ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

75 ಮಂದಿಗೆ ಕೊರೊನಾ ಸೋಂಕು, ದೆಹಲಿ ಹೆದ್ದಾರಿಯ 2 ಡಾಬಾಗಳು ಬಂದ್

|
Google Oneindia Kannada News

ದೆಹಲಿ, ಸೆಪ್ಟೆಂಬರ್ 04: ಹರ್ಯಾಣ ದೆಹಲಿ ಹೆದ್ದಾರಿಯಲ್ಲಿರುವ ಡಾಬಾಗಳಲ್ಲಿರುವ 75 ಮಂದಿ ಕೊರೊನಾ ಸೋಂಕು ತಗುಲಿದ್ದು, ಎರಡು ಡಾಬಾಗಳನ್ನು ಬಂದ್ ಮಾಡಿಸಲಾಗಿದೆ.

Recommended Video

Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ?| Oneindia Kannada Kannada

ಸೋನಿಪತ್ ಡೆಪ್ಯೂಟಿ ಕಮಿಷನರ್ ಶ್ಯಾಮ್ ಲಾಅಲ್ ಪೂನಿಯಾ ಮಾತನಾಡಿ, ಅಮ್ರಿಕ್ ಸುಖದೇವ್ ಡಾಬಾದಲ್ಲಿ 65 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಕೊವಿಡ್-19 ಪ್ರಕರಣ: ಬ್ರಿಜಿಲ್ ನ್ನೂ ಹಿಂದಿಕ್ಕುತ್ತಾ ಭಾರತ? ಕೊವಿಡ್-19 ಪ್ರಕರಣ: ಬ್ರಿಜಿಲ್ ನ್ನೂ ಹಿಂದಿಕ್ಕುತ್ತಾ ಭಾರತ?

ಮತ್ತೊಂದು ದೆಹಲಿಯಿಂದ 50 ಕಿ.ಮೀ ದೂರದಲ್ಲಿರುವ ಮೂರ್ಥಾಲ್‌ನಲ್ಲಿರುವ ಡಾಬಾವನ್ನು ಕೂಡ ಬಂದ್ ಮಾಡಲಾಗಿದೆ.

Two Highway Dhabas Near Delhi Sealed After 75 Test Covid Positive

ಆ ಎರಡು ಡಾಬಾವನ್ನು ಸ್ಯಾನಿಟೈಸ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸೋನಪತ್ ಜಿಲ್ಲಾಡಳಿತವು ಎಲ್ಲಾ ಡಾಬಾಗಳಿಗೆ ತೆರಳಿ ಕೊರೊನಾ ಪರೀಕ್ಷೆ ಮಾಡುತ್ತಿದೆ.

ಉಳಿದ ಡಾಬಾಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಹರ್ಯಾಣಾದಲ್ಲಿ ಒಂದೇ ದಿನ 1881 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ.

ಅಸ್ಸಾಂನಲ್ಲಿ ಪುಟ್ಟ ಮಕ್ಕಳಿಗಾಗಿ ವಿಶೇಷ ಕೊವಿಡ್-19 ಕೇರ್ ಅಸ್ಸಾಂನಲ್ಲಿ ಪುಟ್ಟ ಮಕ್ಕಳಿಗಾಗಿ ವಿಶೇಷ ಕೊವಿಡ್-19 ಕೇರ್

ಭಾರತದಲ್ಲಿ ಈಗಾಗಲೇ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 39,36,748ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ ಭಾರತದಲ್ಲಿ 83341 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ.

ಕಳೆದ 24 ಗಂಟೆಗಳಲ್ಲೇ 1096 ಜನರು ಪ್ರಾಣ ಬಿಟ್ಟಿದ್ದು, ಇದುವರೆಗೂ 68,472 ಜನರು ಕೊವಿಡ್-19ಗೆ ಬಲಿಯಾಗಿದ್ದಾರೆ. ಒಟ್ಟು 39,36,748 ಕೊರೊನಾವೈರಸ್ ಸೋಂಕಿತರ ಪೈಕಿ 30,37,152 ಜನರು ಗುಣಮುಖರಾಗಿದ್ದು, 8,31,124 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

English summary
Two food joints in Haryana's Murthal were sealed on Thursday after 75 workers tested positive for COVID-19, a senior official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X