ದೆಹಲಿಯಲ್ಲಿ ಮಂಜಿನಕಾಟಕ್ಕೆ ಕೆಲ ರೈಲು ಸಂಚಾರ ರದ್ದು
ನವದೆಹಲಿ, ನವೆಂಬರ್ 25: ರಾಜಧಾನಿ ದೆಹಲಿಯನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಮಂಜು ಮತ್ತು ಮಾಲಿನ್ಯ ಅಲ್ಲಿನ ಜನಜೀವನವನ್ನು ಅಸ್ತವ್ಯಸ್ಥಗೊಳಿಸುತ್ತಿದೆ.
ಮಂಜಿನಿಂದಾಗಿ ದೆಹಲಿಯ ಸಂಚಾರ ವ್ಯವಸ್ಥೆ ಅಸ್ಥವ್ಯಸ್ತವಾಗಿದ್ದು, ನವೆಂಬರ್ 25ರ ಶನಿವಾರವೂ ಸಹ ದೆಹಲಿಯಲ್ಲಿ ದಟ್ಟ ಮಂಜಿನ ಆಟ ಮುಂದುವರೆದಿದೆ. ಇದರಿಂದಾಗಿ 33 ರೈಲುಗಳು ಸಮಯಕ್ಕಿಂತ ತಡವಾಗಿ ಸಂಚರಿಸಲಿದ್ದು, ಇನ್ನು ಮೂರು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದರಿಂದ ಜನರು ಖಾಸಗಿ ವಾಹನಗಳನ್ನು ಬಳಸುವುದೂ ಅಪಾಯಕಾರಿಯಾಗಿ ಪರಿಣಮಿಸಿದೆ.












Click it and Unblock the Notifications