ಸ್ನೇಹಿತನ ಪತ್ನಿ ಮೇಲೆ ವ್ಯಾಮೋಹ, ಆಕೆಯನ್ನು ಪಡೆಯಲು ಹೀಗೆ ಮಾಡೋದಾ

ನವದೆಹಲಿ, ಜೂನ್ 26: ಪರ ಸ್ತ್ರೀ ವ್ಯಾಮೋಹದಿಂದ ಆಕೆಯನ್ನು ಪಡೆದುಕೊಳ್ಳಲು ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ನವದೆಹಲಿಯಲ್ಲಿ ಮಂಗಳವಾರ ನಡೆದಿದೆ.

ರೈಲ್ವೆ ಹಳಿ ಬಳಿ ಸ್ನೇಹಿತನ ತಲೆಗೆ ಕಲ್ಲಿನಿಂದ ಹೊಡೆದು ಎಚ್ಚರತಪ್ಪಿಸಿ ಬಳಿಕ ರೈಲ್ವೆ ಹಳಿ ಮೇಲೆ ಮಲಗಿಸಿ ಅಲ್ಲಿಂದ ಪರಾರಿಯಾಗಿದ್ದ.

ಆರೋಪಿ ಗುಲ್ಕೇಶ್ ಹಾಗೂ ದಲ್ಬೀರ್ ಪ್ರಾಣ ಸ್ನೇಹಿತರಾಗಿದ್ದರು, ಗುಲ್ಕೇಶ್ ಸಾಮಾನ್ಯವಾಗಿ ದಲ್ಬೇಶ್ ಅವರ ಮನೆಗೆ ಹೋಗಿ ಬರುತ್ತಿದ್ದ, ಆತನ ಪತ್ನಿಯ ಮೇಲೆ ಒಂದು ಕಣ್ಣಿಟ್ಟಿದ್ದ, ಆಕೆಯನ್ನು ಪಡೆದುಕೊಳ್ಳಲೇಬೇಕು ಎನ್ನುವ ಹಠಕ್ಕೆ ಬಿದ್ದ ಗುಲ್ಕೇಶ್ ಸ್ನೇಹಿತನನ್ನೇ ಕೊಲೆ ಮಾಡುವ ಹಂತಕ್ಕೆ ತಲುಪಿದ್ದ.

To marry friends wife he killed her husband

ಆರೋಪಿ ಗುಲ್ಕೇಶ್‌ ರಾತ್ರಿ ಸ್ನೇಹಿತ ದಲ್ಬೀರ್ ನನ್ನು ಜಕೀರ ರೈಲು ನಿಲ್ದಾಣದ ಬಳಿ ಆಹ್ವಾನಿಸಿದ್ದ, ಬಳಿಕ ಆತನಿಗೆ ಕಲ್ಲಿನಿಂದ ತಲೆಗೆ ಹೊಡೆದು ಅಲ್ಲಿಯೇ ಬಿಟ್ಟು ಹೋಗಿದ್ದ. ರೈಲು ಹಳಿ ಮಧ್ಯೆ ಆತನನ್ನು ಮಲಗಿಸಿದ್ದರಿಂದ ಆತನ ದೇಹ ಇಬ್ಭಾಗವಾಗಿತ್ತು.

ಗುಲ್ಕೇಶ್ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರ ಹಾದಿ ತಪ್ಪಿಸಿದ್ದ, ವಿಚಾರಣೆ ವೇಳೆ ಗುಲ್ಕೇಶ್ ಮೊಬೈಲ್ ತೆಗೆದುಕೊಂಡು ಕಾಲ್ ರೆಕಾರ್ಡ್ಸ್ ಗಳನ್ನು ಚೆಕ್ ಮಾಡಿದಾಗ ಆತ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ.

ಗುಲ್ಕೇಶ್‌ನನ್ನು ದಲ್ಬೀರ್ ಪತ್ನಿ ಇಷ್ಟಪಡುತ್ತಿದ್ದರೂ ಕೂಡ ಆತನನ್ನು ಬಿಟ್ಟು ಗುಲ್ಕೇಶ್ ಜೊತೆಗೆ ಮದುವೆಯಾಗಲು ಒಪ್ಪಿರಲಿಲ್ಲ. ಹಾಗಾಗಿ ಗುಲ್ಕೇಶ್‌ನನ್ನು ಕೊಲೆ ಮಾಡಿದರೆ ಆತನ ಪತ್ನಿಯನ್ನು ಸುಲಭವಾಗಿ ತನ್ನವಳನ್ನಾಗಿಸಿಕೊಳ್ಳಬಹುದು ಎಂಬ ದುರಾಸೆಯಿಂದ ಈ ರೀತಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+