• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ನೆಗೆಟಿವ್ ಇದ್ದರೂ ಕ್ವಾರಂಟೈನ್; ಕೋರ್ಟ್‌ ಮೊರೆ ಹೋದ ಕುಟುಂಬ

|

ನವದೆಹಲಿ, ಫೆಬ್ರವರಿ 23: ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದರೂ ನಮ್ಮನ್ನು ಅನಗತ್ಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಪಿಸಿ ಬ್ರಿಟನ್‌ನಿಂದ ಈಚೆಗೆ ಭಾರತಕ್ಕೆ ಹಿಂದಿರುಗಿದ ಕುಟುಂಬವೊಂದು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಇಬ್ಬರು ಮಕ್ಕಳನ್ನೊಳಗೊಂಡಂತೆ ಕುಟುಂಬದ ನಾಲ್ವರು ಈಚೆಗೆ ಬ್ರಿಟನ್‌ನಿಂದ ದೆಹಲಿಗೆ ಮರಳಿದ್ದರು. ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿತ್ತು. ನಂತರ ಎಲ್ಲರನ್ನೂ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹೀಗಾಗಿ ಇದನ್ನು "ಅಕ್ರಮ ಬಂಧನ" ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

 ನ್ಯಾಯಾಧೀಶರ ನೋಟೀಸ್

ನ್ಯಾಯಾಧೀಶರ ನೋಟೀಸ್

ನಾಗರಿಕ ವಿಮಾನಯಾನ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್ ನೋಟೀಸ್ ನೀಡಿದ್ದಾರೆ. ದೆಹಲಿಯ ದ್ವಾರಕಾದಲ್ಲಿನ ಪ್ರಸಿದ್ಧ ಹೋಟೆಲ್‌ ನಲ್ಲಿ ಕ್ವಾರಂಟೈನ್ ಇರುವ ಈ ಕುಟುಂಬದ ಮನವಿ ಕುರಿತು ತನ್ನ ನಿಲುವನ್ನು ಪ್ರಕಟಿಸುವಂತೆ ದೆಹಲಿ ಸರ್ಕಾರಕ್ಕೂ ಸೂಚಿಸಿದ್ದಾರೆ.

ಯುಕೆಯಿಂದ ಬಂದವರಿಗೆ ಕೊವಿಡ್ 19 ಪರೀಕ್ಷೆ ಮೂಲಕ ಸ್ವಾಗತ

"ಕಾನೂನಿಗೆ ವಿರುದ್ಧವಾದ ಕ್ವಾರಂಟೈನ್ ಇದು"

ಈ ಕುಟುಂಬದ ಪರವಾಗಿ ವಕೀಲ ಗಣೇಶ್ ಚಾಂದ್ ಶರ್ಮಾ ವಾದಿಸಿದ್ದು, ಬ್ರಿಟನ್‌ನಿಂದ ಫೆಬ್ರವರಿ 20ರಂದು ದೆಹಲಿಗೆ ಈ ನಾಲ್ವರು ಮರಳಿದ್ದು, ಅವರೆಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. ವರದಿ ಕೂಡ ನೆಗೆಟಿವ್ ಬಂದಿದೆ. ಆದರೆ ಅವರನ್ನು ಅಕ್ರಮವಾಗಿ ಹಾಗೂ ಕಾನೂನಿಗೆ ವಿರುದ್ಧವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದಿದ್ದಾರೆ.

 ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆರೋಪ

ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆರೋಪ

ದೆಹಲಿ ಏರ್‌ಪೋರ್ಟ್‌ ವೆಬ್‌ಸೈಟ್ ನಲ್ಲಿ ಪ್ರಕಟಿಸಿರುವ ಕೊರೊನಾ ಮಾರ್ಗಸೂಚಿ ಪ್ರಕಾರ ಇದು ಅಕ್ರಮವಾಗಿದೆ. ಬ್ರಿಟನ್‌ನಿಂದ ಬರುವ ಎಲ್ಲಾ ಪ್ರಯಾಣಿಕರಿಗೂ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಲ್ಲ. ಕೊರೊನಾ ಪಾಸಿಟಿವ್ ಬಂದವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ದೆಹಲಿಗೆ ಬರುವ ಮುನ್ನ ಪರೀಕ್ಷೆ ನಡೆಸಿದ್ದು, ಅವರು ವಿಮಾನ ಪ್ರಯಾಣಕ್ಕೆ ಅರ್ಹ ಎಂದು ಹೇಳಿದ್ದಾರೆ. ದೆಹಲಿಗೆ ಬಂದ ನಂತರವೂ ಅವರನ್ನು ಪರೀಕ್ಷಿಸಲಾಗಿದೆ. ಇದರ ಹೊರತಾಗಿಯೂ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಅವರ ಖರ್ಚಿನಲ್ಲೇ ಇರಲು ಸೂಚಿಸಲಾಗಿದೆ. ಇದು ಎಷ್ಟು ಸರಿ ಎಂದು ವಕೀಲರು ಕೇಳಿದ್ದಾರೆ.

 ಎರಡು ಸರ್ಕಾರಗಳಿಂದ ಪರಿಹಾರಕ್ಕೆ ಆಗ್ರಹ

ಎರಡು ಸರ್ಕಾರಗಳಿಂದ ಪರಿಹಾರಕ್ಕೆ ಆಗ್ರಹ

ಇವರನ್ನು ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಿ, ಕ್ವಾರಂಟೈನ್ ಇರುವ ಹೋಟೆಲ್‌ ಖರ್ಚನ್ನು ಕೇಂದ್ರ ಹಾಗೂ ದೆಹಲಿ ಸರ್ಕಾರವೇ ಭರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅಧಿಕಾರಿಗಳ ತಪ್ಪು ಕೃತ್ಯ ಹಾಗೂ ನಡವಳಿಕೆಯಿಂದ ಅನುಭವಿಸಿದ ನೋವು ಹಾಗೂ ಸಂಕಟಕ್ಕೆ ಎರಡೂ ಸರ್ಕಾರಗಳಿಂದ ಪರಿಹಾರ ಕೊಡಬೇಕಿದೆ ಎಂದು ಕೇಳಿಕೊಳ್ಳಲಾಗಿದೆ.

English summary
A family returned from britain to delhi claimed quarantine as "illegal confinement" as they had tested negative for COVID-19 and moved to high court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X