"ತುಕಡೆ ತುಕಡೆ ಗ್ಯಾಂಗ್ ಬಗ್ಗೆ ಉಲ್ಲೇಖವೇ ಇಲ್ಲ"

ನವದೆಹಲಿ, ಫೆಬ್ರವರಿ.11: ದೇಶದಲ್ಲಿ ತುಕಡೆ ತುಕಡೆ ಗ್ಯಾಂಗ್ ಎಂಬುದು ಇರುವುದರ ಬಗ್ಗೆಯೇ ಮಾಹಿತಿಯಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸಂಸತ್ ನಲ್ಲಿ ಲಿಖಿತ ಪ್ರಶ್ನೆಗೆ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ.ಕೃಷ್ಣನ್ ರೆಡ್ಡಿ ಉತ್ತರ ನೀಡಿದರು.

ಭಾರತೀಯ ಜನತಾ ಪಕ್ಷದ ಕೆಲವು ನಾಯಕರು ಎಡಪಂಥೀಯ ಕಾರ್ಯಕರ್ತರ ಗುಂಪನ್ನು ತುಕಡೆ ತುಕಡೆ ಗ್ಯಾಂಗ್ ಎಂಬ ಪದದಿಂದ ಕರೆಯುತ್ತಾರೆ. ಇದನ್ನು ಹೊರತಾಗಿ ಬೇರೆ ಎಲ್ಲಿಯೂ ಈ ಪದದ ಬಗ್ಗೆ ಉಲ್ಲೇಖವಿಲ್ಲ ಎಂದು ಜಿ.ಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.

ಇನ್ನು, ಬಿಜೆಪಿ ನಾಯಕರ ಹೇಳಿಕೆಗಳಲ್ಲಿ ಉಲ್ಲೇಖಿಸುವ ತುಕಡೆ ತುಕಡೆ ಗ್ಯಾಂಗ್ ಬಗ್ಗೆ ಭಾರತದಲ್ಲಿ ಕಾನೂನು ಜಾರಿಗೊಳಿಸುವಂತಾ ಯಾವುದೇ ಸಂಸ್ಥೆಗಳ ದಾಖಲೆಯಲ್ಲೂ ಉಲ್ಲೇಖವಾಗಿಲ್ಲ ಎಂದು ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.

Tukde Tukde Gang: No Information About This Group

ಕೇಂದ್ರವನ್ನು ಪ್ರಶ್ನಿಸಿದ ಇಬ್ಬರು ಸಂಸದರು:

ಬಿಜೆಪಿ ನಾಯಕರು ಹೇಳುವಂತೆ ತುಕಡೆ ತುಕಡೆ ಗ್ಯಾಂಗ್ ಗಳು ದೇಶದಲ್ಲಿ ಇವೆಯೇ ಇಲ್ಲವೇ. ಇದ್ದರೆ ಅವುಗಳನ್ನು ಹೇಗೆ ಗುರುತಿಸುತ್ತೀರಿ. ಅದರ ಬಗ್ಗೆ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಿದ್ದಾರಾ ಎಂದು ಕಾಂಗ್ರೆಸ್ ನ ಇಬ್ಬರು ಸಂಸದರು ಪ್ರಶ್ನೆ ಮಾಡಿದ್ದರು. ವಿಂಸೆಂಟ್ ಹೆಚ್ ಪಾಲಾ ಮತ್ತು ಜಸ್ಬೀರ್ ಸಿಂಗ್ ಗಿಲ್ ಕೇಳಿದ ಪ್ರಶ್ನೆಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ.ಕೃಷ್ಣನ್ ರೆಡ್ಡಿ ಉತ್ತರ ನೀಡಿದರು. ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ (ಎನ್ ಸಿಆರ್ ಬಿ) ಆದಿಯಾಗಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾನೂನು ಜಾರಿಗೊಳಿಸುವಂತಾ ಯಾವುದೇ ಸಂಸ್ಥೆಗಳಲ್ಲಿ ಈ ಪದದ ಬಗ್ಗೆ ಉಲ್ಲೇಖವಿಲ್ಲ ಎಂದು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+