ಮೋದಿ ಸರ್ಕಾರ 2.0: ಪ್ರಧಾನಿಗೆ ಶುಭ ಕೋರಿದ ಜೆಪಿ ನಡ್ಡಾ
ನವದೆಹಲಿ, ಮೇ 30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ಯಶಸ್ವಿ ಒಂದು ವರ್ಷ ಪೂರೈಸಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮೋದಿ ಅವರನ್ನು ಅಭಿನಂದಿಸಿದ್ದಾರೆ.
Recommended Video
ಶನಿವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಶ್ಲಾಘಿಸಿದ್ದಾರೆ. 'ಮೋದಿ ಜಿ ಅವರ 2.0 ಸರ್ಕಾರದ ಈ ವರ್ಷವು ಅನೇಕ ಸಾಧನೆಗಳಿಂದ ಕೂಡಿದೆ. ಇದೊಂದು ಐತಿಹಾಸಿಕ ಮತ್ತು ಅಭೂತಪೂರ್ವ " ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ, ಮೋದಿ ಆಡಳಿತದಲ್ಲಿ ದೇಶ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೊಗಳಿದ್ದಾರೆ.
आदरणीय प्रधानमंत्री श्री @narendramodi जी के नेतृत्व में देश के सर्वांगीण विकास के लिए समर्पित सरकार के द्वितीय कार्यकाल का सफल एक वर्ष पूर्ण होने होने पर, मैं प्रधानमंत्री जी और सरकार के सभी सदस्यों को हृदय से बधाई देता हूँ। मोदी जी की सरकार का यह साल अनेक उपलब्धियों से भरा है।
— Jagat Prakash Nadda (@JPNadda) May 30, 2020
"ಮೋದಿ ಅವರ ದೂರದೃಷ್ಟಿಯ ನೀತಿಗಳು, ಟೀಮ್ ಇಂಡಿಯಾ ಎನ್ನುವ ಅವರ ಮನೋಭಾವ ದೇಶವನ್ನು ಬಲಪಡಿಸಿದೆ. ಈ ಮೂಲಕ ಪ್ರಜಾಪ್ರಭುತ್ವಕ್ಕೆ ಹೊಸ ಅರ್ಥ ನೀಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅವರ ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ಕಂಡುಬರುತ್ತದೆ'' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

"ತಮ್ಮ ಸರ್ಕಾರದ ಎರಡನೇ ಅವಧಿಯ ಒಂದು ವರ್ಷದ ಅವಧಿ ಪೂರ್ಣಗೊಂಡಿದೆ" ಎಂದು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಪರವಾಗಿ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.












Click it and Unblock the Notifications