• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ದಾಳಿಗೆ ಡೇಂಜರ್ ಝೋನ್‌ ಪ್ರವೇಶಿಸಿರುವ ಭಾರತದ 5 ರಾಜ್ಯಗಳು

|

ದೆಹಲಿ, ಏಪ್ರಿಲ್ 10: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6412ಕ್ಕೆ ಏರಿಕೆಯಾಗಿದ್ದು, ಒಟ್ಟು 199 ಮಂದಿ ಸೋಂಕಿನಿಂದ ಹೊರಬರದೆ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 547 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 30 ಜನರು ಕೊವಿಡ್ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದ ಬಹುತೇಕ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹರಿಡಿದೆ. ಆದರೆ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ರಾಜಸ್ಥಾನ, ತೆಲಂಗಾಣ ಡೇಂಜರ್ ಝೋನ್‌ನಲ್ಲಿದ್ದು, ಕೊರೊನಾ ವಿಚಾರದಲ್ಲಿ ಹಾಟ್‌ಸ್ಪಾಟ್‌ ಎನಿಸಿಕೊಂಡಿದೆ.

ಕೊರೊನಾ ಕಡಿವಾಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಲ್ ಡೌನ್?ಕೊರೊನಾ ಕಡಿವಾಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಲ್ ಡೌನ್?

ಇಡೀ ದೇಶದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 59 ರಷ್ಟು ಸೋಂಕಿತರು ಈ ಐದುಗಳಲ್ಲಿದ್ದಾರೆ. ಶೇಕಡಾ 64ರಷ್ಟು ಸಾವು ಇದೇ ಪ್ರದೇಶಗಳಲ್ಲಿ ಆಗಿದೆ. ಕ್ಷಣ ಕ್ಷಣಕ್ಕೂ ಈ ರಾಜ್ಯಗಳಲ್ಲಿ (ದೆಹಲಿ ಕೇಂದ್ರಾಡಳಿತ ಪ್ರದೇಶ) ಸೋಂಕು ಅಧಿಕವಾಗುತ್ತಿದೆ. ಹಾಗಿದ್ರೆ, ಈ ರಾಜ್ಯಗಳ ಅಂಕಿ-ಅಂಶಗಳು ಹೇಗಿವೆ? ಮುಂದೆ ಓದಿ...

ಕೊರೊನಾ ಹಾಟ್‌ಸ್ಪಾಟ್‌ ಮಹಾರಾಷ್ಟ್ರ

ಕೊರೊನಾ ಹಾಟ್‌ಸ್ಪಾಟ್‌ ಮಹಾರಾಷ್ಟ್ರ

ದೇಶದ ಪ್ರಮುಖ ವಾಣಜ್ಯ ನಗರಗಳನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯ, ಭಾರತದಲ್ಲಿ ಕೊರೊನಾ ಹಾಟ್‌ಸ್ಪಾಟ್‌ ಆಗಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಯವರೆಗೂ 1364 ಕೊರೊನಾ ಕೇಸ್‌ ದೃಢವಾಗಿದೆ. ಅದರಲ್ಲಿ 125 ಜನರು ಚೇತರಿಸಿಕೊಂಡಿದ್ದಾರೆ. ಇನ್ನು 93 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದ ಒಟ್ಟು ಸಾವಿನ ಸಂಖ್ಯೆಯಲ್ಲಿ 49 ರಷ್ಟು ಸಾವು ಮಹಾರಾಷ್ಟ್ರದಲ್ಲೇ ಆಗಿದೆ.

ತಮಿಳುನಾಡಿನಲ್ಲಿ ಅಚ್ಚರಿ ಏರಿಕೆ

ತಮಿಳುನಾಡಿನಲ್ಲಿ ಅಚ್ಚರಿ ಏರಿಕೆ

ಆರಂಭದಲ್ಲಿ ತಮಿಳುನಾಡು ಕೊರೊನಾ ವಿಚಾರದಲ್ಲಿ ನಿಯಂತ್ರಣದಲ್ಲಿತ್ತು. ಆದರೆ, ದೆಹಲಿ ಧಾರ್ಮಿಕ ಸಭೆಯ ಬಳಿಕ ತಮಿಳಿನಾಡಿನಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ತಮಿಳುನಾಡಿನಲ್ಲಿ 834 ಕೇಸ್ ದಾಖಲಾಗಿದ್ದು, ದೇಶದ ಒಟ್ಟು ಸೋಂಕಿತರಲ್ಲಿ ಶೇಕಡಾ 13ರಷ್ಟು ಸಂಖ್ಯೆ ಇಲ್ಲಿದೆ. ಒಟ್ಟು 8 ಜನರ ಸಾವನ್ನಪ್ಪಿದ್ದಾರೆ.

