಲ್ಲಿ ಬಾಕಿಯಾಗಿರುವ ಭಾರತೀಯರನ್ನು ಉಚಿತವಾಗಿ, ಸರ್ಕಾರದ ವೆಚ್ಚದಲ್ಲಿ ವಾಪಾಸ್‌ ಕರೆತರಲಾಗು‌ತ್ತದೆ. ಉಕ್ರೇನ್‌ನಲ್ಲಿ ಸಿಲುಕಿದ್ದ 219 ಭಾರತೀಯ ಪ್ರಜೆಗಳನ್ನು ಹೊತ್ತು ಮೊದಲ ವಿಮಾನ ಫೆಬ್ರವರಿ 26 ರಂದು ಮುಂಬೈಗೆ ಬಂದಿಳಿಯಿತು. ಸದ್ಯ ಹಲವಾರು ಬಾರಿ ಈ ಕಾರ್ಯಾಚರಣೆ ನಡೆಯುತ್ತಲಿದೆ. ಜೊತೆಗೆ ವಾಯುಪಡೆಯು ಸೇರಿದೆ. ಹರ್ದೀಪ್ ಸಿಂಗ್ ಪುರಿ ಹಂಗೇರಿಯಲ್ಲಿದ್ದಾರೆ, ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾದಲ್ಲಿ, ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ ಮತ್ತು ವಿ ಕೆ ಸಿಂಗ್ ಪೋಲೆಂಡ್‌ನಲ್ಲಿದ್ದಾರೆ.

ಎರಡನೇ ಐಎಎಫ್‌ ವಿಮಾನ

ಮತ್ತೊಂದು ಭಾರತೀಯ ವಾಯುಪಡೆಯ ಸಿ17 ವಿಮಾನವು 220 ಭಾರತೀಯ ಪ್ರಯಾಣಿಕರನ್ನು ಹೊತ್ತು ಬಂದಿದೆ. ಈ ವಿಮಾನವು ಹಂಗೇರಿಯ ಬುಡಾಪೆಸ್ಟ್‌ನಿಂದ ಭಾರತೀಯರನ್ನು ಹೊತ್ತು ದೆಹಲಿ ಬಳಿಯ ಹಿಂಡಾನ್‌ನಲ್ಲಿ ತನ್ನ ತವರು ನೆಲೆಯಲ್ಲಿ ಇಳಿದಿದೆ. ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಮೊದಲ C-17 ವಿಮಾನದಲ್ಲಿ ಬಂದ ಭಾರತೀಯರನ್ನು ವಾಯುನೆಲೆಯಲ್ಲಿ ಸ್ವಾಗತಿಸಿದರು.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಭಾರತೀಯ ವಾಯುಪಡೆ ಕೂಡಾ ಬೆಂಬಲ ನೀಡಿದೆ. ಭಾರತೀಯ ವಾಯುಪಡೆಯ (ಐಎಎಫ್‌) ಸಿ-17 ವಿಮಾನವು ಬುಧವಾರ ಮುಂಜಾನೆ ರೊಮೇನಿಯಾಗೆ ಹೊರಟಿದ್ದು ಗುರುವಾರ ಮುಂಜಾನೆ ಭಾರತಕ್ಕೆ ಬಂದಿಳಿದಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಪ್ರಯತ್ನಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಾಯುಪಡೆಯ ಸಹಾಯವು ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ ಎಂದು ಹೇಳಿದ್ದರು.

ವಾಯುಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು ಮತ್ತು ಇದು ಮಾನವೀಯ ಸಹಾಯವನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: IAF’s first evacuation flight with 200 Indians lands in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X