ಡಿ.2 ಮಧ್ಯರಾತ್ರಿಯಿಂದ ಟೋಲ್ ಶುಲ್ಕ ವಿನಾಯಿತಿ ರದ್ದು

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್, 2: ಅಧಿಕ ಮುಖಬೆಲೆಯ ನೋಟುಗಳ ನಿಷೇಧ ಹಿನ್ನೆಲೆಯಲ್ಲಿ ನೀಡಿದ್ದ ಟೋಲ್ ಶುಲ್ಕ ವಿನಾಯಿತಿಯನ್ನು ಡಿಸೆಂಬರ್ 2 ಮಧ್ಯರಾತ್ರಿಯಿಂದ ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.

ಡಿಸೆಂಬರ್ ಮಧ್ಯರಾತ್ರಿಯಿಂದ ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಗೇಟ್ ಗಳಲ್ಲಿ ಟೋಲ್ ಶುಲ್ಕ ಪಾವತಿಸಬೇಕು ಎಂದು ಕೇಂದ್ರ ಭೂಸಾರಿಗೆ ಹೆದ್ದಾರಿ ಸಚಿವಾಲಯ ತಿಳಿಸಿದೆ.

Toll collection on national highways to resume from mid-night of Dec.2

ನೋಟು ನಿಷೇಧದಿಂದಾಗಿ ಚಿಲ್ಲರೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆ ಆಗದಂತೆ ಮುಂಜಾಗ್ರಾತಾ ಕ್ರಮವಾಗಿ ನವೆಂಬರ್ 24 ಮಧ್ಯರಾತ್ರಿ ವರೆಗೆ ಟೋಲ್ ಶುಲ್ಕ ಪಾವತಿಸುವಂತಿಲ್ಲ ಎಂದು ಕೇಂದ್ರ ಆದೇಶಿಸಿತ್ತು. ಮತ್ತೆ ಡಿಸೆಂಬರ್ 2ರ ಮಧ್ಯರಾತ್ರಿ ವರೆಗೆ ಅವಧಿಯನ್ನು ವಿಸ್ತರಿಸಿತ್ತು.

ಇನ್ನು ಡಿಸೆಂಬರ್, 2 ಮಧ್ಯರಾತ್ರಿಯಿಂದ ಡಿಸೆಂಬರ್ 15 ರವರೆಗೆ ನಿಷೇಧಿತ ಹಳೇ ನೋಟುಗಳನ್ನು ಟೋಲ್ ಶುಲ್ಕ ಪಾವತಿಗಾಗಿ ಬಳಸಬಹುದು ಸರ್ಕಾರ ತಿಳಿಸಿದೆ.

ಅಷ್ಟೇ ಅಲ್ಲದೆ ಚಿಲ್ಲರೆ ಸಮಸ್ಯೆ ಮತ್ತು ನಗದು ಸಮಸ್ಯೆ ಬಾಧಿಸದಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಸಹಕಾರದಲ್ಲಿ ಎಲ್ಲ ಟೋಲ್ ಕೇಂದ್ರಗಳಲ್ಲಿ ಸ್ವೈಪಿಂಗ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು

* ಎನ್ ಎಚ್-4: ನೆಲಮಂಗಲದಿಂದ ಮಹಾರಾಷ್ಟ್ರ ಗಡಿ
* ಎನ್ ಎಚ್ 4: ಕೆ.ಆರ್.ಪುರಂನಿಂದ ತಮಿಳುನಾಡು
* ಎನ್ ಎಚ್ 48: ನೆಲಮಂಗಲದಿಂದ ಹಾಸನ
* ಎನ್ ಎಚ್ 13: ವಿಜಯಪುರದಿಂದ ಕೊಪ್ಪಳ

ಬೆಂಗಳೂರಿನ ಪ್ರಮುಖ ಟೋಲ್ ಕೇಂದ್ರಗಳು

* ಎಲೆಕ್ಟ್ರಾನಿಕ್ ಸಿಟಿ ಎಕ್ಸ್ ಪ್ರೆಸ್ ಹೈವೇ
* ನೆಲಮಂಗಳ ಎಕ್ಸ್ ಪ್ರೆಸ್ ಹೈವೇ
* ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ವೇ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The toll collection on national highways, which was halted in the wake of withdrawal of high-value notes, will resume from the mid-night of December 2. A road ministry official said.
Please Wait while comments are loading...