ಕೊರೊನಾ ಮಹಾಮಾರಿಗೆ ಇಟಲಿಯಲ್ಲಿ 100 ವೈದ್ಯರು ಬಲಿಕೊರೊನಾ ಮಹಾಮಾರಿಗೆ ಇಟಲಿಯಲ್ಲಿ 100 ವೈದ್ಯರು ಬಲಿ

ದೆಹಲಿ ಮೂರನೇ ಸ್ಥಾನ

ದೆಹಲಿ ಮೂರನೇ ಸ್ಥಾನ

ರಾಷ್ಟ್ರ ರಾಜಧಾನಿಯಲ್ಲೂ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ಇಡೀ ದೇಶದಲ್ಲಿ ಕೊರೊನಾ ಹರಡಲು ಕಾರಣವಾದ ತಬ್ಲೀಗ್ ಜಮಾತ್ ಸಭೆ ನಡೆದಿದ್ದು ದೆಹಲಿಯಲ್ಲಿ. ಇಲ್ಲಿಂದ ಭಾರತದ ವಿವಿಧ ರಾಜ್ಯಗಳಿಗೆ ಸೋಂಕು ಹರಡಲು ಸಾಧ್ಯವಾಗಿದೆ. ದೇಶದ ಒಟ್ಟು ಸೋಂಕಿತರಲ್ಲಿ 11 ರಷ್ಟು ದೆಹಲಿಯಲ್ಲಿ ವರದಿಯಾಗಿದೆ. ದೆಹಲಿಯಲ್ಲಿ 720 ಕೇಸ್ ದಾಖಲಾಗಿದ್ದು, 12 ಸಾವು ಸಂಭವಿಸಿದೆ.

ರಾಜಸ್ಥಾನದಲ್ಲಿ ಎಷ್ಟಿದೆ?

ರಾಜಸ್ಥಾನದಲ್ಲಿ ಎಷ್ಟಿದೆ?

ಇನ್ನು ದೇಶದ ಹಾಟ್‌ಸ್ಪಾಟ್‌ ನಗರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 463ಕ್ಕೆ ಏರಿದೆ. ದೇಶದ ಒಟ್ಟು ಸೋಂಕಿತರ ಪೈಕಿ 7.2 ರಷ್ಟು ಕೇಸ್‌ ಈ ರಾಜ್ಯದಲ್ಲಿದೆ. ಇದುವರೆಗೂ ರಾಜ್ಯದಲ್ಲಿ ಮೂರು ಜನರು ಮೃತಪಟ್ಟಿದ್ದಾರೆ.

ಕೊರೊನಾ ಸಮುದಾಯದಲ್ಲಿ ಹಬ್ಬುತ್ತಿದೆಯೇ?; ಐಸಿಎಂಆರ್ ವರದಿಕೊರೊನಾ ಸಮುದಾಯದಲ್ಲಿ ಹಬ್ಬುತ್ತಿದೆಯೇ?; ಐಸಿಎಂಆರ್ ವರದಿ

ತೆಲಂಗಾಣದಲ್ಲಿ ಎಷ್ಟಾಗಿದೆ?

ತೆಲಂಗಾಣದಲ್ಲಿ ಎಷ್ಟಾಗಿದೆ?

ದೇಶದ ಹಾಟ್‌ಸ್ಪಾಟ್‌ ರಾಜ್ಯಗಳ ಪೈಕಿ ಐದನೇ ಸ್ಥಾನದಲ್ಲಿರುವ ತೆಲಂಗಾಣದಲ್ಲಿ ಒಟ್ಟು 442 ಕೇಸ್ ದಾಖಲಾಗಿದೆ. ಈ ಐದು ರಾಜ್ಯಗಳು ಕೊರೊನಾಗೆ ಬಲಿಯಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

English summary
Maharashtra, Delhi, Telangana, Rajasthan, Tamilnadu is top five States in india more affected of COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X